ಮಡಿಕೇರಿ, ಮೇ ೧೩ : ಪೃಕೃತಿಯಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ; ಹಾಗಾಗಿ ಮುಂದೆ ಎದುರಾಗ ಬಹುದಾದ ಪ್ರಾಕೃತಿಕ ವಿಕೋಪ ಎದುರಿಸಲು ಎಲ್ಲ ಅಧಿಕಾರಿಗಳು ಸನ್ನದ್ಧರಾಗುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಸೂಚನೆ ನೀಡಿದ್ದಾರೆ.ಮಳೆ ಹಾನಿ ಪರಿಹಾರ ಸಂಬAಧಿಸಿದAತೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸಚಿವರು ಮಾತ ನಾಡಿದರು. ಜಿಲ್ಲೆಯಲ್ಲಿ ಬಹುತೇಕ ಅಧಿಕಾರಿಗಳು ಎರಡು ಪ್ರಕೃತಿ ವಿಕೋಪಗಳನ್ನು ನೋಡಿದವ ರಾಗಿದ್ದೀರಿ. ನಿಮ್ಮ ಅನುಭವಗಳನ್ನು ಧಾರೆ ಎರೆಯಬೇಕು, ಶಾಸಕರುಗಳು ಕೂಡ ಅನುಭವಸ್ಥರಾಗಿದ್ದು, ಅವರುಗಳು ನಿಮ್ಮ ಸಹಾಯಕ್ಕೆ ಬರುತ್ತಾರೆ. ತುರ್ತು ಸಂದರ್ಭಗಳಲ್ಲಿ ಯಾರೂ ಕೂಡ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ; ಮೊಬೈಲ್ ಸ್ವಿಚ್ ಆಫ್ ಮಾಡುವಂತಿಲ್ಲ ಎಂದು ಹೇಳಿದರು. ವಿಜ್ಞಾನ ಎಷ್ಟೇ ಮುಂದುವರಿದರೂ ಮುಂದೆ ಏನಾಗುತ್ತದೋ ಎಂದು ಹೇಳಲಾಗುವದಿಲ್ಲ, ನಾವು ಜಾಗೃತರಾಗಿರಬೇಕು. ಎಲ್ಲರೂ ಜೊತೆಗಿರಬೇಕು. ಸಂಬAಧಿಸಿದ ಇಲಾಖೆ ಮುಂದಕ್ಕೆ ಹೋಗುತ್ತಿರುವಾಗ ಉಳಿದ ಎಲ್ಲ ಇಲಾಖೆಗಳು ಹಿಂದೆ ಸಾಗಬೇಕು. ರಜಾ ದಿನಗಳೆಂದು ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಎಲ್ಲರೂ ತಮ್ಮ ಪೂರ್ಣ ಶಕ್ತಿ ಹಾಕಿ ಜನ ಸಾಮಾನ್ಯರಿಗೆ, ಜಾನುವಾರುಗಳಿಗೆ ತೊಂದರೆ ಆಗದಂತೆ ನೋಡಿ ಕೊಳ್ಳಬೇಕು. ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು. ಸರಕಾರ ನಿಮ್ಮೊಂದಿಗೆ ಇದ್ದೇ ಇರುತ್ತದೆ ಎಂದು ಧೈರ್ಯ ತುಂಬಿದರು. ದೇವರ ದಯೆಯಿಂದ ಯಾವದೇ ಅನಾಹುತ ಆಗದಿರಲಿ ಎಂದು ಇದೇ ಸಂದರ್ಭ ಬೇಡಿಕೊಂಡರು.

ಈಗಲೇ ತಯಾರಾಗಿ

ಇನ್ನೇನು ಮುಂದಿನ ತಿಂಗಳಲ್ಲಿ ಮುಂಗಾರು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಿರುವ ಪ್ರದೇಶಗಳಲ್ಲಿ ಮರದ ಕೊಂಬೆಗಳನ್ನು ಕಡಿಯುವದಲ್ಲದೆ, ಗ್ಯಾಂಗ್‌ಮೆನ್, ವಾಹನಗಳನ್ನು ಸಿದ್ಧಪಡಿಸಿಕೊಂಡು ಈಗಿನಿಂದಲೇ ತಯಾರಾಗಿರುವಂತೆ ಕೆಪಿಟಿಸಿಎಲ್, ಸೆಸ್ಕ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಕೂಡಲೇ ತೆರವು ಗೊಳಿಸಬೇಕು, ವಿದ್ಯುತ್ ಕಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಸ್ತಾನಿರಿಸಿ ಕೊಳ್ಳುವಂತೆ ತಿಳಿಸಿದರು. ಕೆಪಿಟಿಸಿಎಲ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವದಿಲ್ಲ, ಕರೆ ಮಾಡಿದರೂ ಸ್ವೀಕರಿಸುವದಿಲ್ಲವೆಂದು ಶಾಸಕರು ಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳು ಸಚಿವರ ಗಮನಕ್ಕೆ ತಂದರು.

ಗ್ರಾಮ ಮಟ್ಟದಲ್ಲಿ ಸಂಪರ್ಕ

ಪ್ರಕೃತಿ ವಿಕೋಪ ಸಂಭವಿಸುವ ಸಂದರ್ಭ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಸಂಪರ್ಕ ಕೇಂದ್ರಗಳನ್ನು ತೆರೆಯಬೇಕೆಂದು ಸಚಿವರು ಹೇಳಿದರು. ಈ ಸಂದರ್ಭ ಮಾಹಿತಿ ನೀಡಿದ ಸಹಾಯವಾಣಿ ಕೇಂದ್ರದ ಅಧಿಕಾರಿ ಜನರ ಸೇವೆಗಾಗಿ ಸಹಾಯವಾಣಿ ತೆರೆಯಲಾಗಿದ್ದು, ೧೦೭೭ ಸಂಖ್ಯೆಗೆ ಕರೆ ಮಾಡಿದರೆ ಕೂಡಲೇ ಸ್ಪಂದಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ಪ್ರತಿ ಗ್ರಾಮ ಮಟ್ಟದಲ್ಲಿ ಗ್ರಾ.ಪಂ.ಅಧ್ಯಕ್ಷರಾದಿಯಾಗಿ ಗ್ರಾಮಸ್ಥರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಅವಶ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ತೆರೆÀದು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ, ಮರ ತುಂಡರಿಸಲು ಯಂತ್ರ, ಜೆಸಿಬಿಗಳನ್ನು ಸಿದ್ಧತೆ ಮಾಡಿಕೊಳ್ಳುವ

(ಮೊದಲ ಪುಟದಿಂದ) ಜವಾಬ್ದಾರಿಯನ್ನು ಗ್ರಾ.ಪಂ.ಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

೧೦೬.೪೬ ಲಕ್ಷ ಪರಿಹಾರ

೨೦೨೧-೨೨ನೇ ಸಾಲಿನಲ್ಲಿ ಮನೆಹಾನಿ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ೧೭೮ ಮನೆಗಳಿಗೆ ರೂ.೧೦೬.೪೬ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ನಂಜುAಡೇಗೌಡ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು; ಕಾಟಾಚಾರಕ್ಕೆ ವರದಿ ಕೊಡಬೇಡಿ, ತಹಶೀಲ್ದಾರರು, ಕಂದಾಯ ನಿರೀಕ್ಷಕರು ಸ್ಥಳಗಳಿಗೆ ಭೇಟಿ ನೀಡುವದಿಲ್ಲ. ಗ್ರಾಮ ಲೆಕ್ಕಿಗರು ನೀಡುವ ವರದಿ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ. ೨೦೧೮ರಲ್ಲಿ ಸಂಭವಿಸಿದ ವಿಕೋಪಕ್ಕೆ ಸಿಲುಕಿದ ಬಹಳಷ್ಟು ಮಂದಿ ಅಪಾಯಕಾರಿ ಸ್ತಿತಿಯಲ್ಲಿರುವ ಮನೆಗಳಲ್ಲಿ ವಾಸಿಸಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅಂತಹವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸತೀಶ ಅವರು; ೨೦೧೮ರಲ್ಲಿ ಸಂಪೂರ್ಣ ಹಾನಿಗೀಡಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಇನ್ನೂ ಕೆಲವರು ವಾಸ ಮಾಡಲು ಸಾಧ್ಯವಿಲ್ಲವೆಂದು ಮನೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಮನೆ ಪಡೆದು ಬೀಗ ಹಾಕಿಕೊಂಡಿದ್ದನ್ನು ಪತ್ತೆ ಹಚ್ಚಿ ವಾಪಸ್ ಪಡೆಯಲಾಗಿದೆ. ಆದ್ಯತೆ ಮೇರೆಗೆ ಪರಿಶೀಲಿಸಲಾಗುವದೆಂದು ಹೇಳಿದರು.

ಮಹಿಳೆಗೆ ನೆರವು

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ; ಮಕ್ಕಂದೂರು ಪಂಚಾಯ್ತಿ ವ್ಯಾಪ್ತಿಯ ಕುದುರೆಬೆಟ್ಟ ನಿವಾಸಿ ಲಲಿತ ಎಂಬ ಮಹಿಳೆಗೆ ಸೇರಿದ ನಾಲ್ಕು ಎಕರೆ ಕಾಫಿ ತೋಟ ೨೦೧೮ರಲ್ಲಿ ಕೊಚ್ಚಿಹೋಗಿದ್ದು, ಆಘಾತದಿಂದ ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ದುಡಿಯಲು ಆಗುತ್ತಿಲ್ಲ, ಸರಕಾರ ಆಕೆಯ ನೆರವಿಗೆ ಬರಬೇಕೆಂದು ಮನವಿ ಮಾಡಿದರು. ಸ್ಪಂದಿಸಿದ ಸಚಿವರು ಮಾನವೀಯ ದೃಷ್ಟಿಯಿಂದ ಆಕೆಯನ್ನು ಕರೆತಂದು ನೆರವು ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗೆ ಸೂಚಿಸಿದರು.

ಮಳೆಹಾನಿ ಪರಿಹಾರಕ್ಕೆ ಸಂಬAಧಿಸಿದAತೆ ಜಿಲ್ಲಾ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡಬೇಕು, ಜಿಲ್ಲೆಗೆ ಸೀಮೆ ಎಣ್ಣೆ ಒದಗಿಸಬೇಕು, ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸರಿ ಇರುವದಿಲ್ಲ; ಜಿಲ್ಲೆಗೆ ಹೆಚ್ಚಿಗೆ ಪವರ್‌ಮೆನ್‌ಗಳನ್ನು ಒದಗಿಸಬೇಕೆಂದು ಸಚಿವರ ಗಮನ ಸೆಳೆದರು.

ನದಿ ಪಾತ್ರದಲ್ಲಿ ಮನೆ

ರಾಜ್ಯ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ೨೦೧೮ರಲ್ಲಿ ಪ್ರಕೃತಿ ವಿಕೋಪ ಸಂಭವಿಸಲು ಕಾರಣವನ್ನು ತಿಳಿಸಿದರಲ್ಲದೆ, ನದಿ ಪಾತ್ರದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದರು.

ಗೊಬ್ಬರ ದಾಸ್ತಾನು ಇಟ್ಟುಕೊಳ್ಳಿ

ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಕೊರತೆ ಇರುವ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಸಭೆಯ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನ ಶೇಖ್ ಸದ್ಯದ ಮಟ್ಟಿಗೆ ಗೊಬ್ಬರ ದಾಸ್ತಾನು ಇದೆ ಎಂದು ಹೇಳಿದರು. ಮೇ ಹಾಗೂ ಜೂನ್ ತಿಂಗಳಿನಲ್ಲಿ ಜಿಲ್ಲೆಗೆ ೨೦ಸಾವಿರ ಟನ್‌ನಷ್ಟು ಗೊಬ್ಬರದ ಅಗತ್ಯತೆ ಇರಲಿದೆ. ಹಾಗಾಗಿ ಕೊರತೆ ಉಂಟಾಗದAತೆ ಜಾಗೃತೆ ವಹಿಸಬೇಕು, ಕೊರತೆಯಾದಲ್ಲಿ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದರು. ಪ್ರತಿಕ್ರಿಯಿಸಿದ ಸಚಿವರು, ಯಾವದೇ ಕಾರಣಕ್ಕೂ ಗೊಬ್ಬರ ಕೊರತೆಯಾಗದಂತೆ ಈಗಿನಿಂದಲೇ ದಾಸ್ತಾನು ಮಾಡಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಇದ್ದರು.

ರಸಗೊಬ್ಬರವನ್ನು ಕೇರಳಕ್ಕೆ ಸಾಗಾಟ ಮಾಡಲೆತ್ನಿಸಿದ ಮಾರಾಟಗಾರರ ಪರವಾನಗಿಯನ್ನು ರದ್ದುಪಡಿಸುವಂತೆ ಶಾಸಕ ರಂಜನ್ ಹೇಳಿದರಲ್ಲದೆ, ಗಡಿ ಭಾಗಗಳಲ್ಲಿ ಹೆಚ್ಚಿನ ತಪಾಸಣೆ ಮಾಡಲು ಕ್ರಮಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರಿಗೆ ಸೂಚಿಸಿದರು.