ಶನಿವಾರಸಂತೆ, ಜೂ. ೨೨: ಯಾವುದೇ ಸಂಘದಲ್ಲಿ ಆಡಳಿತ ಮಂಡಳಿಯೊAದಿಗೆ ಸರ್ವ ಸದಸ್ಯರು ಸಂಪೂರ್ಣ ಸಹಕಾರ ನೀಡಿದರೆ ಆ ಸಂಘ ಅಭಿವೃದ್ಧಿ ಸಾಧಿಸುತ್ತದೆ ಎಂದು ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರಾಥಮಿಕ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ನಿರ್ದೇಶಕ ಎಸ್.ಎಂ. ಉಮಾಶಂಕರ್, ಸಂಘದಲ್ಲಿ ಒಗ್ಗಟ್ಟಿನ ಸಮಸ್ಯೆಯಿದೆ. ಒಂದೆಡೆ ಸೇರಿ ಚರ್ಚಿಸಿದರೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಯುವಜನಾಂಗ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು. ಸಂಘದ ಖಜಾಂಚಿ ಬಿ.ಟಿ. ರಂಗಸ್ವಾಮಿ ಮಾತನಾಡಿ, ಸಂಘಕ್ಕೆ ಸ್ವಂತ ಕಟ್ಟಡವಿಲ್ಲ. ಸದಸ್ಯರು ಹಣ ಸಂಗ್ರಹಿಸಿದರೆ ಸ್ವಂತ ಕಟ್ಟಡ ನಿರ್ಮಿಸಬಹುದು. ಬೆಳೆಗಾರರಿಗೆ ಮಳೆ ಪರಿಹಾರ ಧನ ಬಂದಿದೆ. ಸದಸ್ಯರಾಗಿ ಸದಸ್ಯತ್ವ ಸದ್ಭಳಕೆಯಾಗಲಿ ಎಂದು ಕರೆ ನೀಡಿದರು.

ಸಂಘದ ಕಾರ್ಯದರ್ಶಿ ಎಸ್.ಟಿ. ಪುಟ್ಟಸ್ವಾಮಿ, ಭಾರತ ಕಾಫಿ ಮಂಡಳಿ ಮಾಜಿ ನಿರ್ದೇಶಕ ಕೆ.ವಿ. ಮಂಜುನಾಥ್, ನಿರ್ದೇಶಕ ಹೂವಯ್ಯ ಹಾಗೂ ಡಿ.ಬಿ. ಧರ್ಮಪ್ಪ ಮಾತನಾಡಿ, ಸಂಘಟನೆಗಳಲ್ಲಿ ರಾಜಕೀಯ ತರಬಾರದು. ಒಗ್ಗಟ್ಟಿನಿಂದ ಪ್ರಗತಿ ಸಾಧಿಸಬಹುದು. ರೈತ ಸಂಘಟನೆಯ ಜತೆ ಬೆಳೆಗಾರರ ಸಂಘ ಸಹಕರಿಸಬೇಕು ಎಂದರು. ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್, ಹೆಚ್.ಕೆ. ದಿವಾಕರ್, ಸದಸ್ಯರು ಉಪಸ್ಥಿತರಿದ್ದರು.