೧೦ನೇ ತರಗತಿಯ ಫಲಿತಾಂಶ ತಾ. ೧೯ ರಂದು ಪ್ರಕಟವಾಗಿದ್ದು, ಶಾಲಾವಾರು ವಿವರಗಳು ಇಂತಿವೆ:

ವೀರಾಜಪೇಟೆ : ಪಾಲಿಬೆಟ್ಟದ ಲೂರ್ಡ್ಸ್ ಶಾಲೆಯ ವಿದ್ಯಾರ್ಥಿನಿ ವರ್ಣ ಕೆ.ಬಿ. ೬೨೦ ಅಂಕ ಗಳಿಸುವ ಮೂಲಕ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಪೊನ್ನಂಪೇಟೆಯ ಸಂತ ಅಂತೋಣಿ ಶಾಲೆಯ ಮೌಲ್ಯ ವಿ.ಎಂ. ೬೧೯ ಅಂಕ ಗಳಿಸಿ ದ್ವಿತೀಯ ಹಾಗೂ ಟಿ.ಶೆಟ್ಟಿಗೇರಿಯ ರೂಟ್ಸ್ ಶಾಲೆಯ ಅನಿಷಾ ಪೂವಮ್ಮ ೬೧೮ ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕುಗಳನ್ನು ಒಳಗೊಂಡಿರುವ ವೀರಾಜಪೇಟೆ ವಿಭಾಗಕ್ಕೆ ಶೇ. ೯೧ ರಷ್ಟು ಫಲಿತಾಂಶ ದೊರಕಿದೆ.

ಬಾಳುಗೋಡುವಿನ ಏಕಲವ್ಯ, ತಿತಿಮತಿಯ ಮೊರಾರ್ಜಿ ದೇಸಾಯಿ, ದೇವಣಗೇರಿಯ ಬಿ.ಸಿ. ಪ್ರೌಢಶಾಲೆ, ರ‍್ವತೊಕ್ಲುವಿನ ಸರ್ವದೈವತಾ, ಬಿಟ್ಟಂಗಾಲದ ರೋಟರಿ, ಶ್ರೀಮಂಗಲದ ಜೆ.ಸಿ, ಟಿ. ಶೆಟ್ಟಿಗೇರಿಯ ರೂಟ್ಸ್, ಅನುದಾನ ರಹಿತ ಶ್ರೀಮಂಗಲದ ಪ್ರೌಢಶಾಲೆ, ಪೊನ್ನಂಪೇಟೆಯ ಅಪ್ಪಚ್ಚು ಕವಿ, ಸಂತ ಅಂತೋಣಿ, ಪಾಲಿಬೆಟ್ಟದ ಲರ‍್ಡ್÷್ಸ, ವೀರಾಜಪೇಟೆ ಪಟ್ಟಣ ಶಾಲೆಗಳಾದ ಕಾವೇರಿ, ಪ್ರಗತಿ, ತ್ರಿವೇಣಿ, ಸಂತ ಅನ್ನಮ್ಮ ಶಾಲೆ ಅನ್ವರುಲ್ ಹುದಾ ಪ್ರೌಢಶಾಲೆಗಳು ಶೇ. ೧೦೦ ರಷ್ಟು ಫಲಿತಾಂಶವನ್ನು ಪಡೆದು ಉತ್ತಮ ಸಾಧನೆ ತೋರಿವೆ.

ಸರ್ಕಾರಿ ಪ್ರೌಢಶಾಲೆಗಳಾದ ಕುಟ್ಟ ಶೇ. ೮೧, ಮಾಯಮುಡಿ ಶೇ. ೮೯, ಮಾಲ್ದಾರೆ ಶೇ.೭೫, ಕೊಂಡAಗೇರಿ ಶೇ.೮೨, ಗೋಣಿಕೊಪ್ಪಲು ಶೇ.೭೭, ಪಾಲಿಬೆಟ್ಟ ಶೇ.೯೪, ಟಿ.ಶೆಟ್ಟಿಗೇರಿ ಶೇ.೯೦, ವೀರಾಜಪೇಟೆ ಶೇ.೭೮, ಪೊನ್ನಂಪೇಟೆ ಕೆ.ಪಿ.ಎಸ್ ೯೦, ತಿತಿಮತಿ ಶೇ. ೮೮, ಚೆನ್ನಯ್ಯನಕೋಟೆ ಶೇ.೮೮, ಬಿಳುಗುಂದ ಶೇ. ೮೮, ಹೆಗ್ಗಳ ಶೇ.೮೮ ಫಲಿತಾಂಶ ಗಳಿಸಿವೆ.

ಪೆರುಂಬಾಡಿಯ ಮೊರಾರ್ಜಿ ದೇಸಾಯಿ ಶಾಲೆ ಶೇ.೮೫, ಹಾತೂರು ಶೇ. ೬೧, ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆ (ಅನುದಾನಿತ) ಶೇ. ೯೬, ಬಾಳಲೆಯ ವಿಜಯಲಕ್ಷಿö್ಮ ಪ್ರೌಢಶಾಲೆ ಶೇ. ೮೯, ಜನತಾ ಪ್ರೌಢಶಾಲೆ ಹುದಿಕೇರಿ ಶೇ.೩೭, ಶಾರದ ಬೆಕ್ಕೆಸೊಡ್ಲೂರು ಶೇ. ೯೦, ಶ್ರೀಮಂಗಲ ಶೇ. ೮೯, ಪೊನ್ನಪ್ಪಸಂತೆಯ ಎಂ.ಸಿ.ಎಸ್ ಶೇ.೯೩, ಅಮ್ಮತ್ತಿ ಶೇ.೯೩, ಗೋಣಿಕೊಪ್ಪಲು ಶೇ.೯೦, ಕುಟ್ಟಂದಿಯ ಕೆ.ಬಿ. ಶೇ. ೬೭, ಬಿರುನಾಣಿಯ ಮರೆನಾಡು ಶೇ.೭೬, ಕಾಕೋಟುಪರಂಬು ಶೇ.೭೭, ವೀರಾಜಪೇಟೆಯ ಜೆ.ಪಿ.ಎನ್ ಶೇ. ೭೫, ಪಾಲಿಬೆಟ್ಟದ ನಮ್ಮ ಪ್ರೌಢಶಾಲೆ ಶೇ. ೯೩ ಫಲಿತಾಂಶ ಪಡೆದಿವೆೆ.

ವೀರಾಜಪೇಟೆಯ ರೋಲಿಕ್ಸ್ ಶೇ.೮೯, ಬ್ರೆöÊಟ್ ಶೇ. ೯೬, ಬದ್ರಿಯಾ ಶೇ. ೯೫, ವಿನಾಯಕ ಶೇ.೮೯, ಕೂರ್ಗ್ ವ್ಯಾಲಿ ಶೇ.೯೬, ಮೌಂಟನ್ ವ್ಯೂ ಶೇ. ೭೫, ಅಮ್ಮತ್ತಿಯ ಗುಡ್ ಶೆಫರ್ಡ್ ಶೇ. ೯೪, ನೇತಾಜಿ ಶೇ.೯೪, ಪೊನ್ನಂಪೇಟೆಯ ಸಾಯಿಶಂಕರ ಶೇ.೮೯, ದೇವರಪುರ ಶ್ರೀ ರಾಜೇಶ್ವರಿ ಶೇ. ೯೫, ಗೋಣಿಕೊಪ್ಪಲಿನ ಲಯನ್ಸ್ ಶೇ.೯೯, ಸಂತ ಥೋಮಸ್ ಪೊನ್ನಂಪೇಟೆ ಶೇ. ೯೮, ಹಳ್ಳಿಗಟ್ಟುವಿನ ನಿನಾದ ಪ್ರೌಢಶಾಲೆ ಶೇ.೮೩ ಫಲಿತಾಂಶವನ್ನು ಪಡೆದುಕೊಂಡಿವೆ.

ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನಿಂದ ಒಟ್ಟು ೨೪೬೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ ೨೨೯೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶನಿವಾರಸಂತೆಯ ಸೆಕ್ರೇಡ್ ಹಾರ್ಟ್ ಶಾಲೆ ವಿದ್ಯಾರ್ಥಿನಿ ಪೂರ್ವಿ ಜಗದೀಶ್ ಮತ್ತು ಸೋಮವಾರಪೇಟೆ ಜ್ಞಾನವಿಕಾಸ ಆಂಗ್ಲಮಾಧ್ಯಮ ಶಾಲೆಯ ಪಿ.ಬಿ.ಸಿಂಚನ ತಲಾ ೬೨೫ಕ್ಕೆ ೬೨೨ ಅಂಕಗಳಿಸುವುದರೊAದಿಗೆ ಶೇ.೯೯.೫೨ ಸಾಧನೆ ಮಾಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಸೆಕ್ರೇಡ್ ಹಾರ್ಟ್ ಶಾಲೆಯ ಸಿ. ಕೀರ್ತನ, ಕುಶಾಲನಗರ ಫಾತಿಮ ಕಾನ್ವೆಂಟ್‌ನ ಕೆ.ಗಾಯತ್ರಿ ಮತ್ತು ಕೊಡ್ಲಿಪೇಟೆ ಕಿರಿಕೊಡ್ಲಿಮಠ ಸದಾಶಿವಸ್ವಾಮಿ ಶಾಲೆಯ ಬಿ.ವಿ.ಮಾನ್ಯಶ್ರೀ ತಲಾ ೬೨೧ ಅಂಕಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಸರಕಾರಿ ಶಾಲೆಗಳ ಪೈಕಿ ಅಂಕನಳ್ಳಿ ಸರಕಾರಿ ಪ್ರೌಢಶಾಲೆಯ ಹೆಚ್.ಕೆ. ಅಭಿಷೇಕ್ ೬೦೨ ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದರೆ, ಐಗೂರು ಸರಕಾರಿ ಪ್ರೌಢಶಾಲೆಯ ಸಿ.ಬಿ.ಸ್ನೇಹಾ ೫೯೯ ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ತಾಲೂಕಿನಲ್ಲಿ ೨೪ ಶಾಲೆಗಳು ಶೇ.೧೦೦ ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧನೆ ತೋರಿವೆ. ಸರಕಾರಿ ಶಾಲೆಗಳ ಪೈಕಿ ನೇರುಗಳಲೆ, ಅಂಕನಳ್ಳಿ, ಕೂಡಿಗೆ ಕ್ರೀಡಾಶಾಲೆ, ತೊರೆನೂರು, ಹಂಡ್ಲಿ, ಕೂಡಿಗೆ ಮೊರಾರ್ಜಿ ದೇಸಾಯಿ, ಕಿರಗಂದೂರು ಪ್ರೌಢಶಾಲೆ, ಸೋಮವಾರಪೇಟೆ ಅಂಬೇಡ್ಕರ್ ವಸತಿ ಶಾಲೆ ಸರಕಾರಿ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದಿವೆ.

ಖಾಸಗಿ ಶಾಲೆಗಳ ಪೈಕಿ ಶನಿವಾರಸಂತೆಯ ಸುಪ್ರಜ ಗುರುಕುಲ, ಸೆಕ್ರೇಡ್ ಹಾರ್ಟ್, ಕಾವೇರಿ ಆಂಗ್ಲ ಮಾಧ್ಯಮ, ಬಾಪೂಜಿ ಪ್ರೌಢಶಾಲೆ, ಆಲೂರು ಸಿದ್ದಾಪುರದ ಜಾನಕಿ ಕಾಳಪ್ಪ ಪ್ರೌಢಶಾಲೆ, ಕುಶಾಲನಗರ ಫಾತಿಮಾ, ಯೂನಿಕ್ ಅಕಾಡೆಮಿ, ಕೊಡಗರಳ್ಳಿ ಶಾಂತಿನಿಕೇತನ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ, ಓಎಲ್‌ವಿ ಕಾನ್ವೆಂಟ್, ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆ, ಕೂಡಿಗೆಯ ಮೊರಾರ್ಜಿ ಶಾಲೆ, ಕ್ರೀಡಾ ಪ್ರೌಢಶಾಲೆ, ಅಂಜಲ್ ವಿದ್ಯಾನಿಕೇತನ, ಜ್ಞಾನೋದಯ ಪ್ರೌಢಶಾಲೆ, ಕಿರಿಕೊಡ್ಲಿ ಸದಾಶಿವ ಸ್ವಾಮೀಜಿ ಶಾಲೆ, ಗೌಡಳ್ಳಿ ಬಿ.ಜಿ.ಎಸ್.ಆಂಗ್ಲ ಮಾಧ್ಯಮ ಹಾಗೂ ಕೆ.ಇ.ಎಸ್.ಕಿಶೋರ ಕೇಂದ್ರ ಕೂಡುಮಂಗಳೂರು ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದಿವೆ.

ಪಾಲಿಬೆಟ್ಟ: ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯು ಶೇ.೯೪.೪ ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ ಒಟ್ಟು ೧೮ ವಿದ್ಯಾರ್ಥಿಗಳ ಪೈಕಿ ೧೭ ಮಂದಿ ತೇರ್ಗಡೆಗೊಂಡಿದ್ದು, ವಿದ್ಯಾರ್ಥಿನಿ ರೇಶ್ಮಾ ಟಿ.ಆರ್. ಶೇ.೯೨ ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಶಾಲೆ ಶೇ.೧೦೦ ರಷ್ಟು ಫಲಿತಾಂಶ ಪಡೆದುಕೊಂಡಿದೆ.

ವಿದ್ಯಾರ್ಥಿನಿ ಎಂ.ಬಿ. ಕಾವೇರಮ್ಮ ಶೇ.೯೮.೫೬, ಪಿ.ಪಿ. ತಂಗಮ್ಮ ಶೇ.೯೮.೨೪, ಕೆ.ಸಿ.ಪೊನ್ನಣ್ಣ ಶೇ.೯೮.೮ ಅಂಕ ಪಡೆದುಕೊಂಡಿದ್ದಾರೆ. ೨೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ಲ್ಲಿ ತೇರ್ಗಡೆಗೊಂಡಿದ್ದಾರೆ. ಉಳಿದ ೧೩ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸುಂಟಿಕೊಪ್ಪ: ಕೊಡಗರಹಳ್ಳಿ ಶಾಂತಿನೀಕೇತನ ಶಾಲೆಯು ಶೇಕಡ ೧೦೦ ಫಲಿತಾಂಶ ಪಡೆದುಕೊಂಡಿದ್ದು, ಶಾಲೆಯ ವಿದ್ಯಾರ್ಥಿಗಳಾದ ಎಂ.ಎA. ದೇವಿಕ ೬೧೮, ಉಜ್ವಲ ಟಿ.ಎನ್. ೬೧೭ ಹಾಗೂ ರಿಶೀಕ್ ೬೧೬ ಅಂಕಗಳನ್ನು ಗಳಿಸಿ ಮೊದಲ ೩ ಸ್ಥಾನಗಳನ್ನು ಪಡೆದಿದ್ದಾರೆ. ಶಾಂತಿನಿಕೇತನ ಶಾಲೆಯು ೧೪ನೇ ಬಾರಿಗೆ ಶೇಕಡ ೧೦೦ ಫಲಿತಾಂಶ ಪಡೆದುಕೊಂಡಿದೆ. ಶಾಲೆಯ ೧೦೯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು ಅದರಲ್ಲಿ ೩೮ ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, ೭೧ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮರಿಯ ಡೀನಾ ಒಟ್ಟು ೬೨೫ ಅಂಕಗಳಿಗೆ ೬೧೨ ಅಂಕಗಳಿಸಿದ್ದು ಶೇಕಡ ೯೭.೯೨ ಪಡೆದುಕೊಂಡಿದ್ದಾರೆ.

ಸಂತಮೇರಿ ಆಂಗ್ಲ ಮಾದ್ಯಮ ಶಾಲೆಯು ೯೫.೪೫ ಪಡೆದುಕೊಂಡಿದೆ. ಒಟ್ಟು ೧೧೦ ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು ೧೦೫ ಮಕ್ಕಳು ತೇರ್ಗಡೆಗೊಂಡಿದ್ದು ೨೪ ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, ೬೮ ಮಕ್ಕಳು ಪ್ರಥಮ ಶ್ರೇಣಿಯಲ್ಲಿ, ದ್ವಿತೀಯ ಶ್ರೇಣಿಯಲ್ಲಿ ೧೨ ವಿದ್ಯಾರ್ಥಿಗಳು, ತೃತೀಯ ಶ್ರೇಣಿಯಲ್ಲಿ ಓರ್ವ ವಿದ್ಯಾರ್ಥಿ ತೇರ್ಗಡೆಗೊಂಡಿದ್ದಾರೆ.

(ಮುAದುವರಿಯುವುದು)