ಗೋಣಿಕೊಪ್ಪ ವರದಿ, ಮೇ ೧೪: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯಾಟದಲ್ಲಿ ೮ ತಂಡಗಳು ಪ್ರಿಕ್ವಾರ್ಟರ್‌ಗೆ ಪ್ರವೇಶ ಪಡೆದಿದ್ದು, ರೋಚಕ ಹಣಾಹಣಿ ಕಂಡು ಬಂತು.

ಅಚ್ಚಪAಡವು ಮಣವಟ್ಟೀರವನ್ನು ೭ ವಿಕೆಟ್‌ಗಳಿಂದ ಸೋಲಿಸಿತು. ಮಣವಟ್ಟೀರ ೪ ವಿಕೆಟ್ ಕಳೆದುಕೊಂಡು ೫೧ ರನ್ ಗುರಿ ನೀಡಿತು. ಅಚ್ಚಪಂಡ ೪ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

ಮುಕ್ಕಾಟೀರ (ಮಾದಾಪುರ) ತಂಡಕ್ಕೆ ಮುಂಡAಡ ವಿರುದ್ಧ ೧ ರನ್‌ಗಳ ರೋಚಕ ಗೆಲುವು ದೊರೆಯಿತು. ಮುಕ್ಕಾಟೀರ ೨ ವಿಕೆಟ್ ಕಳೆದುಕೊಂಡು ೫೮ ರನ್ ಗುರಿ ನೀಡಿತು. ಮುಂಡAಡ ೨ ವಿಕೆಟ್ ಕಳೆದುಕೊಂಡು ೫೬ ರನ್ ಗಳಿಸಿತು.

ಕುಟ್ಟಂಡ (ಕಾರ್ಮಾಡು) ತಂಡ ಕೊಟ್ಟಂಗಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಕೊಟ್ಟಂಗಡ ೬ ವಿಕೆಟ್ ಕಳೆದುಕೊಂಡು ೩೪ ರನ್ ಗಳಿಸಿತು. ಕುಟ್ಟಂಡ ೩.೩ ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಕರೋಟೀರವು ಕೋಟ್ರಂಗಡ ವಿರುದ್ಧ ೮ ವಿಕೆಟ್ ಜಯ ಸಾಧನೆ ಮಾಡಿತು. ಕೋಟ್ರಂಗಡ ೫ ವಿಕೆಟ್ ಕಳೆದುಕೊಂಡು ೪೪ ರನ್ ಸಂಪಾದಿಸಿತು. ಕರೋಟೀರ ೩.೨ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿತು.

ನೆರವಂಡವು ಮಾಳೇಟೀರ (ಕೆದಮುಳ್ಳೂರು) ತಂಡವನ್ನು ೧೦ ರನ್‌ಗಳಿಂದ ಮಣಿಸಿತು. ನೆರವಂಡ ೧ ವಿಕೆಟ್ ಕಳೆದುಕೊಂಡು ೫೬ ರನ್ ಪೇರಿಸಿತು. ಮಾಳೇಟೀರ ೨ ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಲಷ್ಟೆ ಶಕ್ತವಾಯಿತು.

ಅಣ್ಣಳಮಾಡವು ಹಂಚೇಟೀರವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಹಂಚೇಟೀರ ೩ ವಿಕೆಟ್ ನಷ್ಟಕ್ಕೆ ೩೪ ರನ್ ಸಂಪಾದಿಸಿತು. ಅಣ್ಣಳಮಾಡ ೩ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಐದು ಬಾರಿಯ ರನ್ನರ್‌ಅಪ್ ಸ್ಥಾನ ಪಡೆದಿರುವ ಅಳಮೇಂಗಡ ಚಿರಿಯಪಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಚಿರಿಯಪಂಡ ತಂಡದ ೮ ವಿಕೆಟ್ ಕಬಳಿಸುವಲ್ಲಿ ಅಳಮೇಂಗಡ ಯಶಸ್ವಿಯಾಯಿತು. ಚಿರಿಯಪಂಡ ೮ ವಿಕೆಟ್ ನಷ್ಟಕ್ಕೆ ೩೩ ರನ್ ಗುರಿ ನೀಡಿತು. ಅಳಮೇಂಗಡ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಅಳಮೇಂಗಡ ಸೋಮಯ್ಯ ೨೧ ರನ್ ಸಿಡಿಸಿದರು. ಅಳಮೇಂಗಡ ದಿಪಿನ್ ಕೇವಲ ೪ ರನ್ ನೀಡಿ ೩ ವಿಕೆಟ್ ಪಡೆದರು.

ಬೊಟ್ಟಂಗಡವು ಮೇಕೇರಿರ ವಿರುದ್ಧ ೪೦ ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಬೊಟ್ಟಂಗಡ ವಿಕೆಟ್ ನಷ್ಟವಿಲ್ಲದೆ ೫೭ ರನ್ ಸಂಪಾದಿಸಿತು. ಮೇಕೇರಿರ ಪ್ರಮುಖ ೭ ವಿಕೆಟ್ ಕಳೆದುಕೊಂಡು ೧೮ ರನ್‌ಗೆ ಕುಸಿಯಿತು. ಬೊಟ್ಟಂಗಡ ಬೌಲಿಂಗ್‌ನಲ್ಲಿ ಕೂಡ ಅಮೋಘ ಪ್ರದರ್ಶನ ನೀಡಿತು.

ಪ್ರೀ ಕ್ವಾರ್ಟರ್‌ಗೆ ಮರೆನಾಡಿನ ೩ ತಂಡಗಳು: ಮರೆನಾಡಿಗೆ ಒಳಪಡುವ ಮೂರು ತಂಡಗಳಾದ ಚಾಂಪಿಯನ್ ಕಳಕಂಡ ಸೇರಿದಂತೆ ಅಣ್ಣಳಮಾಡ ಮತ್ತು ಬೊಟ್ಟಂಗಡ ತಂಡಗಳು ಪ್ರೀ ಕ್ವಾರ್ಟರ್ ಹಂತಕ್ಕೆ ತಲುಪಿರುವ ಬಗ್ಗೆ ಮರೆನಾಡು ಕ್ರೀಡಾಭಿಮಾನಿಗಳಲ್ಲಿ ಕುತೂಹಲ ವ್ಯಕ್ತವಾಯಿತು.

ಹಂಚೇಟೀರ ಶರತ್, ಮೇಕೇರಿರ ಮಿಥುನ್, ಮಾಳೇಟೀರ ರಿಶಬ್, ಕೋಟ್ರಂಗಡ ನಿತಿನ್, ಚಿರಿಯಪಂಡ ಸುಬ್ಬಯ್ಯ, ಕೊಟ್ಟಂಗಡ ಮಧು, ಮುಂಡAಡ ಪವನ್, ಮಣವಟ್ಟೀರ ದೀಪಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.