*ಗೋಣಿಕೊಪ್ಪ, ಮೇ ೨೫: ಸ್ವಾತಂತ್ರ‍್ಯ ಸಂಗ್ರಾಮದ ನೆನಪುಗಳನ್ನು ಮೆಲಕು ಹಾಕುವ ಮತ್ತು ಯುವ ಜನತೆಗೆ ಸ್ವಾತಂತ್ರ‍್ಯ ಹೋರಾಟಗಾರರ ಜೀವನಗಾಥೆ ಮತ್ತು ಕೊಡುಗೆಯನ್ನು ತಿಳಿಸುವ ನಿಟ್ಟಿನಲ್ಲಿ ತಾ. ೨೮ರಂದು ಪೊನ್ನಂಪೇಟೆ ಕುಶಲಪುರದ ರಾಮಕೃಷ್ಣ ಆಶ್ರಮದ ಸಂಭಾವ ನಂದಾಜೀ ವೇದಿಕೆಯಲ್ಲಿ "ಅಮೃತ ಭಾರತಿಗೆ ಕನ್ನಡಧಾರತಿ" ಕಾರ್ಯಕ್ರಮದಡಿ ೭೫ನೆಯ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ತಿಳಿಸಿದ್ದಾರೆ.

ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಲು ತಯಾರಿ ನಡೆಸಬೇಕಾಗಿದೆ. ಸ್ವಾತಂತ್ರ‍್ಯ ಹೋರಾಟಕ್ಕೆ ತಾಲೂಕಿನ ಕೊಡುಗೆ ಮತ್ತು ಈ ಬಗ್ಗೆ ಯುವಕರಿಗೆ ತಿಳಿಯಪಡಿಸುವ ಕಾರ್ಯ ಈ ಹಂತದಲ್ಲಿ ನಡೆಯಬೇಕಾಗಿದೆ. ಜೊತೆಗೆ ವೀರ ಸಾವರ್ಕರ್ ಅವರ ಜನ್ಮದಿನಾಚರಣೆಯೂ ಏಕಕಾಲಕ್ಕೆ ನಡೆಯಲಿದೆ ಎಂದು ಶಾಸಕರು ಮಾಹಿತಿ ನೀಡಿದರು. ಅಮೃತ ಮಹೋತ್ಸವ ಆಚರಣೆಗೆ ಸರಕಾರ ರಾಜ್ಯಾದ್ಯಂತ ಈಗಾಗಲೇ ೭೫ ಸ್ಥಳಗಳನ್ನು ಗುರುತಿಸಿದೆ. ಕೊಡಗಿನಲ್ಲಿ ಮಡಿಕೇರಿ ಮತ್ತು ಪೊನ್ನಂಪೇಟೆ ತಾಲೂಕುಗಳನ್ನು ಗುರುತಿಸಿದ್ದು, ವೈಭವಯುತವಾಗಿ ಕಾರ್ಯಕ್ರಮ ವನ್ನು ಆಚರಿಸಲು ನಿರ್ಧರಿಸಿದೆ.

ಈ ಬೆಳವಣಿಗೆಯಂತೆ ಕಾರ್ಯಕ್ರಮವನ್ನು ಮೆರವಣಿಗೆ ಶಿಲಾಫಲಕ ಅಳವಡಿಕೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಸಾಕ್ಷ್ಯಚಿತ್ರ ಪ್ರದರ್ಶನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಈ ನೆಲದ ಹೋರಾಟವನ್ನು ಪ್ರತಿಯೊಬ್ಬರ ಎದೆಯಲ್ಲಿ ಮತ್ತೆ ಬಿತ್ತುವ ಕಾರ್ಯ ನಡೆಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಭ್ರಮದಿAದ ನಡೆಸಲು ತಾಲೂಕಿನ ಸ್ತಿçÃಶಕ್ತಿ ಸಂಘ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯ ಕರ್ತರು, ಯುವಕ ಸಂಘಗಳು, ಯುವತಿ ಮಂಡಳಿ, ಹಿಂದೂಪರ ಸಂಘಟನೆಗಳು ಕೈಜೋಡಿಸ ಬೇಕಾಗಿದೆ. ಅಲ್ಲದೇ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಹಕಾರ ನೀಡಬೇಕಾಗಿದೆ ಎಂದು ಮನವಿ ಮಾಡಿದರು.

ಆಚರಣೆಗಳನ್ನು ಶಿಸ್ತುಬದ್ಧವಾಗಿ ನಡೆಸಲು ಸಾಂಸ್ಕೃತಿಕ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ಸನ್ಮಾನ ಸಮಿತಿ, ಸ್ವಾಗತ ಸಮಿತಿ ಆಹಾರ ಸಮಿತಿ, ಅಲಂಕಾರಿಕ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಲಾಯಿತು.

ಕಾರ್ಯಕ್ರಮದ ಅಂಗವಾಗಿ ಮೆರವಣಿಗೆಯನ್ನು ಪೊನ್ನಂಪೇಟೆ ಬಸ್ ನಿಲ್ದಾಣದ ಬಸವೇಶ್ವರ ದೇವಸ್ಥಾನದಿಂದ ರಾಮಕೃಷ್ಣ ಆಶ್ರಮ ದವರೆಗೆ ನಡೆಸಲು ನಿರ್ಧರಿಸ ಲಾಯಿತು. ನಂತರ ೭೫ ಕುಶಲ ತೋಪುಗಳನ್ನು ಕುಶಲಪುರ ಮೈದಾನದಲ್ಲಿ ಹಾರಿಸಲು, ಸ್ವಾತಂತ್ರ‍್ಯಕ್ಕೆ ಹೋರಾಡಿದ ಮುಖ್ಯಸ್ಥರನ್ನು ಸನ್ಮಾನಿಸುವ ಕಾರ್ಯ ಯೋಜನೆಗೆ ಈ ಸಂದರ್ಭದಲ್ಲಿ ಚಿಂತನೆ ಹರಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಲಕ್ಷ್ಮಿ, ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ ಉಪಸ್ಥಿತಿತರಿದ್ದು.