ಮಡಿಕೇರಿ, ಮೇ ೨೫: ಕೊಡಗು ಗೌಡ ಮಹಿಳಾ ಒಕ್ಕೂಟದ ಬೆಳ್ಳಿ ಹಬ್ಬದ ಸಂಭ್ರಮವನ್ನು ತಾ. ೨೯ರಂದು ನಗರದ ಕೊಡಗು ಗೌಡ ಸಮಾಜದಲ್ಲಿ ಆಚರಿಸಲಾಗುವುದು ಎಂದು ಒಕ್ಕೂಟದ ಸದಸ್ಯೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೯ ಗಂಟೆಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ರಸ್ತೆ ಮುಂಭಾಗದಿAದ ಮಡಿಕೇರಿ, ಮೇ ೨೫: ಕೊಡಗು ಗೌಡ ಮಹಿಳಾ ಒಕ್ಕೂಟದ ಬೆಳ್ಳಿ ಹಬ್ಬದ ಸಂಭ್ರಮವನ್ನು ತಾ. ೨೯ರಂದು ನಗರದ ಕೊಡಗು ಗೌಡ ಸಮಾಜದಲ್ಲಿ ಆಚರಿಸಲಾಗುವುದು ಎಂದು ಒಕ್ಕೂಟದ ಸದಸ್ಯೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೯ ಗಂಟೆಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ರಸ್ತೆ ಮುಂಭಾಗದಿAದ ತಿಳಿಸಿದರು.

ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲ ಕೊಂಬಾರನ ಕುಂತಿ ಬೋಪಯ್ಯ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಚಿಕ್ಕಮಗಳೂರಿನ ಅಬಕಾರಿ ಉಪ ಆಯುಕ್ತರಾದ ನಂಗಾರು ಸಮಿತ ನಿಂಗರಾಜು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಕೋರನ ಸರಸ್ವತಿ ಪ್ರಕಾಶ್, ಕೊಡಗು ಗೌಡ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಚೀಯಂಡಿ ರಾಧಾ ಯಾದವ್, ಪ್ರಮುಖರಾದ ಕುಂಬುಗೌಡನ ಮುತ್ತಮ್ಮ ದೇವಯ್ಯ, ದೇವಜನ ಗೀತಾ ಮೋಂಟಡ್ಕ, ಅಚ್ಚಾಂಡೀರ ಲತಾ, ಕೆದಂಬಾಡಿ ಮಧು ಪ್ರಸನ್ನ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಒಕ್ಕೂಟದ ಉಪಾಧ್ಯಕ್ಷೆ ಬೈತಡ್ಕ ಜಾನಕಿ ಮಾತನಾಡಿ, ಸಭಾ ಕಾರ್ಯಕ್ರಮದ ನಂತರ ಅರೆಭಾಷೆ ಸಾಂಸ್ಕೃತಿಕ ವೈಭವ ನಡೆಯಲಿದೆ. ಈ ಸಂದರ್ಭದಲ್ಲಿ ಸ್ವಾಗತ ನೃತ್ಯ, ಸಬ್ಬಮ್ಮ ದೇವಿಗೆ ಹರಕೆ

(ಮೊದಲ ಪುಟದಿಂದ) ಹಣ ಕಟ್ಟುವ ಸೋಬಾನೆ, ತಾಳನೃತ್ಯ, ಯಕ್ಷಗಾನ, ಅರೆಭಾಷೆ ನೃತ್ಯ, ಹರಿಸೇವೆ ಹಾಡು, ಅರೆಭಾಷೆ ನೃತ್ಯ, ಕೋಲಾಟ ಇತ್ಯಾದಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಒಕ್ಕೂಟದ ಸದಸ್ಯೆ ಅಮೆ ದಮಯಂತಿ ಮಾತನಾಡಿ, ಬೆಳ್ಳಿಹಬ್ಬದ ಭಾಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೋಡಿರ ಮೋಟಯ್ಯ ಕುಟುಂಬ, ನಡುವಟ್ಟಿರ ಶೈಲಾ ಸುಬ್ಬಯ್ಯ, ಕಟ್ಟಮನೆ ಪ್ರೇಮ ಗಣೇಶ್, ತೋಟಂಬೈಲು ಪಾವರ್ತಿ ಮೋಹನ್ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಕಣ್ಣು ದಾನ ಮಾಡುವವರ ಒಪ್ಪಿಗೆ ಪತ್ರ ಪಡೆಯುವ ಕಾರ್ಯಕ್ರಮವಿದ್ದು, ಜಿಲ್ಲೆಯ ಆಸಕ್ತರು ಹೆಸರು ನೋಂದಾಯಿಸಿ ಒಪ್ಪಿಗೆ ನೀಡಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಖಜಾಂಚಿ ಕೋಳಿಬೈಲು ಹರಿಣಾಕ್ಷಿ, ಸದಸ್ಯೆ ಪರಿವಾರ ತಂಗಮ್ಮ ಉಪಸ್ಥಿತರಿದ್ದರು.