ಮಡಿಕೇರಿ, ಮೇ ೨೫: ಆರ್ಯ ವೈಶ್ಯ ಮಂಡಳಿ ಕುಶಾಲನಗರ ಹಾಗೂ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ದೇವಾಲಯದ ಪ್ರತಿಷ್ಠಾಪನಾ ಅಮೃತ ಮಹೋತ್ಸವ ಹಾಗೂ ಕುಂಬಾಭಿಷೇಕ ಜೂ.೧ರಿಂದ ೫ರವರೆಗೆ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಬಿ.ಎಲ್ ಉದಯಕುಮಾರ್ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕನ್ನಿಕಾಪರಮೇಶ್ವರಿ ದೇವಾಲಯವು ಕುಶಾಲನಗರದ ‘ಗೋಲ್ಡನ್ ಟೆಂಪಲ್’ ಎಂದೇ ಪ್ರಸಿದ್ಧಿ ಪಡೆದಿದೆ. ಅಮೃತ ಮಹೋತ್ಸವ ಅಂಗವಾಗಿ ೫ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೂ.೧ರಂದು ಮಧ್ಯಾಹ್ನ ೨ ಗಂಟೆಗೆ ದೇವಸ್ಥಾನದಲ್ಲಿ ಊರಿನ ಸೊಸೆಯಂದಿರಿಗೆ ಮಡಿಲಕ್ಕಿ ತುಂಬುವುದು, ಸಂಜೆ ೫ರಿಂದ ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೂ.೨ರಂದು ಬೆಳಿಗ್ಗೆ ೬.೩೦ ಗಂಟೆಗೆ ಮೂಲ ದೇವರ ಪ್ರಾರ್ಥನೆಯೊಂದಿಗೆ ಸಂಜೆ ೬.೩೦ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆೆ ಎಂದು ತಿಳಿಸಿದರು.

ಜೂ.೩ರಂದು ಬೆಳಿಗ್ಗೆ ೮ ಗಂಟೆಗೆ ದೇವರಿಗೆ ಪಂಚಾಮೃತ ಅಭಿಷೇಕ ‘ಚಂಡಿಕಾ ಹೋಮ’ ಸುಹಾಸಿನಿ ಪೂಜೆ, ಕನ್ನಿಕಾಪೂಜೆ, ದಂಪತಿಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೪.೩೦ಕ್ಕೆ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಸಂಜೆ ೬ ಗಂಟೆಗೆ ಕುಶಾಲನಗರದ ವಾಸವಿ ಮಹಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ರವಿಶಂಕರ್ ಉದ್ಘಾಟಿಸಲಿದ್ದಾರೆ ಎಂದರು.

ಜೂ.೪ರAದು ಬೆಳಗ್ಗೆ ೭ ಗಂಟೆಗೆ ಎಲ್ಲಾ ದೇವರುಗಳಿಗೆ ಪಂಚಾಮೃತ ಮಧ್ಯಾಹ್ನ ೨ ಗಂಟೆಗೆ ದೇವಸ್ಥಾನದಲ್ಲಿ ಊರಿನ ಸೊಸೆಯಂದಿರಿಗೆ ಮಡಿಲಕ್ಕಿ ತುಂಬುವುದು, ಸಂಜೆ ೫ರಿಂದ ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜೂ.೨ರಂದು ಬೆಳಿಗ್ಗೆ ೬.೩೦ ಗಂಟೆಗೆ ಮೂಲ ದೇವರ ಪ್ರಾರ್ಥನೆಯೊಂದಿಗೆ ಸಂಜೆ ೬.೩೦ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆÉ ಎಂದು ತಿಳಿಸಿದರು.

ಜೂ.೩ರಂದು ಬೆಳಿಗ್ಗೆ ೮ ಗಂಟೆಗೆ ದೇವರಿಗೆ ಪಂಚಾಮೃತ ಅಭಿಷೇಕ ‘ಚಂಡಿಕಾ ಹೋಮ’ ಸುಹಾಸಿನಿ ಪೂಜೆ, ಕನ್ನಿಕಾಪೂಜೆ, ದಂಪತಿಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೪.೩೦ಕ್ಕೆ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಸಂಜೆ ೬ ಗಂಟೆಗೆ ಕುಶಾಲನಗರದ ವಾಸವಿ ಮಹಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ರವಿಶಂಕರ್ ಉದ್ಘಾಟಿಸಲಿದ್ದಾರೆ ಎಂದರು.

ಜೂ.೪ರAದು ಬೆಳಗ್ಗೆ ೭ ಗಂಟೆಗೆ ಎಲ್ಲಾ ದೇವರುಗಳಿಗೆ ಪಂಚಾಮೃತ ಅಭಿಷೇಕ, ಪ್ರಧಾನ ಮೂಲಮಂತ್ರ ಹೋಮ, ದೇವರಿಗೆ ಕಲಶ ಅಭಿಷೇಕ, ಕುಂಭಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದ್ದು, ಸಂಜೆ ೫.೩೦ ಗಂಟೆಗೆ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಅಮ್ಮನವರ ಪುರಮೆರವಣಿಗೆಯನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಜೂ.೫ರಂದು ಅಭಿಷೇಕ, ಹೋಮ, ಮಹಾಪೂಜೆ, ಕಂಕಣವಿಸರ್ಜನೆ, ಮಹಾಮಂಗಳಾರತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆರ್ಯವೈಶ್ಯ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಆರ್ ನಾಗೇಂದ್ರ ಪ್ರಸಾದ್, ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷ ನಾಗೇಂದ್ರ ಗುಪ್ತ, ಖಜಾಂಚಿ ಬಿ.ಆರ್ ನಟರಾಜ್ ಹಾಜರಿದ್ದರು.