ಭಾಗಮಂಡಲ, ಜ. ೨೦: ಇಲ್ಲಿನ ನಾಡಕಚೇರಿಯ ದುರಸ್ತಿ ಕಾರ್ಯ ಅರ್ಧಕ್ಕೆ ನಿಂತಿದ್ದು ಗುತ್ತಿಗೆದಾರ ಹಾಗೂ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ನಾಡಕಚೇರಿಯ ಸಿಬ್ಬಂದಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ಸಮೀಪದ ವಸತಿಗೃಹವನ್ನು ಅವಲಂಬಿಸಿಕೊAಡಿದ್ದಾರೆ. ಅಲ್ಲಿರುವ ಚಿಕ್ಕ ಕೊಠಡಿಯಲ್ಲಿ ಸಿಬ್ಬಂದಿಗಳು ಕಷ್ಟಕರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಚೇರಿಯಲ್ಲಿ ಕೆಲ ಸಾರ್ವಜನಿಕರು ಬಿಸಿಲಲ್ಲಿ ನಿಂತು ಕಾಯುವ ಪರಿಸ್ಥಿತಿ ಬಂದೊದಗಿದೆ. ತಿಂಗಳುಗಟ್ಟಲೆ ಕಳೆದರೂ ನಾಡಕಚೇರಿ ದುರಸ್ತಿಯಾಗದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಗಮಂಡಲದ ನಾಡಕಚೇರಿಯ ದುರಸ್ತಿ ಕಾರ್ಯ ನಡೆಯುತ್ತಿದ್ದು ಇದು ಕಳಪೆ ಕಾಮಗಾರಿ ಆಗಿದೆ ಎಂದು ‘ಶಕ್ತಿ’ ವಿಸ್ತçತವಾದ ವರದಿಯನ್ನು ಪ್ರಕಟಿಸಿತ್ತು. ಕಳೆದ ಹಲವು ವರ್ಷಗಳಿಂದ ಮೇಲ್ಛಾವಣಿ, ಗೋಡೆ ಹಾಗೂ ಮರಮುಟ್ಟುಗಳು ಮಳೆಯಿಂದಾಗಿ ಶಿಥಿಲಾವಸ್ಥೆ ತಲುಪಿದ್ದು ದುರಸ್ತಿ ಕಾರ್ಯಕ್ಕಾಗಿ ಸರ್ಕಾರದಿಂದ ೯ ಲಕ್ಷ ಬಿಡುಗಡೆಯಾಗಿದ್ದು, ಇದೀಗ ಕಾಮಗಾರಿ ದುರಸ್ತಿ ಕಾರ್ಯ ನಡೆಯುತ್ತಿದೆ. ಮೇಲ್ಛಾವಣಿಯ ದುರಸ್ತಿ ಕೆಲಸ ಮುಗಿದಿದೆ. ಕೆಳಹಂತದ ಗೋಡೆಯ ಕಾರ್ಯ ಹಾಗೂ ಅಳವಡಿಕೆ ಸೇರಿದಂತೆ ಇನ್ನಿತರ ಕೆಲಸಗಳು ಬಾಕಿ ಉಳಿದಿದ್ದು, ಮೇಲ್ಛಾವಣಿ ಕೆಲಸಕ್ಕಾಗಿ ಹಳೆಯ ಮರಮುಟುಗಳನ್ನೇ ಬಳಸಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮರಮುಟ್ಟುಗಳನ್ನು ಬಳಸಿದ್ದಲ್ಲದೆ ದುಂಬಿಗಳು ತೂತು ಕೊರೆದಿರುವ ಮರಗಳನ್ನು ಬಳಸಿದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಗುತ್ತಿಗೆದಾರರು ಹಾಗೂ ಕೆಲಸಗಾರರು ನಾಪತ್ತೆಯಾಗಿದ್ದು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಸರ್ಕಾರಿ ಕಚೇರಿಗಳ ಸ್ಥಿತಿ ಹೀಗೆ ಆದರೆ ಇತರ ಕಚೇರಿಗಳ ಪಾಡೇನು? ಕೆಲಸಗಳು ನಡೆಯಬೇಕಾದ ಕಚೇರಿಯಲ್ಲಿ ಆಗಿರುವ ಕಳಪೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸುವಂತೆ ಇಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಇಬ್ಬರ ಜಗಳದಿಂದ ಕೂಸು ಬಡವಾಯಿತು ಎನ್ನುವಂತಾಗಿದೆ ನಾಡಕಚೇರಿಯ ಪರಿಸ್ಥಿತಿ. - ಸುನಿಲ್ ಕುಯ್ಯಮುಡಿ