ನಾಪೋಕ್ಲು, ಮಾ. ೨೬: ನಗರದ ಮಹಿಳಾ ಸಮಾಜದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅಂಕೂರ್ ಶಾಲೆಯ ಪ್ರಾಂಶುಪಾಲೆ ಕೇಟೋಳಿರ ರತ್ನ ಚರ್ಮಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನಗಳ ಕುರಿತು ವಿವರಣೆ ನೀಡಿದರು.

ಮಹಿಳೆಯರು ಕಷ್ಟ ಬಂದಾಗ ಹಿಂಜರಿಯುವುದನ್ನು ಬಿಟ್ಟು ಅದನ್ನು ತಾಳ್ಮೆಯಿಂದ ಎದುರಿಸಿ ಮುಂದೆ ಬರಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೇಟಿರ ರೇಷ್ಮಾ ಉತ್ತಪ್ಪ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿಯೂ ಸಬಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರುಗಳಾದ ಮುಂಡAಡ ಸುಶೀಲಾ ಸೋಮಣ್ಣ, ಕೇಟೋಳಿರ ಶಾರದ ಪಳಂಗಪ್ಪ, ಬಿದ್ದಾಟಂಡ ಗಿರಿಜ ಬೋಪಣ್ಣ, ಅಪ್ಪಾರಂಡ ಡೇಸ್ಸಿ ತಿಮ್ಮಯ್ಯ, ಪುಲ್ಲೇರ ಪದ್ಮಿನಿ, ಕಾರ್ಯದರ್ಶಿ ರಾಜೇಶ್ವರಿ ಮತ್ತಿತರರು ಇದ್ದರು.