ನಾಪೋಕ್ಲು, ಮಾ. ೨೪: ಸಮೀಪದ ಕಕ್ಕುಂದಕಾಡಿನ ಲಕ್ಷಿö್ಮÃ ವೆಂಕಟೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವವು ಏ. ೮ ರಿಂದ ಏ. ೧೦ ರವರೆಗೆ ನಡೆಯಲಿದೆ. ಏ. ೮ ರಂದು ಸಂಜೆ ಧ್ವಜಾರೋಹಣ, ದೀಪಾರಾಧನೆ, ಮಹಾಪೂಜೆ ದೇವರ ಬಲಿ ನಡೆಯಲಿದ್ದು, ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಏ. ೯ ರಂದು ಮಧ್ಯಾಹ್ನ ಮಹಾಪೂಜೆಯ ಬಳಿಕ ದೇವರ ಬಲಿ ನಡೆಯಲಿದೆ. ಸಂಜೆ ವಾದ್ಯಗೋಷ್ಠಿಯೊಂದಿಗೆ ದೇವರ ಉತ್ಸವ ಮೂರ್ತಿಯನ್ನು ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ರಾತ್ರಿ ದೇವರ ದರ್ಶನ ಬಲಿ, ವಸಂತಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಏ. ೧೦ ರಂದು ಶುದ್ಧನವಕಲಶದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.