ಸೋಮವಾರಪೇಟೆ, ಜ. ೨೫: ರಾಷ್ಟಿçÃಯ ಹಬ್ಬಗಳಂದು ಕೆಲವರು ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ಮಾಡುತ್ತಿದ್ದು, ನಂತರ ಎಲ್ಲೆಂದರಲ್ಲಿ ಧ್ವಜಗಳನ್ನು ಎಸೆಯುವ ಮೂಲಕ ರಾಷ್ಟçಧ್ವಜಕ್ಕೆ ಅಗೌರವ ತೋರುತ್ತಿದ್ದಾರೆ. ಇಂತಹ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಗಣರಾಜ್ಯೋತ್ಸವದಂದು ಪ್ಲಾಸ್ಟಿಕ್‌ನಿಂದ ನಿರ್ಮಿತವಾದ ರಾಷ್ಟçಧ್ವಜಗಳನ್ನು ಬಳಕೆ ಹಾಗೂ ಮಾರಾಟ ಮಾಡಬಾರದು. ಧ್ವಜವನ್ನು ಹೋಲುವ ಮಾಸ್ಕ್ಗಳನ್ನು ತಯಾರಿಸುವುದು ಹಾಗೂ ಬಳಕೆ ಮಾಡಬಾರದು. ಈ ಬಗ್ಗೆ ಸಾರ್ವಜನಿಕರಿಗೆ ತಾಲೂಕು ಆಡಳಿತ ಎಚ್ಚರಿಕೆ ನೀಡಬೇಕು. ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಮಿತಿಯ ಪ್ರಮುಖರಾದ ಗಣೇಶ್, ಮಹೇಶ್, ಕೇಶವಮೂರ್ತಿ ಸೇರಿದಂತೆ ಇತರರು ಮನವಿ ಸಲ್ಲಿಸಿದರು.