ಕಾಬೂಲ್, ಜೂ. ೨೨: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಡಿದವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದ್ದು, ಸಾವಿನ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ.

ರಿಕ್ಟರ್ ಮಾಪಕದಲ್ಲಿ ೬.೧ ತೀವ್ರತೆ ದಾಖಲಾಗಿರುವ ಭೂಕಂಪದಲ್ಲಿ ೬೦೦ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅಫ್ಘಾನಿಸ್ತಾನದ ಗುಡ್ಡಗಾಡು ಪ್ರದೇಶಗಳು ತೀವ್ರ ಬಾಧಿತವಾಗಿವೆ. ಇದು ಕಳೆದ ಎರಡು ದಶಕದಲ್ಲೇ ಅಫ್ಘಾನಿಸ್ತಾನ ದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ಭೂಕಂಪ ಎನಿಸಿದೆ. ಸಾವಿನ ಸಂಖ್ಯೆ ದೃಷ್ಟಿಯಲ್ಲಿ ಭೂಕಂಪ ಹೆಚ್ಚು ಘೋರವಾಗಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪಕ್ಟಿಕಾ ಪ್ರಾಂತ್ಯದ ಸಂಸ್ಕೃತಿ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ಅಮೀನ್ ಹುಝೈಫಾ ೧,೦೦೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ೧,೫೦೦ ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದೆ ವೇಳೆ ಅನೇಕ ಹಳ್ಳಿಗಳಲ್ಲಿ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ರಾತ್ರಿ ೧.೩೦ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎನ್ನಲಾಗಿದ್ದು, ಸಾವನ್ನಪ್ಪಿದವರಲ್ಲಿ ಬಹುತೇಕರು ಗಿಯಾನ್ ಜಿಲ್ಲೆಯವರು ಎನ್ನಲಾಗಿದೆ.

ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾತನಾಡಿ, ಭೂಕಂಪದಿAದ ಹಾನಿಗೊಳಗಾದ ಜನರಿಗೆ ನೆರವು ನೀಡುವ ಕುರಿತು ಚರ್ಚಿಸಲು ಇಂದು ತುರ್ತು ಕ್ಯಾಬಿನೆಟ್ ಸಭೆ ನಡೆಸಲಾಯಿತು ಎಂದು ತಿಳಿಸಿದರು. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಭೂಕಂಪದ ಕೇಂದ್ರವು ಖೋಸ್ಟ್ ನಗರದಿಂದ ೪೪ ಕಿಮೀ ದೂರದಲ್ಲಿದೆ ಮತ್ತು ರಿಕ್ಟರ್ ಮಾಪಕದಲ್ಲಿ ೬.೧ ರಷ್ಟಿದೆ ಎಂದು ಹೇಳಿದೆ. ಭೂಕಂಪನದಿAದಾಗಿ ಮನೆಗಳು, ಗುಡ್ಡಗಳು, ರಸ್ತೆಗಳು ಹಾನಿಗೀಡಾಗಿವೆ.

ಭೂಕಂಪ ಎಲ್ಲೆಲ್ಲಿ?

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿರುವ ಖೋಸ್ತ್ ನಗರದಿಂದ ೪೪ ಕಿಮೀ ದೂರದಲ್ಲಿ ಮತ್ತು ನೆಲದಿಂದ ೫೧ ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿAದು ಇದ್ದದ್ದು ಗೊತ್ತಾಗಿದೆ. ಪಾಕಿಸ್ತಾನದ ಗಡಿಭಾಗದ ಬಳಿಯೇ ಭೂಕಂಪವಾದ ಹಿನ್ನೆಲೆಯಲ್ಲಿ ಆ ದೇಶದ ಹಲವೆಡೆ ಕಂಪನಗಳಾಗಿವೆ.

ಪಾಕಿಸ್ತಾನದ ಪಂಜಾಬ್ ಮತ್ತು ಖೈಬರ್ ಪಖ್ತುಂಕ್ವ ಪ್ರಾಂತ್ಯಗಳಲ್ಲಿ ದೊಡ್ಡ ಕಂಪನವಾಗಿದೆ. ಬಲೂಚಿಸ್ತಾನದಲ್ಲಿ ೫.೨ ತೀವ್ರತೆಯ ಭೂಕಂಪ ದಾಖಲಾಗಿದೆ. ಇಸ್ಲಾಮಾಬಾದ್, ಮುಲ್ತಾನ್, ಭಕರ್, ಫಾಲಿಯಾ, ಪೇಶಾವರ, ಮಲಕಂದ್, ಸ್ವಾತ್, ಮಿಯಾನ್‌ವಲಿ, ಪಕಪಟ್ಟಣ್, ಬುನೇರ್, ಲಾಹೋರ್, ಕ್ವೆಟ್ಟಾ, ಫೈಸಲಾಬಾದ್, ಅಬೋಟಾಬಾದ್, ಕೋಹತ್ ಮೊದಲಾದ ಪ್ರದೇಶಗಳಲ್ಲಿ ಕಂಪನಗಳಾಗಿವೆ. ಮಲೇಷ್ಯಾ ದೇಶದಲ್ಲಿ ೫.೧ ತೀವ್ರತೆಯ ಕಂಪನ ದಾಖಲಾಗಿದೆ.

ಭಾರತದ ಜಮ್ಮು ಮತ್ತು ಕಾಶ್ಮೀರ ಮೊದಲಾದ ಕೆಲವೆಡೆ ಕಂಪನದ ಅನುಭವ ಆಗಿದೆ. ಆದರೆ, ಅಲ್ಪ ಮಟ್ಟದ ಕಂಪನವಾದ್ದರಿAದ ಎಲ್ಲಿಯೂ ಸಾವು ನೋವಾಗಿಲ್ಲ.

ತಾಲಿಬಾನ್ ಸರಕಾರದ ಮನವಿ

ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಅಫ್ಘಾನಿಸ್ತಾನಕ್ಕೆ ಅಂತಾರಾಷ್ಟಿçÃಯ ನೆರವು ನಿಂತು ಹೋಗಿದೆ. ಆರ್ಥಿಕವಾಗಿ ಈ ದೇಶ ಜರ್ಝರಿತವಾಗಿದೆ. ಇಂಥ ಹೊತ್ತಿನಲ್ಲೇ ಭೂಕಂಪ ಸಂಭವಿಸಿ ಅಫ್ಘಾನಿಸ್ತಾನ್ ತತ್ತರಿಸಿದೆ. ತಾಲಿಬಾನ್ ಸರಕಾರದ ಉಪ ವಕ್ತಾರ ಬಿಲಾಲ್ ಕರಿಮಿ ಮಾತನಾಡಿ, ಅಂತಾರಾಷ್ಟಿçÃಯ ಸಂಸ್ಥೆಗಳ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.