ಮಡಿಕೇರಿ, ಜ. ೨೬: ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ರಾಷ್ಟಿçÃಯ ಪ್ರಶಸ್ತಿ ಪುರಸ್ಕೃತರಾದ ಪಾರಾಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎಸ್. ಶಾಂತಿ ಅವರನ್ನು ಕಾಂತೂರು ಗ್ರಾಮದ ಶ್ರೀ ವಿದ್ಯಾ ವಿನಾಯಕ ಗೆಳೆಯರ ಬಳಗ, ಮಹಿಳಾ ಸ್ವಸಹಾಯ ಸಂಘ, ವಿದ್ಯಾರ್ಥಿ ಬಳಗ ಹಾಗೂ ಗ್ರಾಮಸ್ಥರು ಸನ್ಮಾನಿಸಿ, ಗೌರವಿಸಿದರು.

ಗ್ರಾಮದ ಪ್ರಮುಖರಾದ ರಾಜಪುಟ್ಟಯ್ಯ, ಬಾನು, ಗ್ರಾ.ಪಂ. ಸದಸ್ಯ ಈರ ಸುಬ್ಬಯ್ಯ, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ದರ್ಶನ್, ಕಾರ್ಯದರ್ಶಿ ಕುಮಾರ್, ಖಜಾಂಚಿ ಸುನೀಲ್, ಸಮಾಜ ಸೇವಕ ಬೋಜ ಸಣ್ಣಯ್ಯ, ಹಿರಿಯರಾದ ಕುಳ್ಳಯ್ಯ, ಶಾಂತಿ ಅವರ ಪತಿ, ಪಾರಾಣೆ ಪ್ರೌಢ ಶಾಲೆಯ ಶಿಕ್ಷಕ ಹೆಚ್.ಎಲ್. ಬೈರ ಮತ್ತಿತರರು ಉಪಸ್ಥಿತರಿದ್ದರು. ರವಿ ಸ್ವಾಗತಿಸಿದರು.