ಮಡಿಕೇರಿ, ಜೂ. ೨೩: ವೀರಾಜಪೇಟೆ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬAಧ ಕರ್ನಾಟಕ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದೆ.

ಕರ್ನಾಟಕ ಪುರಸಭೆ ಕಾಯ್ದೆ ೧೯೬೪ ಕಲಂ ೩,೪,೯ ಮತ್ತು ೩೫೫ನೇ ಪ್ರಕರಣದ ಮೂಲಕ ಅಧಿಕಾರ ಚಲಾಯಿಸಿ ರಾಜ್ಯಪಾಲರು ಅನುಸೂಚಿ ಎ ಮತ್ತು ಬಿ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಜಿಲ್ಲೆಯ ವೀರಾಜಪೇಟೆಯನ್ನು ‘ಸಣ್ಣ ನಗರ' ಎಂದು ಉದ್ಘೋಷಿಸಿ ‘ವೀರಾಜಪೇಟೆ ಪುರಸಭೆ'ಯ ಪ್ರದೇಶವೆಂದು ಪದನಾಮೀಕರಿಸಿ ದ್ದಾರೆ. ಈ ಸಂಬAಧ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನದ ಕಾರ್ಯದರ್ಶಿ ಕೆ.ಎಲ್. ಪ್ರಸಾದ್ ಕರ್ನಾಟಕ ರಾಜ್ಯಪಾಲರ ಆಜ್ಞಾನು ಸಾರ ಅಧಿಸೂಚನೆ ಹೊರಡಿಸಿದ್ದಾರೆ.

ಸೇರ್ಪಡೆಗೊಂಡ ಪ್ರದೇಶಗಳು

ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಕುಕ್ಲೂರು, ಮಗ್ಗುಲ ಗ್ರಾಮ, ಬಿಟ್ಟಂಗಾಲ ಗ್ರಾ.ಪಂ. ವ್ಯಾಪ್ತಿಯ ಅಂಬಟ್ಟಿ, ಆರ್ಜಿ, ಬೇಟೋಳಿ, ಕೆದಮುಳ್ಳೂರು ವ್ಯಾಪ್ತಿಯ ಕೊಟ್ಟೋಳಿ, ಕದನೂರು ಗ್ರಾಮಗಳು ಭಾಗಶಃ ಪುರಸಭೆಗೆ ಸೇರ್ಪಡೆಯಾಗಲಿವೆ.