ಎಲ್ಲಾ ಮಾದರಿಯ ಪ್ಲಾಸ್ಟಿಕ್ ಚೀಲ ಬಳಕೆ ನಿಷೇಧ

ಮಡಿಕೇರಿ, ಮೇ ೨೫: ಸರಕಾರ ಎಲ್ಲಾ ರೀತಿಯ ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿದೆ. ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಈ ಬಗ್ಗೆ ಅರಿವು ಮೂಡಿಸಿಕೊಂಡು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದ್ದಾರೆ. ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಸಮಿತಿ ವತಿಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ೨೦೧೬ರಲ್ಲೇ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಕಾಯ್ದೆ, ಕಾನೂನು, ನಿಯಮಗಳನ್ನು ವ್ಯಾಪಾರಸ್ಥರು, ಸಾರ್ವಜನಿಕರು ಅರಿತುಕೊಂಡು ಪರಿಪಾಲನೆ ಮಾಡಬೇಕೆಂದು ಹೇಳಿದರು.

ಪ್ಲಾಸ್ಟಿಕ್ ಬಳಕೆ, ವ್ಯಾಪಾರ ಮಾಡುತ್ತಿರುವ ಅಂಗಡಿ - ಮುಂಗಟ್ಟುಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ದಾಳಿಯಲ್ಲ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಶೀಲನೆ ಮಾಡುವುದಾಗಿದೆ. ವ್ಯಾಪಾರಿಗಳಿಗೆ ವಿಧಿಸುವ ದಂಡದಿAದ ಸರಕಾರಕ್ಕೆ ಏನೂ ಲಾಭವಿಲ್ಲ. ಬದಲಿಗೆ ಅವರಲ್ಲಿಯೂ ಅರಿವು ಮೂಡಿಸುವ ಸಲುವಾಗಿ ಈ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತಿರುವುದಾಗಿ ಹೇಳಿದರು.

(ಮೊದಲ ಪುಟದಿಂದ)

ಮಾಹಿತಿ ತಿಳಿದುಕೊಳ್ಳಬೇಕು

ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರಿಶೀಲನೆಗೆ ತೆರಳುವ ಮುನ್ನ ಮಾಹಿತಿ ನೀಡಬೇಕು ಎಂಬ ಆರೋಪಗಳಿವೆ. ಆದರೆ, ನಿಯಮದಡಿ ಪ್ರತಿವಾರ ಕೆಲವೊಂದು ಅಂಗಡಿಗಳಿಗೆ ತೆರಳಿ ಪರಿಶೀಲಿಸಬಹುದಾಗಿದೆ. ಪರಿಶೀಲನೆ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ಬಗ್ಗೆ ವ್ಯಾಪಾರಸ್ಥರು ಅರಿತುಕೊಳ್ಳಬೇಕು. ಮುಂದೊAದು ದಿನ ಎಲ್ಲರ ಅಂಗಡಿಗಳಲ್ಲಿಯೂ ಪರಿಶೀಲನೆ ಆಗಬಹುದೆಂಬ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಮಾರಂಭಗಳ ಮೇಲೆ ಕ್ರಮ

ಮದುವೆ, ಸಮಾರಂಭ ಮುಂತಾದೆಡೆ ಅಧಿಕ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ವ್ಯಾಪಾರಿಗಳು ಗಮನಕ್ಕೆ ತಂದ ಸಂದರ್ಭ ಉತ್ತರಿಸಿದ ಜಿಲ್ಲಾಧಿಕಾರಿಗಳು, ಈ ನಿಟ್ಟಿನಲ್ಲಿ ಸಮಾರಂಭ ನಡೆಸಲಾಗುವ ಕಲ್ಯಾಣ ಮಂಟಪಗಳು ಹಾಗೂ ಆಹಾರ ಸರಬರಾಜು ಮಾಡುವ ‘ಕ್ಯಾಟರಿಂಗ್’ ವ್ಯವಸ್ಥೆಯವರನ್ನು ಕರೆಸಿ ಸೂಚನೆ ನೀಡಲಾಗುವುದು. ನಂತರದಲ್ಲಿಯೂ ಬಳಕೆ ಕಂಡುಬAದಲ್ಲಿ ಸಮಾರಂಭ ನಡೆಯುವ ಕಲ್ಯಾಣ ಮಂಟಪಗಳು, ಸಬಾಂಗಣದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಪ್ರವಾಸಿಗರ ಮೇಲೆ ನಿಗಾ

ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಎಲ್ಲೆಂದರಲ್ಲಿ ಕಸಗಳನ್ನು ಎಸೆದು ಹೋಗುತ್ತಾರೆ. ಅಂತಹವರಿಗೆ ಜಿಲ್ಲೆಯ ಸೂಕ್ಷö್ಮತೆ ಬಗ್ಗೆ ತಿಳಿಹೇಳಿ ಮಾಹಿತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಗಾ ವಹಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ವ್ಯಾಪಾರಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ. ದೇವಯ್ಯ, ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ನಗರ ಅಧ್ಯಕ್ಷ ಧನಂಜಯ, ಸಂಘಟನಾ ಕಾರ್ಯದರ್ಶಿ ವಿನಯ್, ನಗರಸಭಾ ಆಯುಕ್ತ ರಾಮದಾಸ್, ಪರಿಸರ ಅಧಿಕಾರಿ ಉಮಾ ಶಂಕರ್, ಅಭಿಯಂತರೆ ಸೌಮ್ಯ ಇದ್ದರು.