ಮಡಿಕೇರಿ, ಜ. ೧೭: ಕರ್ನಾಟಕ ಮತ್ತು ಕೇರಳ ರಾಜ್ಯದ ಸಂಸ್ಕೃತಿ, ಆಚಾರ ಮತ್ತು ವಿಚಾರಗಳನ್ನು ಪರಸ್ಪರ ಬೆಸೆಯುವ ಅರ್ಥವನ್ನು ಹೊಂದಿರುವ ಪ್ರಸಿದ್ಧಿ ಪಡೆದಿರುವ ಇರಿಟಿ ಸಮೀಪದ ವಯತ್ತೂರು ಕಲಿಯಾರ್ ದೇವಸ್ಥಾನ ದಲ್ಲಿ ತಾ.೧೩ರಿಂದ ೨೮ರವರೆಗೆ ‘‘ಊಟು ಮಹೋಲ್‌ಸವಂ ಹಬ್ಬ’’ವನ್ನು ಕೋವಿಡ್-೧೯ ರ ಮಾರ್ಗಸೂಚಿಯಂತೆ ನಡೆಸಲು ಕಣ್ಣೂರು ಜಿಲ್ಲಾಡಳಿತ ಅನುಮತಿ ಯನ್ನು ನೀಡಿದೆ.
ಕೊಡಗು ಜಿಲ್ಲೆಗೆ ಸಮೀಪವಿರುವ ಕಣ್ಣೂರು ಜಿಲ್ಲೆಯ ಇರಿಟಿ ತಾಲೂಕಿನ ವಯತ್ತೂರು ಗ್ರಾಮದಲ್ಲಿರುವ ಶ್ರೀ ಕಲಿಯಾರ್ ದೇವಸ್ಥಾನದಲ್ಲಿ ಕೊಡಗು ಮತ್ತು ಕೇರಳದ ಮಲೆಯಾಳಿ ಮತ್ತು ಇತರ ಭಕ್ತಾಧಿಗಳು ತಾ. ೨೮ರವರೆಗೆ ‘ಊಟು ಮಹೋಲ್ ಸವಂ ಹಬ್ಬ’ ವನ್ನು ಕೋವಿಡ್-೧೯ ರ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ ನಡೆಸುವ ಮೂಲಕ ಎರಡೂ ರಾಜ್ಯ ಗಳ ಜನರ ನಡುವಿನ ಸಂಬAಧಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಉತ್ಸವ ವನ್ನು ನಡೆಸುವುದು ಪದ್ಧತಿಯಾಗಿದೆ ಎಂದು ಕಣ್ಣೂರು ಜಿಲ್ಲಾಡಳಿತ ತಿಳಿಸಿದೆ.
ಕೊಡಗಿನ ಭಕ್ತಾಧಿಗಳು ಜನವರಿ ೨೧ ರಿಂದ ೨೫ರವರೆಗೆ ಈ ದೇವ ಸನ್ನಿಧಿಗೆ ಭೇಟಿ ನೀಡಿ ದೇವಸ್ಥಾನದಲ್ಲಿ ನಡೆಯುವ ವಿವಿಧ ಪೂಜಾ ವಿಧಿ ವಿಧಾನಗಳಲ್ಲಿ ಭಾಗಿಯಾಗ ಬಹುದೆಂದು ಕಣ್ಣೂರು ಜಿಲ್ಲಾಡಳಿತ ಕೊಡಗು ಜಿಲ್ಲಾಧಿಕಾರಿಯವರಿಗೆ ಮಾರ್ಗಸೂಚಿ ಪತ್ರದೊಂದಿಗೆ ತಾ.೨೧ ರಿಂದ ೨೫ ರವರೆಗೆ ನಡೆಯುವ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾಧಿ ಗಳು ಆಗಮಿಸಲು ಮತ್ತು ಹಿಂತಿರುಗಲು ಅನುಕೂಲವಾಗುವಂತೆ ಅನುಮತಿ ಯನ್ನು ನೀಡುವಂತೆ ಅಲ್ಲಿನ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ಮಾರ್ಗಸೂಚಿಯ ಒಂದು ಪ್ರತಿಯನ್ನು ಕೊಡಗು ಜಿಲ್ಲಾಧಿಕಾರಿ ಯವರಿಗೆ ರವಾನಿಸಿದೆ ಎಂದು ದೇವಸ್ಥಾನದ ತಂತ್ರಿಯವರು ತಿಳಿಸಿದ್ದಾರೆ.