ಸೋಮವಾರಪೇಟೆ, ಮೇ ೧೪: ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಕಲ್ಪದೊAದಿಗೆ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಜಿಲ್ಲೆಯಿಂದ ೫೦೦ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಸೋಮವಾರಪೇಟೆ ಹಾಗೂ ಕುಶಾಲನಗರ ಭಾಗದಿಂದ ೧೨ ಬಸ್‌ಗಳ ಮೂಲಕ ಕಾರ್ಯಕರ್ತರು ಬೆಂಗಳೂರಿನ ನೆಲಮಂಗಲಕ್ಕೆ ತೆರಳಿದರು. ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಕಲ್ಪದೊAದಿಗೆ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜನತಾ ಜಲಧಾರೆ ಜಾಗೃತಿ ಜಾಥಾ ಯಶಸ್ವಿಯಾಗಿದೆ. ರಾಜ್ಯದ ಜನತೆ ಹಾಗೂ ರೈತರ ಮೆಚ್ಚುಗೆಗೆ ಪಾತ್ರವಾದ ಈ ಯೋಜನೆಗೆ ಜಿಲ್ಲೆಯಿಂದಲೂ ಉತ್ತಮ ಸ್ಪಂದನ ದೊರೆತಿದೆ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಅಭಿಪ್ರಾಯಿಸಿದ್ದಾರೆ.

ಈ ಸಂದರ್ಭ ಪಕ್ಷದ ಮುಖಂಡರಾದ ಅಜ್ಜಳ್ಳಿ ರವಿ, ಎಂ.ಎ. ರುಬೀನಾ, ಪಿ.ಡಿ. ರವಿ, ಎಚ್.ಡಿ. ಚಂದ್ರು, ರಾಮಣ್ಣ, ಪ್ರಸನ್ನ, ವಿಜಯಕುಮಾರ್, ಬೋಜಪ್ಪ, ತಮ್ಮಯ್ಯ, ಸಂಭ್ರಮ್, ಅಜಿತ್, ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.