ಸಾಮಾನ್ಯ ಸಭೆಯಲ್ಲಿ ನಿರ್ಧಾರ

ಸೋಮವಾರಪೇಟೆ, ಆ. ೫: ಇಲ್ಲಿನ ಪಟ್ಟಣ ಪಂಚಾಯಿತಿಯಿAದ ಈ ಹಿಂದೆ ನಿವೇಶನ ರಹಿತರಿಗೆ ನೀಡಲಾಗಿದ್ದ ಜಾಗವನ್ನು ಕೆಲವರು ಪರಭಾರೆ ಮಾಡಿದ್ದಾರೆ. ಇನ್ನು ಕೆಲವರು ಮನೆ ನಿರ್ಮಿಸದೇ ಖಾಲಿ ಬಿಟ್ಟಿದ್ದು, ಅಂತಹ ನಿವೇಶನಗಳನ್ನು ಪತ್ತೆ ಹಚ್ಚಿ ಪಂಚಾಯಿತಿಗೆ ವಾಪಸ್ ಪಡೆಯಬೇಕೆಂದು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಇಲ್ಲಿನ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯರು, ಹಲವು ಫಲಾನುಭವಿಗಳು ನಿವೇಶನವನ್ನು ಪರಭಾರೆ ಮಾಡಿದ್ದು, ಇನ್ನು ಕೆಲವರು ನಿವೇಶನಗಳನ್ನು ಮಾರಿ ಊರು ಬಿಟ್ಟಿದ್ದಾರೆ. ಅಂತಹವರ ನಿವೇಶನವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಿವೇಶನ ರಹಿತರೆಂದು ಹಕ್ಕುಪತ್ರ ಪಡೆದುಕೊಂಡವರು ಪರಭಾರೆ ಮಾಡಿದ್ದಾರೆ. ಕೆಲವರು ಹಕ್ಕುಪತ್ರ ಇಲ್ಲದಿದ್ದರೂ ಮನೆಗೆ ಅಡಿಪಾಯ ಹಾಕಿದ್ದಾರೆ. ಇನ್ನು ಕೆಲವರು ಹೆಚ್ಚುವರಿಯಾಗಿ ಒತ್ತುವರಿ ಮಾಡಿದ್ದಾರೆ. ಇಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ನಾಮನಿರ್ದೇಶಿತ ಸದಸ್ಯ ಎಸ್. ಮಹೇಶ್ ಸೇರಿದಂತೆ ಇತರರು ಒತ್ತಾಯಿಸಿದರು.

ಪಂಚಾಯಿತಿ ನಿಯಮವನ್ನು ಪಾಲಿಸದ ಫಲಾನುಭವಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು. ನಿವೇಶನಕ್ಕಿಂತ ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡವರಿAದ ಹೆಚ್ಚಿನ ಮೌಲ್ಯವನ್ನು ಪಂಚಾಯಿತಿಗೆ ವಸೂಲಿ ಮಾಡುವಂತೆ ಸಭೆ ತೀರ್ಮಾನಿಸಿತು.

ಮಾರುಕಟ್ಟೆ ಏರಿಯಾದಲ್ಲಿ ಕೆಲವು ಮಳಿಗೆಗಳು ಇಂದಿಗೂ ನೆಲಬಾಡಿಗೆ ಆಧಾರದಲ್ಲಿ ಮುಂದುವರಿದಿದೆ. ಇನ್ನು ಕೆಲವರು ಅಂಗಡಿಗಳನ್ನು ಪರಭಾರೆ ಮಾಡಿದ್ದಾರೆ. ಸರಕಾರದ ಇತ್ತೀಚಿನ ಆದೇಶದ ಪ್ರಕಾರ ನೆಲಬಾಡಿಗೆ ಪಡೆಯುವಂತಿಲ್ಲ. ಇದರಿಂದ ಪಂಚಾಯಿತಿಗೆ ನಷ್ಟವಾಗುತ್ತಿದೆ. ಹೆಚ್ಚಿನ ಆದಾಯ ಮತ್ತು ಅಭಿವೃದ್ಧಿ ಹಾಗೂ ಪಟ್ಟಣದಲ್ಲಿ ಸುಸಜ್ಜಿತ ವಾಹನ ನಿಲುಗಡೆ ಉದ್ದೇಶಕ್ಕೆ, ಅಲ್ಲಿರುವ ಮಳಿಗೆಗಳನ್ನು ಪಂಚಾಯಿತಿಯ ಸುಪರ್ದಿಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು. ಮಳಿಗೆ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು ಶುಚಿತ್ವ ಕಾಪಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯೂ ಗುಡ್ಡಗಾಡು ಪ್ರದೇಶವಾಗಿದ್ದು, ಜನಸಂಖ್ಯೆಯ ಆಧಾರದ ಮೇಲೆ ಪೌರಕಾರ್ಮಿಕರನ್ನು ನೇಮಿಸದೆ, ವಿಸ್ತೀರ್ಣದ ಆಧಾರದ ಮೇಲೆ ನಿಯೋಜಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸದಸ್ಯ ಎಸ್. ಮಹೇಶ್ ಸಲಹೆ ನೀಡಿದರು.

ಪಂಚಾಯಿತಿಗೆ ಸರಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನ ಬಂದರೂ ನಾಮನಿರ್ದೇಶಿತ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಶಾಸಕರು ಸೂಚನೆ ನೀಡಿದ್ದರೂ ಇತ್ತೀಚೆಗೆ ರೂ. ೪೪ ಲಕ್ಷ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭ ಪಂಚಾಯಿತಿ ಆಡಳಿತ ಮಂಡಳಿಯವರು ಗೌಪ್ಯವಾಗಿ ಕ್ರಿಯಾಯೋಜನೆ ಮಾಡಿದ್ದಾರೆ ಎಂದು ನಾಮನಿರ್ದೇಶಿತ ಸದಸ್ಯರಾದ ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಮಹೇಶ್ ಆರೋಪಿಸಿದರು.

ಮುಂದಿನ ಕ್ರಿಯಾ ಯೋಜನೆ ಸಂದರ್ಭ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಿದ್ದರೂ ಕೆಲವು ಅಂಗಡಿಗಳಲ್ಲಿ ಯಥೇಚ್ಚವಾಗಿ ಪ್ಲಾಸ್ಟಿಕ್ ಮಾರಾಟ ನಡೆಯುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದರು. ರಾಜ್ಯ ಸರಕಾರ ಪ್ಲಾಸ್ಟಿಕ್ ಉತ್ಪಾದನೆಗೆ ನಿಷೇಧ ಹೇರಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಸದಸ್ಯೆ ಜಯಂತಿ ಶಿವಕುಮಾರ್ ಹೇಳಿದರು.

ಖಾಸಗಿ ಬಸ್ ನಿಲ್ದಾಣದ ಮಳಿಗೆಗಳ ಮೇಲ್ಚಾವಣಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಉತ್ತಮ ಗುಣಮಟ್ಟದ ಪೈಪ್‌ಲೈನ್ ಅಳವಡಿಸಬೇಕು ಹಾಗೂ ಕ್ಲಬ್ ರಸ್ತೆ ಮಳಿಗೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಸದಸ್ಯರಾದ ಜೀವನ್, ಶುಭಕರ್ ಒತ್ತಾಯಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಪಿ. ನಾಚಪ್ಪ, ಅಭಿಯಂತರ ವೆಂಕಟೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.ಜಾರಿಯಿದ್ದರೂ ಕೆಲವು ಅಂಗಡಿಗಳಲ್ಲಿ ಯಥೇಚ್ಚವಾಗಿ ಪ್ಲಾಸ್ಟಿಕ್ ಮಾರಾಟ ನಡೆಯುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಲ ಸದಸ್ಯರು ಒತ್ತಾಯಿಸಿದರು. ರಾಜ್ಯ ಸರಕಾರ ಪ್ಲಾಸ್ಟಿಕ್ ಉತ್ಪಾದನೆಗೆ ನಿಷೇಧ ಹೇರಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಸದಸ್ಯೆ ಜಯಂತಿ ಶಿವಕುಮಾರ್ ಹೇಳಿದರು.

ಖಾಸಗಿ ಬಸ್ ನಿಲ್ದಾಣದ ಮಳಿಗೆಗಳ ಮೇಲ್ಚಾವಣಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಉತ್ತಮ ಗುಣಮಟ್ಟದ ಪೈಪ್‌ಲೈನ್ ಅಳವಡಿಸಬೇಕು ಹಾಗೂ ಕ್ಲಬ್ ರಸ್ತೆ ಮಳಿಗೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಇದರ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಸದಸ್ಯರಾದ ಜೀವನ್, ಶುಭಕರ್ ಒತ್ತಾಯಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಪಿ. ನಾಚಪ್ಪ, ಅಭಿಯಂತರ ವೆಂಕಟೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.