ಮಡಿಕೇರಿ, ಮೇ ೧೪: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾಟದಲ್ಲಿ ಪಡಿಕಲ್, ಮುಕ್ಕಾಟಿ (ಬಿ), ಕಾಂಗೀರ, ಪೂಳಕಂಡ ಕುಟುಂಬದ ತಂಡಗಳು ಸೆಮಿ ಫೈನಲ್ ಪ್ರವೇಶಿಸಿವೆ.

ಚೆರಿಯಮನೆ ಮುಕ್ಕಾಟಿ (ಬಿ) ನಡುವೆ ನಡೆದ ಪಂದ್ಯಾಟದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮುಕ್ಕಾಟಿ ೪ ಗೋಲು ದಾಖಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಚೆರಿಯಮನೆ ೩ ಗೋಲು ದಾಖಲಿಸಿ ಸೋಲುಂಡಿತು. ೨-೦ ಗೋಲುಗಳ ಅಂತರದಲ್ಲಿ ಮಗೇರನ ವಿರುದ್ಧ ಮಞಂಡ್ರ ಗೆಲುವು ಪಡೆಯಿತು. ಮಞಂಡ್ರ ಪರ ವಿನು ೨ ಗೋಲು ದಾಖಲಿಸಿದರು.

೧-೧ ಗೋಲುಗಳ ಸಮಬಲ ಸಾಧಿಸಿ ಪೆನಾಲ್ಟಿ ಶೂಟೌಟ್‌ನಲ್ಲಿ ಬಡುವಂಡ್ರ ವಿರುದ್ಧ ಕಾಂಗೀರ ೫-೩ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಶೂಟೌಟ್‌ನಲ್ಲಿ ಕಾಂಗೀರ ೫ ಗೋಲು ದಾಖಲಿಸಿದರೆ ಬಡುವಂಡ್ರ ೩ ಗೋಲು ಬಾರಿಸಿತು. ಪೊನ್ನಚ್ಚನ ಹಾಗೂ ಕಲ್ಲುಮುಟ್ಲು ೧-೧ ಸಮಬಲ ಸಾಧಿಸಿ ಡ್ರಾ ಆದ ಪರಿಣಾಮ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದರಲ್ಲಿ ಪೊನ್ನಚ್ಚನ ವಿಜಯ ಸಾಧಿಸಿತು.

ಕಾಂಗೀರ ಹಾಗೂ ಮಞಂಡ್ರ ನಡುವಿನ ಪಂದ್ಯದಲ್ಲಿ ಕಾಂಗೀರ ೨-೦ ಗೋಲುಗಳ ಅಂತರದಲ್ಲಿ ಗೆದ್ದಿತ್ತು. ಕಾಂಗೀರ ಪರ ಕುನಾಲ್, ಮುರುಳಿ ತಲಾ ಒಂದೊAದು ಗೋಲು ಬಾರಿಸಿದರು. ಕೊಂಪುಳೀರ ಹಾಗೂ ಪೂಳಕಂಡ ಸಮಬಲ ಸಾಧಿಸಿದ ಹಿನ್ನೆಲೆ ಪೆನಾಲ್ಟಿ ಶೂಟೌಟ್‌ನಲ್ಲಿ ಪೂಳಕಂಡ ಗೆಲುವಿನ ನಗೆ ಬೀರಿತು. ದೇವಜನ ವಿರುದ್ಧ ಪಡಿಕಲ್ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.