ಮಡಿಕೇರಿ, ಜ. ೨೭: ಗ್ರಾಮೀಣ ಪ್ರದೇಶದ ಜನರು ಸರಕಾರಿ ಸಂಬAಧಿತ ಕೆಲಸಗಳಿಗೆ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಡಿಜಿಟಲೀಕರಣದ ಮೂಲಕ ದಾಖಲೆಗಳನ್ನು ಪಡೆದುಕೊಳ್ಳಲು ಸುಲಭಗೊಳಿಸಲು ಸರಕಾರ ವಿನೂತನ ಯೋಜನೆಯೊಂದನ್ನು ರೂಪಿಸಿದ್ದು, ಕೊಡಗು ಜಿಲ್ಲೆ ಸೇರಿದಂತೆ ೧೨ ಜಿಲ್ಲೆಗಳಲ್ಲಿ ‘ಗ್ರಾಮ ಒನ್’ ಯೋಜನೆಗೆ ಚಾಲನೆ ನೀಡಲಾಗಿದೆ.
ರಾಜ್ಯ ಸರಕಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಾರ್ವಜನಿಕರಿಗೆ ಸಹಕಾರಿ ಯಾಗಲಿದೆ. ರಾಜ್ಯ ಹಾಗೂ ಕೇಂದ್ರದ ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಗ್ರಾಮಗಳಲ್ಲಿಯೇ ತಲುಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯನ್ನು ನಾಗರಿಕ ಕೇಂದ್ರಿತ ಸೇವೆಗಳಾದ ಜಿ೨ಸಿ, ಬ್ಯಾಂಕಿAಗ್, ಆರ್.ಟಿ.ಐ. ಪ್ರಶ್ನೆಗಳು ಹಾಗೂ ಇನ್ನಿತರ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೆ ತಲುಪಿಸುವ ಏಕ-ಬಿಂದು ಸಹಾಯ ಕೇಂದ್ರವಾಗಿರುವAತೆ ಚಿಂತಿಸಲಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ತಿದ್ದುಪಡಿಗೂ ಈ ವೆಬ್‌ಸೈಟ್ ಮೂಲಕ ಸರಿಪಡಿಸಲು ಅವಕಾಶ ನೀಡಲಾಗಿದೆ. ವಾರದ ಎಲ್ಲಾ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ ೮ ಗಂಟೆಯಿAದ ರಾತ್ರಿ ೮ ಗಂಟೆಯವರೆಗೆ ಕಾರ್ಯ ನಿರ್ವಹಿಸಲಿವೆ. ಗ್ರೇಡ್ ೧ ಪಂಚಾಯ್ತಿ ವ್ಯಾಪ್ತಿಯಲ್ಲಿ ಎರಡು ಕೇಂದ್ರ ತೆರೆಯಲು ಅವಕಾಶಗಳಿವೆ. ಈಗಾಗಲೇ ಜಿಲ್ಲೆಯ ೮೯ ಕಡೆಗಳಲ್ಲಿ ಕೇಂದ್ರಗಳು ಕಾರ್ಯಾರಂಭಗೊAಡಿವೆ.
ಯೋಜನೆಯಿಂದ ಕೃಷಿಕರಿಗೆ ಸಂಬAಧಿಸಿದ ಆರ್.ಟಿ.ಸಿ., ಮ್ಯೂಟೆಷನ್ ಪ್ರತಿ ಸೇರಿದಂತೆ ವಿವಿಧ ಬಗೆಯ ದಾಖಲೆಗಳು, ಪೊಲೀಸ್ ಇಲಾಖೆಗಳಿಂದ ಪಡೆಯಬಹುದಾದ ಅನುಮತಿ, ಜನನ, ಮರಣ, ಜಾತಿ, ಆದಾಯ ದೃಢೀಕರಣ ಪತ್ರಗಳು ಸೇರಿದಂತೆ ಪಡಿತರ ಚೀಟಿಯಲ್ಲಿ
(ಮೊದಲ ಪುಟದಿಂದ) ಹೆಸರು ಸೇರ್ಪಡೆ, ಆಧಾರ್ ತಿದ್ದುಪಡಿ, ವೃದ್ಧಾಪ್ಯ ವೇತನ, ವಿಧವ ವೇತನ ಸೇರಿದಂತೆ ಇನ್ನಿತರ ಅರ್ಜಿಗಳನ್ನು ಇಲ್ಲಿ ಸಲ್ಲಿಸಿ ಅದು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಕೊನೆಗೆ ಪ್ರಿಂಟ್ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ನೇರವಾಗಿ ಸಿಗಲಿದೆ ಸರಕಾರಿ ಸೇವೆ
ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಗ್ರಾಮ ಒನ್ ಕೇಂದ್ರ ತೆರೆಯುತ್ತಿದ್ದು, ನೂರಾರು ಸೇವೆಗಳು ಜನರಿಗೆ ಅವರವರ ಗ್ರಾಮಗಳಲ್ಲಿಯೇ ದೊರೆಯಲಿವೆ. ಸರಕಾರಿ ಸೇವೆಗಳನ್ನು ಪಡೆಯಲು ಸರಕಾರಿ ಕಚೇರಿಗಳಿಗೆ ಪ್ರಯಾಣಿಸುವ ಸಮಯ ಮತ್ತು ಹಣ ಖರ್ಚು ಮಾಡುವುದನ್ನು ಈ ಕೇಂದ್ರಗಳು ತಪ್ಪಿಸಲಿದ್ದು, ಸರತಿ ಸಾಲಿನಲ್ಲಿ ಸೇವೆಗಳಿಗಾಗಿ ಕಾಯುವುದು ದೂರವಾಗಲಿದೆ. ಇನ್ನು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸರಕಾರಿ ಸೇವೆಗಳು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ನಾಗರಿಕರಿಂದ ಅತ್ಯಲ್ಪ ಸೇವಾ ಶುಲ್ಕ ಮತ್ತು ಅಧಿಸೂಚಿತ ಶುಲ್ಕ ಮಾತ್ರ ಪಡೆಯಲಾಗುತ್ತದೆ.
ಕೇಂದ್ರಗಳ ಪ್ರಯೋಜನಗಳು.?
ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಜಿಲ್ಲೆ, ತಾಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ. ಗ್ರಾಮ ಒನ್ ಕೇಂದ್ರಗಳ ಸೇವೆಗಳನ್ನು ಪಡೆಯುವ ಮೂಲಕ ನಾಗರಿಕರು ಸಮಯ ಮತ್ತು ಹಣವನ್ನು ಉಳಿಸಬಹುದು. ಜೊತೆಗೆ ಗ್ರಾಮ ಮಟ್ಟದಲ್ಲಿ ಉದ್ಯೋಗಾವ ಕಾಶಗಳು ಸೃಷ್ಟಿಯಾಗುತ್ತವೆ. ಪ್ರತಿ ಗ್ರಾಮಒನ್ ಕೇಂದ್ರವು ಮೈಕ್ರೋ ಬ್ಯಾಂಕಿAಗ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಆರ್ಥಿಕ ಸೇರ್ಪಡೆಯನ್ನು ಸಾಧಿಸಲಾಗುತ್ತದೆ. ಇದರಿಂದ ಸರ್ಕಾರದ ಸೇವೆಗಳನ್ನು ಪಡೆಯಲು ನಾಗರಿಕರು ಯಾರನ್ನೂ ಅವಲಂಭಿಸಬೇಕಾಗಿಲ್ಲ. ಅರ್ಜಿ ಪ್ರಕ್ರಿಯೆಯು ಪ್ರತಿಯೊಂದು ಹಂತದಲ್ಲೂ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸಂದೇಶ ಪಡೆದ ಬಳಿಕ, ಇಲಾಖೆಯಿಂದ ಅರ್ಜಿ ಪರಿಶೀಲಿಸಿದ ನಂತರ ‘ಔಟ್‌ಪುಟ್’ ಪ್ರಮಾಣ ಪತ್ರವನ್ನು ಗ್ರಾಮಒನ್ ಕೇಂದ್ರಕ್ಕೆ ತೆರಳಿ ಪಡೆಯಬಹುದಾಗಿದೆ.
ಗ್ರಾಮ ಒನ್ ಯೋಜನೆಯು ಕೊಡಗು ಸೇರಿದಂತೆ ಬೆಳಗಾವಿ, ಹಾವೇರಿ, ವಿಜಯಪುರ, ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ವಿಸ್ತರಿಸಲಾಗುತ್ತದೆ.
ಅರ್ಹತೆಗಳೇನು..?
ಫ್ರಾಂಚೈಸ್ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್ ಕೇಂದ್ರವು ಒಂದು ವಿಶೇಷ ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್) ಹೊಂದಿರಬೇಕು. ಒಂದು ಕೌಂಟರ್‌ವುಳ್ಳ ಗ್ರಾಮ ಒನ್ ಕೇಂದ್ರಗಳು ಕನಿಷ್ಟ ೧೦೦ ಚದರ ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿಗಳು ಇರಬೇಕು. ವಾಹನ ನಿಲುಗಡೆ ವ್ಯವಸ್ಥೆ, ಕೌಂಟರ್ ಟೇಬಲ್, ಆಪರೇಟರರ್ ಕುರ್ಚಿ, ಪ್ರಿಂಟರ್ ಟೇಬಲ್, ಗ್ರಾಹಕರು ಕಾಯುವ ಕುರ್ಚಿ ಇರಬೇಕು. ಇದರೊಂದಿಗೆ ಸಿಸಿಟಿವಿ ಹಾಗೂ ಎಲ್‌ಸಿಡಿ ಟಿವಿ ಹೊಂದಿರಬೇಕು. ಕೇಂದ್ರದಲ್ಲಿ ಡೆಸ್ಕ್ಟಾಪ್/ಲ್ಯಾಪ್‌ಟಾಪ್, ವಿವಿಧ ಕಾರ್ಯಕಾರಿ ಪ್ರಿಂಟರ್, ಬಯೋಮೆಟ್ರಿಕ್ ಸ್ಕಾö್ಯನರ್, ವೆಬ್ ಕ್ಯಾಮೆರಾ, ವೈ-ಫೈ ರಿಸೀವರ್ ಹಾಗೂ ಎರಡು ಸಂಸ್ಥೆಗಳ ಅಂತರ್ಜಾಲ ಸೇವೆ ಹೊಂದಿರಬೇಕಾಗುತ್ತದೆ. ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು, ಆಸಕ್ತರು ೧ ರಿಂದ ೨ ಲಕ್ಷ ರೂ. ಬಂಡವಾಳ ಹೂಡಿಕೆ ಸಾಮರ್ಥ್ಯ ಹೊಂದಿರಬೇಕು. ಪೊಲೀಸ್ ತಪಾಸಣಾ ಪ್ರಮಾಣ ಪತ್ರ ಸಲ್ಲಿಸಬೇಕು. ಗ್ರಾಮ ಒನ್ ಕೇಂದ್ರ ಪ್ರಮುಖ ಗ್ರಾ.ಪಂ.ನ ಕೇಂದ್ರ ಸ್ಥಾನದಲ್ಲಿರಬೇಕು ಹಾಗೂ ಜನರಿಗೆ ಸುಲಭವಾಗಿ ದೊರೆಯುವಂತಿರಬೇಕಾಗಿದೆ.
- ಹೆಚ್.ಜೆ.ರಾಕೇಶ್