ಮಡಿಕೇರಿ, ಜ. ೧೪: ಮಾಜಿ ಸೈನಿಕರ ವಿವಿಧ ಬೇಕು - ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಯ ಮೂಲಕ ಸೂಕ್ತವಾಗಿ ಸ್ಪಂದನ ಸಿಗುತ್ತಿಲ್ಲ ಎಂದು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಸಂಘದ ಪದಾಧಿಕಾರಿಗಳು ಇಂದು ಮಡಿಕೇರಿಗೆ ಆಗಮಿಸಿ ಇಲಾಖೆಯ ಜಂಟಿ ನಿರ್ದೇಶಕರನ್ನು ಖುದ್ದಾಗಿ ಭೇಟಿಯಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಮಸ್ಯೆಗಳ ಕುರಿತಾಗಿ ಗಮನ ಸೆಳೆದರು.

ಟಿ. ಶೆಟ್ಟಿಗೇರಿ ಸಂಘವು ಸ್ವಂತ ಕಟ್ಟಡ ಹೊಂದಿದ್ದು, ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಸಂಘಕ್ಕೆ ಇಲಾಖೆಯ ಜಿಲ್ಲಾ ಕಚೇರಿಯಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಸಂಘವು ಸ್ವಂತ ಕಟ್ಟಡ ಹೊಂದಿದ್ದು, ಜಂಟಿ ನಿರ್ದೇಶಕರು ಒಮ್ಮೆಯು ಸಹ ಈ ಭಾಗಕ್ಕೆ ಭೇಟಿ ನೀಡಿರುವುದಿಲ್ಲ. ಒಂದು ಬಾರಿ ಇಸಿಹೆಚ್‌ಎಸ್ ವೀರಾಜಪೇಟೆಯ ಮುಖ್ಯಸ್ಥರು ಭೇಟಿ ನೀಡಿರುವುದನ್ನು ಬಿಟ್ಟರೆ ಬೇರೆ ಯಾವುದೇ ಅಧಿಕಾರಿ ವೃಂದದವರು ಈ ಭಾಗಕ್ಕೆ ಭೇಟಿ ನೀಡಿರುವುದಿಲ್ಲ. ಜಿಲ್ಲಾಧಿಕಾರಿಯಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಕೊಡಗು ವೀರ, ಶೂರರ ನಾಡು, ಸೈನಿಕರ ನಾಡು ಎಂಬಿತ್ಯಾದಿಯಾಗಿ ಬಿಂಬಿತವಾಗುತ್ತಿದೆಯೇ ಹೊರತು ಯಾವುದೇ ಸವಲತ್ತು ಸಿಗುತ್ತಿಲ್ಲ ಎಂದು ಆಕ್ಷೇಪಿಸಲಾಯಿತು.

ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಮಂಜೂರು ಮಾಡಲು ನಿಗದಿಪಡಿಸಿದ ಸರಕಾರಿ ಪೈಸಾರಿ ಜಾಗವನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ದಿಂದ ಸಂಪೂರ್ಣ ಮಾಹಿತಿಯನ್ನು ಪಡೆದು ಮಾಜಿ

(ಮೊದಲ ಪುಟದಿಂದ) ಸೈನಿಕರಿಗೆ ಒದಗಿಸಬೇಕು. ಪ್ರಶಸ್ತಿ ಪುರಸ್ಕೃತ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರನ್ನು ಸೇನಾದಿವಸ, ರಾಷ್ಟಿçÃಯ ಕಾರ್ಯಕ್ರಮಗಳಲ್ಲಿ ಗುರುತಿಸಿ ಸನ್ಮಾನಿಸಬೇಕು. ಜಂಟಿ ನಿರ್ದೇಶಕರು ಸಂಪರ್ಕಕ್ಕೆ ಅನುಕೂಲವಾಗುವಂತೆ ಅವರ ಫೋನ್, ಮೊಬೈಲ್ ನಂಬರನ್ನು ನೋಟೀಸ್ ಬೋರ್ಡಿನಲ್ಲಿ ಪ್ರಚಾರ ಪಡಿಸಿ ಮಾಜಿ ಸೈನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.

ಜಂಟಿ ನಿರ್ದೇಶಕರು ೨ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ವಾರದಲ್ಲಿ ಯಾವ ದಿವಸ ಮಡಿಕೇರಿಯಲ್ಲಿ ಲಭ್ಯರಿರುತ್ತಾರೆ ಎಂಬುದನ್ನು ಆಕಾಶವಾಣಿ ಹಾಗೂ ಪತ್ರಿಕೆಯಲ್ಲಿ ಪ್ರಕಟಪಡಿಸುವುದು. ಇತ್ತೀಚಿನ ಸರಕಾರಿ ಆದೇಶದಂತೆ ಯಾರೇ ಮಾಜಿ ಸೈನಿಕರ ದೈವಾಧೀನರಾದ ಸಂದರ್ಭದಲ್ಲಿ ಅವರ ಪಾರ್ಥೀವ ಶರೀರಕ್ಕೆ ರಾಷ್ಟçಧ್ವಜ ಹೊದಿಸಿ ಗೌರವಿಸಬೇಕಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು.

ಕಚೇರಿಯ ಸಿಬ್ಬಂದಿಗಳ ಅನುಚಿತ ವರ್ತನೆ ಸರಿಪಡಿಸಿ ಕಾಲ ಕಾಲಕ್ಕೆ ಪರಿಶೀಲಿಸಿ ಮಾಜಿ ಸೈನಿಕರಿಗೆ ಅನುಕೂಲವಾಗುವಂತೆ ಸಹಕಾರ ನೀಡಲು ಸೂಚಿಸುವುದು. ಸರಕಾರದ ವತಿಯಿಂದ ಮಾಜಿ ಸೈನಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ನೋಟೀಸ್ ಬೋರ್ಡ್ನಲ್ಲಿ ಮಾಹಿತಿ ನೀಡುವುದು ಹಾಗೂ ಅದಕ್ಕೆ ಸಂಬAಧಪಟ್ಟ ದಾಖಲೆಯ ಬಗ್ಗೆ ಪ್ರಚಾರ ಪಡಿಸುವುದು. ಇತ್ಯಾದಿ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಯಿತು. ಈ ಸಂದರ್ಭ ಅಧಿಕಾರಿಯೊಂದಿಗೆ ಬಿಸಿ ಬಿಸಿ ಚರ್ಚೆಯೂ ನಡೆಯಿತು.

ಅಧಿಕಾರಿ ಬಳಿ ಮೊಬೈಲ್ ಫೋನ್ ಇಲ್ಲ ಎಂಬ ಬಗ್ಗೆಯೂ ಪ್ರಮುಖರು ಆಕ್ಷೇಪಿಸಿ ದೂರವಾಣಿ ಸಮಸ್ಯೆಯೂ ಎದುರಾಗುತ್ತಿರುವ ಬಗ್ಗೆ ಗಮನಕ್ಕೆ ತಂದರು. ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್, ಕಾರ್ಯದರ್ಶಿ ಉಳುವಂಗಡ ಎಸ್. ಗಣಪತಿ (ಗಪ್ಪು) ಖಜಾಂಚಿ ಚಂಗುಲAಡ ಸತೀಶ್, ಸಹಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ, ಮಚ್ಚಾಮಾಡ ಮನು ಕುಶಾಲಪ್ಪ, ಎಂ. ಬಿ. ಸುರೇಶ್ ಈ ಸಂದರ್ಭ ಪಾಲ್ಗೊಂಡಿದ್ದರು.