ಮಡಿಕೇರಿ, ಮೇ ೧೩: ಕ್ಷÄಲ್ಲಕ ಕಾರಣಕ್ಕೆ ಅರಣ್ಯ ಇಲಾಖೆಯ ರಕ್ಷಕನ ಕೈಯನ್ನು ಕತ್ತರಿಸಿದ ಘಟನೆ ಮಡಿಕೇರಿ ತಾಲೂಕಿನ ಕಾಲೂರು ಸಮೀಪದ ಕಾನೆಕಂಡಿ ಬಳಿ ನಡೆದಿದೆ. ಗಾಳಿಬೀಡು ಅರಣ್ಯ ವಲಯದ ಗಾರ್ಡ್ ಆಗಿರುವ ಸಂಜೀವ (ಅಣ್ಣಪ್ಪ ರೈ-೫೯) ಗಾಯಾಳು ಆಗಿದ್ದು, ಕೈ ಕತ್ತರಿಸಿದ ಆರೋಪಿ ತಿಮ್ಮಯ್ಯ (ಸಣ್ಣಕ್ಕ - ೫೨) ಕೃತ್ಯ ನಡೆಸಿ ಅರಣ್ಯದಲ್ಲಿ ತಲೆಮರೆಸಿ ಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಗಾಯಾಳು ಸಂಜೀವ ಹಾಗೂ ಆರೋಪಿ ತಿಮ್ಮಯ್ಯ ಇಬ್ಬರು ಒಂದೇ ಊರಿನವರಾಗಿದ್ದಾರೆ. ತಿಮ್ಮಯ್ಯ ಮನೆ ಪಕ್ಕದಲ್ಲಿ ಕಸ ವಿಲೇವಾರಿ ಘಟಕ ಮಾಡಲು ಉದ್ದೇಶಿಸಲಾಗಿದೆ. ಇದೇ ವಿಚಾರ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ.

ಬುಧವಾರ ಬೆಳಿಗ್ಗೆ ೧೦.೩೦ ರ ವೇಳೆಗೆ ಸಂಜೀವ ಕೆಲಸಕ್ಕೆಂದು ತೆರಳುವುದನ್ನು ನೋಡಿ ತಿಮ್ಮಯ್ಯ ಆತನನ್ನು ಅಡ್ಡಗಟ್ಟಿ ‘ನೀನು ನನ್ನ ಮನೆಯ ಪಕ್ಕದ ಜಾಗದಲ್ಲಿ ಗ್ರಾಮದ ಕಸ ಹಾಕಲು ಸೂಕ್ತ ಎಂದು ಅಧಿಕಾರಿಗಳಿಗೆ ತಿಳಿಸಿದ್ದೀಯ. ಆದ್ದರಿಂದ ನನ್ನ ಮನೆ ಪಕ್ಕದಲ್ಲಿ ಕಸ ವಿಲೇವಾರಿ ಘಟಕ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾನೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕತ್ತಿಯಿಂದ ತಿಮ್ಮಯ್ಯ ಸಂಜೀವನ ಎಡಗೈಗೆ ಬೀಸಿದ್ದಾನೆ. ಪರಿಣಾಮ ಎಡಗೈನ ಹಸ್ತದ ಪೂರ್ಣ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದೆ.

ಬಳಿಕ ಅಲ್ಲಿಂದ ಕೋವಿ ಹಾಗೂ ಕತ್ತಿಯ ಸಹಿತ ಅರಣ್ಯಕ್ಕೆ ನುಗ್ಗಿರುವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಧ್ಯಾಹ್ನ

(ಮೊದಲ ಪುಟದಿಂದ) ೨ ಗಂಟೆ ಹೊತ್ತಿಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಇವರಿಬ್ಬರ ನಡುವೆ ಬೇರೆ ಬೇರೆ ವಿಚಾರಕ್ಕೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ತುಂಡಾಗಿರುವ ಹಸ್ತದ ಭಾಗವನ್ನು ಜೋಡಿಸಲು ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಸಂಜೀವನನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.