ಕೂಡಿಗೆ, ಜ. ೧೭: ಶ್ರೀ ಬಸವೇಶ್ವರ ಯುವಕ ಸಂಘ ಗುಮ್ಮನಕೊಲ್ಲಿ ಇವರ ವತಿಯಿಂದ ನಡೆದ ಗುಮ್ಮನ ಕೊಲ್ಲಿ ಸೀಸನ್ ೫ನ ಹೆಚ್ ಎಲ್ ಪುನೀತ್ ಮೆಮೋರಿಯಲ್ ಕಫ್ ಕ್ರಿಕೆಟ್ ಪಂದ್ಯಾವಳಿಯು ಗುಮ್ಮನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಪ್ರಥಮ ಬಹುಮಾನವನ್ನು ಎಎಫ್‌ಕೆ ಕ್ರಿಕೆರ‍್ಸ್ ತಂಡ ಪಡೆದು ನಗದು ಸೇರಿದಂತೆ ಟ್ರೋಫಿ ತನ್ನದಾಗಿಸಿಕೊಂಡಿತು. ದ್ವಿತೀಯ ಬಹುಮಾನವನ್ನು ಬಾಸ್ಕರ್ ಬಿಲ್ಡರ್ಸ್ ತಂಡ ಪಡೆಯಿತು. ತೃತೀಯ ಬಹುಮಾನವನ್ನು ಹೆಚ್‌ಎಂ ಬ್ರದರ್ಸ್ ತಂಡ ತನ್ನದಾಗಿಸಿ ಕೊಂಡಿತು.
ಬಹುಮಾನ ವಿತರಣೆಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಚೆಲುವರಾಜ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಆನಂತ್, ಸಿ.ಎಂ. ಆಸಿಫ್, ಮಣಿ , ಎಂ.ಆರ್. ಗಣೇಶ್, ಜಗದೀಶ್, ಸಂತೋಷ್, ಮಲ್ಲಿಗೆ, ಕಾಂಚನ, ಸಂಗೀತ, ರವಿ ಹಾಗೂ ದಾನಿಗಳಾದ ಅನುದೀಪ್ ಕಲ್ಲುಮುಟ್ಟು ಮತ್ತು ಚಮೇರಾ ಪ್ರದೀಪ್ ಸೇರಿದಂತೆ ಬಸವೇಶ್ವರ ಯುವಕ ಸಂಘದ ಸರ್ವ ಸದಸ್ಯರು ಹಾಜರಿದ್ದರು.