ಚೆಯ್ಯಂಡಾಣೆ, ಮೇ ೨೫: ವೀರಾಜಪೇಟೆ ವಿಭಾಗದ, ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೇಲಾವರ, ನರಿಯಂದಡ, ಕರಡ, ಮರಂದೋಡ, ಕೋಕೇರಿ, ಕಿರುಂದಾಡು, ಕೈಕಾಡು, ಕೊಣಂಜಗೇರಿ, ಬಾವಲಿ, ಬಲಮುರಿ, ಅರಪಟ್ಟು, ಪೊದವಾಡ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಯನ್ನು ತಾ. ೨೬ರಂದು (ಇಂದು) ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಯಲಿದೆ.

ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.