ವೀರಾಜಪೇಟೆ, ಜ. ೨೭: ಸ್ನೇಹಿತನ ಭೇಟಿಗೆಂದು ಬೈಕ್‌ನಲ್ಲಿ ತೆರಳಿದ ಯುವಕ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ನಗರದ ಚಿಕ್ಕಪೇಟೆ ನಿವಾಸಿ ಕಾವೇರಿ ಆಟೋ ಮತ್ತು ಲಘು ವಾಹನ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಜೆ.ಎನ್. ರಾಜ ಅವರ ಪುತ್ರ ಜೆ.ಆರ್. ಯಶ್ವಂತ್ (೨೬) ಮೃತಪಟ್ಟ ದುರ್ಧೈವಿ.
ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಕೋವಿಡ್ ಪರಿಸ್ಥಿತಿ ಹಿನ್ನೆಲೆ ‘ವರ್ಕ್ ಫ್ರಂ ಹೋಂ’ ಮೂಲಕ ಮನೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು.
ತಾ. ೨೬ ರಂದು ಸಂಜೆ ವೇಳೆಗೆ ಸ್ನೇಹಿತನನ್ನು ಭೇಟಿ ಮಾಡಿ ಬರುತ್ತೇನೆ ಎಂದು ಯಶ್ವಂತ್ ತನ್ನ ಬೈಕ್‌ನಲ್ಲಿ ಕೆದಮುಳ್ಳೂರು ಗ್ರಾಮಕ್ಕೆ ತೆರಳುತಿದ್ದು, ಈ ಸಂದರ್ಭ ಕೆದಮುಳ್ಳೂರು ಗ್ರಾಮ ಮಂಜಮರ ಜಂಕ್ಷನ್‌ನಿAದ ಅನತಿ ದೂರದಲ್ಲಿ ಎದುರಿನಿಂದ ವೀರಾಜಪೇಟೆ ನಗರಕ್ಕೆ ಬರುತ್ತಿದ್ದ ಟ್ರಾö್ಯಕ್ಟರ್ ವಾಹನಕ್ಕೆ ಡಿಕ್ಕಿಯಾಗಿದೆ.
ಪರಿಣಾಮ ದ್ವಿಚಕ್ರ ಸವಾರನ ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದಿದ್ದಾನೆ. ಮೃತನ ತಂದೆ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ