ಕೂಡಿಗೆ, ಮೇ ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್ನ ವಿನಾಯಕ ಬಡಾವಣೆಗೆ ಸ್ಥಳೀಯ ವಾರ್ಡ್ ಸದಸ್ಯರು ಭೇಟಿ ನೀಡಿ, ಗ್ರಾಮಸ್ಥರಿಂದ ಸಮಸ್ಯೆಗಳನ್ನು ಆಲಿಸಿದರು.

ವಿನಾಯಕ ಬಡಾವಣೆಯಲ್ಲಿ ಮಳೆಗಾಲದಲ್ಲಿ ಮಳೆನೀರು ಮನೆಗಳಿಗೆ ನುಗ್ಗುವ ಬಗ್ಗೆ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು, ಸಮಸ್ಯೆಗೆ ಪರಿಹಾರವನ್ನು ಒದಗಿಸಿಕೊಡುವಂತೆ ಸದಸ್ಯರ ಬಳಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಕೆ.ಬಿ. ಷಂಶುದ್ದೀನ್, ಮೋರಿಯಲ್ಲಿ ಮಣ್ಣು ತುಂಬಿದ ಕಾರಣ ಮಳೆನೀರು ಮನೆಗಳಿಗೆ ನೀರು ತುಂಬುತ್ತಿದೆ. ಆದಷ್ಟು ಬೇಗನೇ ಮೋರಿಯಲ್ಲಿ ತುಂಬಿರುವ ಮಣ್ಣನ್ನು ತೆಗೆಸಲಾಗುವುದು ಎಂದರು.

ನಂತರ ಕುಡಿಯುವ ನೀರು, ಸ್ವಚ್ಛತೆ ಇನ್ನಿತರ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದರು. ವಿನಾಯಕ ಬಡಾವಣೆ ಎತ್ತರದ ಪ್ರದೇಶವಾದ್ದರಿಂದ ಮಳೆನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದೆ. ಚರಂಡಿ ನಿರ್ಮಿಸಿಕೊಡುವಂತೆ ಜನರು ಮನವಿ ಮಾಡಿದರು. ನರೇಗಾ ಯೋಜನೆಯಡಿ ೨ ಲಕ್ಷ ರೂ ವೆಚ್ಚದಲ್ಲಿ ಚರಂಡಿ ನಿರ್ಮಿಸಲಾಗುವುದು. ಶೂನ್ಯ ಅಭಿವೃದ್ಧಿಯಲ್ಲಿದ್ದ ವಿನಾಯಕ ಬಡಾವಣೆಯನ್ನು ಒಂದೂವರೆ ವರ್ಷದಲ್ಲಿ ಅರ್ಧ ಭಾಗದಷ್ಟು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಶ್ರಮವಹಿಸಲಾಗುವುದು ಎಂದು ಕೆ.ಬಿ.ಶಂಶುದ್ಧೀನ್ ತಿಳಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನರ ಬಳಿ ಸಮಸ್ಯೆ ಆಲಿಸುವ ಸಲುವಾಗಿ ವಾರ್ಡ್ ಭೇಟಿ ಮಾಡಿದ್ದು, ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಬಡಾವಣೆಯನ್ನು ಹಂತಹAತವಾಗಿ ಅಭಿವೃದ್ಧಿ ಪಡಿಸಲು ವಾರ್ಡ್ನ ಮೂವರು ಸದಸ್ಯರೂ ಕೂಡ ಶ್ರಮಿಸುತ್ತೇವೆ ಎಂದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮಸ್ಥರಾದ ಸೋಮಶೇಖರ್, ಕುಮಾರ್ ಹಾಗೂ ಇನ್ನಿತರರು ಇದ್ದರು.