ಮಡಿಕೇರಿ, ಮೇ ೨೫: ಕನ್ನಡ ಬೆಳವಣಿಗೆ ಹಾಗೂ ಉಳಿವಿಗೆ ರಾಜಕಾರಣ, ಜಾತಿ, ಧರ್ಮ, ಸಿದ್ಧಾಂತ ಎಲ್ಲವನ್ನು ಬದಿಗೊತ್ತಿ ಸರ್ವರು ಒಂದಾಗಬೇಕೆAದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಕರೆ ನೀಡಿದರು.

ಸ್ವಾತಂತ್ರ‍್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಗಡಿ ಸಾಂಸ್ಕೃತಿಕ ಉತ್ಸವ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆಯಾಗಿದೆ. ಜನರ ಭಾವನೆಗಳ ಜೊತೆ ಬೆರೆತಿದೆ. ಗಡಿಗಳಲ್ಲಿ ಕನ್ನಡ ಬೆಳವಣಿಗೆಗೆ ಗಡಿ ಉತ್ಸವ ಆಯೋಜಿಸಿರುವುದು ಶ್ಲಾಘನೀಯ. ಆದರೆ, ಕರ್ನಾಟಕ - ಕೇರಳ ಗಡಿಗಳಲ್ಲಿ ಉತ್ಸವ ಆಯೋಜಿಸಬೇಕು ಎಂದು ಸಲಹೆ ನೀಡಿದ ಅವರು, ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಕೇರಳ ಗಡಿಯಲ್ಲಿ ಮಲೆಯಾಳ ಭಾಷೆಯ ಪ್ರಭಾವ ಹೆಚ್ಚಾಗುತ್ತಿರುವುದು ವಿಷಾದನೀಯ. ಮಾತೃಭಾಷೆ ತಾಯಿಗಿಂತ ಮಿಗಿಲಾಗಿದ್ದು, ಕನ್ನಡ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸ ಬೇಕು. ಭಾಷೆಯ ಉಳಿವಿಗೆ ರಾಜಕೀಯ, ಜಾತಿ, ಧರ್ಮ ಇಲ್ಲ. ಎಲ್ಲರೂ ಒಂದಾಗಿ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಇತರ ಜಿಲ್ಲೆಗೆ ಕೊಡಗು ಮಾದರಿಯಾಗಬೇಕು ಎಂದು ಹೇಳಿದರು.

ಕನ್ನಡವನ್ನು ಮೆರೆಸಬೇಕು - ರಂಜನ್

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಗಡಿಗಳಲ್ಲಿ ಕನ್ನಡ ಸಂಸ್ಕೃತಿ, ಪದ್ಧತಿ, ಪರಂಪರೆ ಉಳಿಸಲು ಮುಂದಾಗಬೇಕು. ಕನ್ನಡತನವನ್ನು ಬೆಳೆಸಬೇಕು. ಕೇರಳ ಗಡಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಮಹಾನಗರ ಗಳಲ್ಲಿ ಇತರ ಭಾಷೆಗಳ ದಾಳಿಯಿಂದ ಕನ್ನಡ ಮಾತ ನಾಡುವವರ ಸಂಖ್ಯೆ ಕ್ಷೀಣಿಸುತ್ತಿ ರುವುದು ಆತಂಕಕಾರಿ ಬೆಳವಣಿಗೆ ಯಾಗಿದೆ. ಕನ್ನಡ ಮರೆಯದೆ ಮೆರೆಸಬೇಕೆಂದು ಒತ್ತಿ ಹೇಳಿದರು.

ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಕೀಳರಿಮೆ ಬಿಟ್ಟು ಪೋಷಕರು ಮಕ್ಕಳಿಗೆ ಕನ್ನಡ ಕಲಿಸಬೇಕು. ಇಂದಿನ ಕಾಲಘಟ್ಟದಲ್ಲಿ ಬೇರೆ ಭಾಷೆಯ ಅಗತ್ಯತೆ ಇದೆ. ಆದರೆ, ಮಾತೃ ಭಾಷೆಯನ್ನು ಮರೆಯ ಬಾರದು. ಮನೆಯಲ್ಲಿ ಕನ್ನಡ ಮಾತ ನಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಗಡಿ ಉತ್ಸವದಿಂದ

(ಮೊದಲ ಪುಟದಿಂದ) ಗಡಿಯಲ್ಲಿರುವ ಭಾಷಾ ದ್ವೇಷ ಹೋಗಲಾಡಿಸಬಹುದು. ಕನ್ನಡ ನಾಡಿನಲ್ಲಿ ವಿಭಿನ್ನ ಆಚಾರ-ವಿಚಾರ, ಆಹಾರ ಪದ್ಧತಿಗಳಿವೆ. ಅದನ್ನು ಉಳಿಸಿ ಬೆಳಸುವುದು ಕನ್ನಡಿಗರ ಕರ್ತವ್ಯವಾಗಿದೆ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ 'ಗಡಿ ಪ್ರದೇಶದ ಜನರ ಬದುಕು'ಕುರಿತು ಮಾತನಾಡಿ, ಪಶ್ಚಿಮ ಘಟ್ಟಗಳ ನಡುವೆ ಇರುವ ಸುಂದರ ಜಿಲ್ಲೆ ಕೊಡಗು ವೈಶಿಷ್ಟö್ಯಪೂರ್ಣ ಜಿಲ್ಲೆಯಾಗಿದ್ದು, ಇಲ್ಲಿನ ಪದ್ಧತಿ ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ಬುಡಕಟ್ಟು ಜನಾಂಗದ ಸಂಸ್ಕೃತಿ ಕೂಡ ವಿಭಿನ್ನ. ಜಿಲ್ಲೆಯ ಜನರು ಪರಸ್ಪರ ಎಲ್ಲಾ ಭಾಷೆಗಳಿಗೂ ಗೌರವ ನೀಡುತ್ತಾರೆ. ಗಡಿ ಪ್ರದೇಶಗಳಲ್ಲಿ ಕನ್ನಡ ಕಲಿಸಬೇಕು. ನಾಗರಿಕ ಸಮಿತಿ ರಚಿಸಿ ಕಾಲಕಾಲಕ್ಕೆ ಸ್ಥಳೀಯ ಸಮಸ್ಯೆ ಬಗ್ಗೆ ಚರ್ಚಿಸಿ ಭಾಷಾಭಿವೃದ್ಧಿಗೆ ಶ್ರಮಿಸಬೇಕು. ಸಮಸ್ಯೆಗಳನ್ನು ಪರಿಹರಿಸಿ ಮೂಲಭೂತ ಸೌಕರ್ಯ ಒದಗಿಸಬೇಕು. ಗಡಿನಾಡ ತಾಲೂಕಿನಲ್ಲಿ ಸಾಂಸ್ಕೃತಿಕ ಉತ್ಸವ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಲೇಖಕ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪೌರಾಯುಕ್ತ ರಾಮದಾಸ್, ಪತ್ರಿಕಾ ಭವನ ಟ್ರಸ್ಟಿ ಮನು ಶೆಣೈ ಸೇರಿದಂತೆ ಇನ್ನಿತರರು ಹಾಜರಿದ್ದರು. ಮುನೀರ್ ಅಹಮ್ಮದ್ ಸ್ವಾಗತಿಸಿ, ಕಡ್ಲೇರ ತುಳಸಿ ನಿರೂಪಿಸಿ, ಪ್ರೇಮ್ ಕುಮಾರ್ ವಂದಿಸಿದರು.