ಗೋಣಿಕೊಪ್ಪಲು.ಜ.೧೪: ಶುಕ್ರವಾರ ಮುಂಜಾನೆಯ ವೇಳೆ ಕಲ್ಲಿಕೋಟೆ ಯಿಂದ ಕುಟ್ಟ ಗೋಣಿಕೊಪ್ಪಲು ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದ ಕಾರೊಂದು ಗೋಣಿಕೊಪ್ಪಲು ರಿಲಯನ್ಸ್ ಪೆಟ್ರೋಲ್ ಸಮೀಪವಿರುವ ವರ್ಕ್ಶಾಪ್ ಬಳಿ ಅಳವಡಿಸಿದ್ದ ಎಫ್ ೭, ೧೧ ಕೆ.ವಿ.ಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿದ್ಯುತ್ ಅಪಘಾತದಿಂದಾಗಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಜಾನೆಯ ೫ ಗಂಟೆಯಿAದಲೇ ವಿದ್ಯುತ್ ಪೂರೈಕೆ ಯಲ್ಲಿ ವ್ಯತಯ ಕಂಡು ಬಂತು. ಕುಡಿಯುವ ನೀರಿನ ಸಮಸ್ಯೆ ಎದುರಾಯಿತು.

ಸಮೀಪದ ಪೊನ್ನಂಪೇಟೆ ವಿದ್ಯುತ್ ಉಪಕೇಂದ್ರದಿAದ ಎಫ್ ೭ ಎರಡು ೧೧ ಕೆ.ವಿ. ವಿದ್ಯುತ್ ತಂತಿಗಳು ಗೋಣಿಕೊಪ್ಪಲಿಗೆ ಸಂಪರ್ಕ ಕಲ್ಪಿಸುತ್ತಿದ್ದು ಮತ್ತೊಂದು ವಿದ್ಯುತ್ ತಂತಿ ಪಾಲಿಬೆಟ್ಟಕ್ಕೆ ಎಕ್ಸ್ಪ್ರೆಸ್ ಲೈನ್‌ನಲ್ಲಿ ಹಾದು ಹೋಗುತ್ತಿವೆ. ಗೋಣಿಕೊಪ್ಪ ನಗರಕ್ಕೆ ತುರ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಸಿಬ್ಬಂದಿಗಳು ಮುಂಜಾನೆಯಿAದಲೇ ಪ್ರಯತ್ನ ನಡೆಸಿದರು.

ಕಾರು ಅಪಘಾತದಿಂದ ಮುರಿದು ಬಿದ್ದ ವಿದ್ಯುತ್ ಕಂಬವನ್ನು ಬದಲಾಯಿಸಿ ಮಧ್ಯಾಹ್ನದ ವೇಳೆ ಎಂದಿನAತೆ ವಿದ್ಯುತ್ ಪೂರೈಕೆ ಮಾಡಲಾಯಿತು. ಬೆಳಗಿನ ಜಾವ ಪಾಲಿಬೆಟ್ಟ ರಸ್ತೆಯಲ್ಲಿಯೂ ಇದೆ ರೀತಿಯಲ್ಲಿ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಪಡಿಸಿ ವಿದ್ಯುತ್ ನಿಲುಗಡೆಯಾಗಿತ್ತು. ಆದರೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಸ್ಥಳಕ್ಕೆ ತೆರಳಿದ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ತಂತಿ ಸರಿ ಪಡಿಸಿ ಈ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡಿದರು.

ಪ್ರಕರಣಕ್ಕೆ ಸಂಬAಧಿಸಿದAತೆ ಕಾರಿನ ಮಾಲೀಕರಾದ ಅಬ್ದುಲ್ ರಹೀಂ,ಕೆ. ಮೇಲೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ರಸ್ತೆಯ ಬದಿಯಲ್ಲಿ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬ ಅಳವಡಿಸಿರುವುದರಿಂದ ಇಂತಹ ಅಪಘಾತಗಳು ಆಗಿಂದಾಗ್ಗೆ ವರದಿಯಾಗುತ್ತಿವೆ. ಇಂತಹ ಅಪಾಯಕಾರಿ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡುವಂತೆ ನಾಗರಿಕರು ಚೆಸ್ಕಾಂ ಇಲಾಖೆಯನ್ನು ಆಗ್ರಹಿಸಿದ್ದಾರೆ.

- ಹೆಚ್.ಕೆ.ಜಗದೀಶ್