ಚೆಟ್ಟಳ್ಳಿ, ಜ. ೨೫: ಜನಾಂಗದ ಹುಟ್ಟು ಸಾವಿನೊಂದಿಗೆ ಅಡಕವಾಗಿ ದೇವರ ಗುಡಿಯಲ್ಲಿ ಪೂಜಿಸಲ್ಪಡುವ ಕೋವಿ ವಿಷಯದಲ್ಲಿ ಪದೇಪದೇ ತಗಾದೆ ತೆಗೆಯುವುದು ಒಳ್ಳೆಯ ಬೆಳವಣಿಗೆ ಅಲ್ಲ. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ಕೂಲಂಕಷವಾಗಿ ದಾಖಲೆಗಳನ್ನು ಹಾಗೂ ಈ ಹಿಂದಿನ ಸುತ್ತೋಲೆಗಳನ್ನು ಪರಿಶೀಲಿಸದೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಗಳಿಗೆ ಪತ್ರ ಬರೆದು ವರದಿ ನೀಡಿರುವುದು ಸರಿಯಲ್ಲ ಎಂದು ಅಖಿಲ ಕೊಡವ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಜಿಲ್ಲಾಧಿಕಾರಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಕೊಡಗಿನ ಮೂಲ ನಿವಾಸಿಗಳ ವೀರ ಶೌರ್ಯ ಸೇರಿದಂತೆ ಪದ್ಧತಿ ಪರಂಪರೆಯ ಪ್ರತೀಕವಾದ ಕೋವಿ ವಿಷಯದಲ್ಲಿ ಕೇಂದ್ರ ಸರಕಾರ ೨೦೦೯-೨೦೧೦ ಹಾಗೂ ೨೦೧೯ರಲ್ಲಿ ಹೊರಡಿಸಿರುವ ಸುತ್ತೋಲೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಹಿಂದಿನ ಗೆಜೆಟ್ ನೋಟಿಫಿಕೇಷನ್ ಆಗಲಿ ಅಥವಾ ಕೋವಿಗೆ ಸಂಬAಧಪಟ್ಟ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ ಏಕಾಏಕಿ ಸರಕಾರದ ಅಂಗಳಕ್ಕೆ ಚೆಂಡನ್ನು ಎಸೆದು ಜಿಲ್ಲಾಧಿಕಾರಿಯವರು ಕೈ ತೊಳೆದುಕೊಂಡಿರುವುದು ಎಷ್ಟು ಸರಿ? ಅವರು ಬ್ರಿಟಿಷರ ಕಾಲದಲ್ಲಿ ಅಂದರೆ ೧೮೭೦ರಲ್ಲಿ ಖ್ಯಾತ ಲೇಖಕ ಜಿ. ರಿಚ್ಟರ್ ಬರೆದಿರುವ "ಗೆÀಜೇಟಿಯರ್ ಆಫ್ ಕೂರ್ಗ್" ಅಥವಾ ೧೮೭೮ರಲ್ಲಿ ಲೇಖಕ ಲೂಯಿಸ್ ರೈಸ್ ಬರೆದ ಗೆಜೇಟಿಯರ್ ಓದಬೇಕಿದೆ; ಈ ಹಿಂದೆ ಕೂಡ ೨೦೦೯ ಹಾಗೂ ೨೦೧೦ನೇ ಸಾಲಿನಲ್ಲಿ "ಕೂರ್ಗ್ ಬೈ ರೇಸ್" ವಿಸ್ತರಿಸಲು ಮನವಿಯನ್ನು ಮಾಡಿದ್ದರು. ಅಂದು ಕೂಡ ಒಳಗೊಳಗೆ ಕುತಂತ್ರ ನಡೆದಿತ್ತು. ಇದರ ಸೂಕ್ಷö್ಮವನ್ನು ಅರಿತ ಅಖಿಲ ಕೊಡವ ಸಮಾಜ

(ಮೊದಲ ಪುಟದಿಂದ) ಜಿಲ್ಲಾಧಿಕಾರಿಗೆ ಸಂಪೂರ್ಣ ದಾಖಲೆಗಳನ್ನು ನೀಡುವ ಮೂಲಕ ಕೊಡವ ಬೈ ರೇಸ್ ತೊಂದರೆಯಾದರೆ ಕಾನೂನು ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿತ್ತು. ಆದರೆ ಅಂದಿನ ಜಿಲ್ಲಾಧಿಕಾರಿ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ "ಕೂರ್ಗ್ ಬೈ ರೇಸ್" ಮನವಿಯನ್ನು ತಿರಸ್ಕರಿಸಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನು ಬರೆದು ಕೇಂದ್ರ ಸರಕಾರದ ೧೩/೦೭/೧೯೬೨ರ ಅಧಿಸೂಚನೆಯನ್ನು ಎತ್ತಿ ಹಿಡಿದು ಕೂರ್ಗ್ ಬೈ ರೇಸ್ ಎಂಬ ಪರಿಭಾಷೆಗೆ ಇತರ ಜನಾಂಗಗಳು ಸೇರುವುದಿಲ್ಲ, ಕೇವಲ ಕೊಡವರು ಮಾತ್ರ ಎಂದು ೫/೦೨/೨೦೧೦ರಂದು ಬಂದ ಪತ್ರಕ್ಕೆ ಸರಕಾರಕ್ಕೆ ಸಮಜಾಯಿಷಿ ನೀಡಿದ್ದರು. ಕೇಂದ್ರ ಸರಕಾರವೇ ಆ ಸಮಯದಲ್ಲಿ ಕೋವಿ ಹಕ್ಕಿನ ಕುರಿತಾದ ಸುತ್ತೋಲೆಯನ್ನು ಹೊರಡಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿತ್ತು ಎಂದು ನೆನಪಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಕೊಡವರನ್ನು ಕೂರ್ಗ್ಸ್ ಎಂದು ಕರೆಯಲಾಗುತ್ತಿತ್ತು ಹೊರತು ಬೇರೆ ಯಾರನ್ನೂ ಅಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿದೆ. ಹಾಗೇ ಕೋವಿ ಹಕ್ಕಿನ ಬಗ್ಗೆ ಈಗಾಗಲೇ ಗೆಜೇಟಿಯರ್ ನೋಟಿಫಿಕೆಷನ್ ಅಲ್ಲಿ ಕೂಡ ಸ್ಪಷ್ಟವಾಗಿ ಉಲ್ಲೇಖಿಸಿದೆ "ಇveಡಿಥಿ ಠಿeಡಿsoಟಿ oಜಿ ಛಿooಡಿg bಥಿ ಡಿಚಿಛಿe ಚಿಟಿಜ ರಿಚಿmmಚಿ ಣeಟಿಟಿuಡಿe oಟಜeಡಿ iಟಿ ಛಿooಡಿg" ಎಂದು ಕೇಂದ್ರ ಸರಕಾರದ ಸಶಸ್ತç ಕಾಯಿದೆಯನ್ನು ಎತ್ತಿ ಹಿಡಿಯಬೇಕಾದ ಜಿಲ್ಲಾಧಿಕಾರಿಗಳ ಹತ್ತಿರವೇ ಎಲ್ಲಾ ದಾಖಲಾತಿಗಳು ಇರುವಾಗ ಈ ಬಗ್ಗೆ ಪುನಃ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದು ಎಷ್ಟು ಸರಿ.? ಇದು ಕೇಂದ್ರ ಸರಕಾರದ ಅಧಿಸೂಚನೆ ಹಾಗೂ ಸುತ್ತೋಲೆಯನ್ನು ತಿರಸ್ಕರಿಸಿದಂತಾಗಲಿಲ್ಲವೇ ಎಂದು ಚಿಂತಿಸಬೇಕಿದೆ.

ಕೊಡವರಂತು ಎಲ್ಲಿಯೂ ಇತರರಿಗೆ ಯಾವುದೇ ಹಕ್ಕನ್ನು ನೀಡಬೇಡಿ ಎಂದು ಹೇಳಿಲ್ಲ. ಆದರೆ "ಕೂರ್ಗ್ ಬೈ ರೇಸ್"ನಡಿಯಲ್ಲಿ ಕೊಡವರು ಮಾತ್ರ ಆರ್ಹರು ಎಂದು ಪ್ರತಿಪಾದಿಸುತ್ತಿದ್ದೇವೆ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ ಹೊರತು ಇನ್ನೊಬ್ಬರ ಹಕ್ಕನ್ನು ನಾವು ಕಸಿದುಕೊಳ್ಳುವುದಿಲ್ಲ. ಹಾಗೇ ಇತರರಿಗೆ ಜಮ್ಮ ಹಿಡುವಳಿಯಲ್ಲಿ ಕೋವಿ ನೀಡುತ್ತಿರುವುದಕ್ಕೆ ನಮ್ಮದು ಯಾವುದೇ ಅಭ್ಯಂತರವಿಲ್ಲ. ಕೋವಿ ವಿಷಯದಲ್ಲಿ ಪದೇಪದೇ ಈ ರೀತಿ ಗೊಂದಲ ಸೃಷ್ಟಿಸುವ ಬದಲು ಕೇಂದ್ರ ಸರಕಾರದ ಸುತ್ತೋಲೆಯನ್ನು ಎತ್ತಿ ಹಿಡಿಯಬೇಕಿದೆ. ಕೂಡಲೇ ಗೊಂದಲಕ್ಕೆ ತೆರೆ ಎಳೆಯಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.