ಮಡಿಕೇರಿ, ಜ.೧೪: ಪಟ್ಟಿಘಾಟ್ ಮೀಸಲು ಅರಣ್ಯದೊಳಗೆ ಅಕ್ರಮವಾಗಿ ನುಸುಳಿ ಹೊಂಡ ಕೊರೆದು ನಿಕ್ಷೇಪದೊಳಗಿರುವ ಬೆಲೆ ಬಾಳುವ ಕೆಂಪು ಹರಳುಕಲ್ಲು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಅರಣ್ಯ ಇಲಾಖೆಯ ಓರ್ವ ಅಧಿಕಾರಿ ಹಾಗೂ ಓರ್ವ ಸಿಬ್ಬಂದಿಯನ್ನು ಇಲಾಖೆಯ ಸೇವೆಯಿಂದ ಅಮಾನತ್ತು ಮಾಡಿ ಕ್ರಮ ಕೈಗೊಳ್ಳಲಾಗಿದೆ. ಆದರೆ, ಬೆಟ್ಟ ಹತ್ತಿ ನಿಕ್ಷೇಪಕ್ಕೆ ಕನ್ನ ಹಾಕಿದವರ ಮೇಲೆ ಕ್ರಮ ಯಾವಾಗ,.? ಈ ನಿಟ್ಟಿನಲ್ಲಿ ಇಲಾಖೆಯ ಕ್ರಮ ಏನು ಎಂಬದು ಇದೀಗ ಪ್ರಶ್ನಾರ್ಹವಾಗಿದೆ..?

ನಿಶಾನೆ ಮೊಟ್ಟೆಯಲ್ಲಿ ಅಕ್ರಮ ಹರಳು ಕಲ್ಲು ದಂಧೆಗೆ ಸಂಬAಧಿಸಿ ದಂತೆ ವಿಚಾರಣೆ ನಡೆಸಿದ ಇಲಾಖಾಧಿಕಾರಿಗಳು ಈ ಸಂಬAಧ ಕರ್ತವ್ಯ ಲೋಪದಡಿ ಈರ್ವರನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಕಗೊಳಿಸಿದೆ. ಇದುವರೆಗೆ ನಡೆದ ಹರಳುಕಲ್ಲು ದಂಧೆ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕ್ರಮ ಜರುಗಿಸಿರುವದು ಶ್ಲಾಘನೀಯ ವಾದರೂ ದಂಧೆ ನಡೆಸುವವರ ವಿರುದ್ಧ ಇದುವರೆಗೂ ಯಾವದೇ ಕ್ರಮ ಆಗದಿರುವುದು ಆಡಳಿತ ವ್ಯವಸ್ಥೆಯ ದುರಂತವೇ ಸರಿ..!

ಮಾಹಿತಿ ಇದೆ..!

ಈ ದಂಧೆಯಲ್ಲಿ ಭಾಗಿಯಾಗಿ ರುವವರ ಬಗ್ಗೆ ಎಲ್ಲರಿಗೂ ಸ್ಪಷ್ಟ ಮಾಹಿತಿ ಇದೆ. ಇಲ್ಲದಿದ್ದರೂ ಇದೀಗ ಅಮಾನತ್ತುಗೊಂಡಿರುವವರಿAದಲಾದರೂ ಪಡೆಯುವ ಅವಕಾಶವಿದೆ. ಅವರು ಹೇಳದಿದ್ದರೂ ಅವರುಗಳ ಹಿಂದಿನ ಮೊಬೈಲ್ ಕರೆಗಳ ಮಾಹಿತಿಯನ್ನು ಕಲೆ ಹಾಕಿದರೆ ಯಾರೆಲ್ಲ ಇದರ ಹಿಂದೆ ಇದ್ದಾರೆಂಬದು ತಿಳಿಯ ಬಹುದು.

(ಮೊದಲ ಪುಟದಿಂದ) ಅದೂ ಸಾಧ್ಯವಾಗದಿದ್ದರೆ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು ಹೇಳಿದಂತೆ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಇದುವರೆಗೆ ನಡೆದಿರುವ ಅಕ್ರಮಗಳೆಲ್ಲವೂ ಹೊರಬರಬಹುದು. ಆದರೆ ಆ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಮುಂದಾದಲ್ಲಿ ಇನ್ನೂ ಅನೇಕ ಅಧಿಕಾರಿಗಳು, ಮುಖಂಡರುಗಳ ಹೆಸರುಗಳ ಪಟ್ಟಿಯೇ ಬರುತ್ತದೆ ಎಂಬ ಭಯ ಎಲ್ಲರಿಗೂ...!

ಕಳ್ಳರು ಬಾಡಿಗೆ ಮನೆಯಲ್ಲಿದ್ದರು..!

ಬೆಟ್ಟ ಹತ್ತಿ ಹೊಂಡ ಕೊರೆದು, ಸುರಂಗ ತೋಡಿದ ಲೂಟಿಕೋರ ನಿಪುಣರು ಕಳೆದ ಹಲವು ಸಮಯಗಳಿಂದ ಭಾಗಮಂಡಲ ಆಸು ಪಾಸಿನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಅಪರಿಚಿತ ವ್ಯಕ್ತಿಗಳು ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದುದು ಪಂಚಾಯ್ತಿ ಪ್ರಮುಖರಿಂದ ಹಿಡಿದು ಸ್ಥಳೀಯರಿಗೂ ಗೊತ್ತಿತ್ತು. ಕೋರಂಗಾಲದಲ್ಲಿ ಕೆಲವು ಮಂದಿ ಹಾಗೂ ಚೆಟ್ಟಿಮಾನಿ ಬಳಿಯ ಕೋಡಿಮೊಟ್ಟೆಯಲ್ಲಿ ಕೆಲವರು ತಂಗಿದ್ದರು. ಹಗಲು ಮನೆಯಲ್ಲಿ ಇರುತ್ತಿದ್ದ ಇವರುಗಳು ರಾತ್ರಿ ವೇಳೆ ನಾಪತ್ತೆಯಾಗುತ್ತಿದ್ದರು..! ಕಾಡುದಾರಿಯಲ್ಲಿ ಬೆಟ್ಟ ಹತ್ತಿ ನಿಕ್ಷೇಪಕ್ಕೆ ಹೊಂಡ ತೋಡುತ್ತಿದ್ದರು. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ದಿನದಿಂದ ತಾವುಗಳಿದ್ದ ಸ್ಥಳದಿಂದ ಕಾಲ್ಕಿತ್ತಿದ್ದಾರೆ..!

ಸಹಕಾರವಿಲ್ಲದೆ ಅಸಾಧ್ಯ..!

ಅಪರಿಚಿತ ಪುರುಷ ವ್ಯಕ್ತಿಗಳು ಬಾಡಿಗೆ ಮನೆ ಮಾಡಲು ಪರಿಚಯಸ್ಥರ ಸಹಕಾರವಿಲ್ಲದೆ ಖಂಡಿತಾ ಸಾಧ್ಯವಿಲ್ಲ. ಅದೂ ಗ್ರಾಮೀಣ ಪ್ರದೇಶದಲ್ಲಿ ಬಾಡಿಗೆ ಮನೆಗೆ ಶಿಕ್ಷಕರೋ, ಬ್ಯಾಂಕ್, ಕಂದಾಯ ಇಲಾಖಾ ಸಿಬ್ಬಂದಿಗಳು, ಹೀಗೇ ಪರ ಊರಿನಿಂದ ವರ್ಗವಾದವರು ಮಾತ್ರ ಬರುತ್ತಾರೆ. ಪುರುಷರು ನಾಲ್ಕಾರು ಮಂದಿ ಬರುವದೇ ಇಲ್ಲ. ಅಂತಹದ್ದರಲ್ಲಿ ಬಾಡಿಗೆ ಮನೆಯಲ್ಲಿದ್ದರೆಂದರೆ ಪರಿಚಯ ಇರುವವರೇ ಮನೆ ಮಾಡಿ ಕೊಟ್ಟಿರುತ್ತಾರೆ. ಬಾಡಿಗೆ ಮನೆ ನೀಡಿದವರನ್ನು ಪತ್ತೆ ಹಚ್ಚಿ ವಿಚಾರಿಸಿದರೂ ದಂಧೆಯ ಹಿಂದಿರುವವರನ್ನು ಮುಂದೆ ತರಬಹುದು..!

ಜಿಲ್ಲಾಧಿಕಾರಿಗಳಿಂದ ಸಾಧ್ಯ..!

ಇದೇ ಪ್ರಥಮ ಬಾರಿಗೆ ಹರಳುಕಲ್ಲು ದಂಧೆಯಲ್ಲಿ ಇಲಾಖಾ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುವುದರಿಂದ ಜನತೆಯಲ್ಲಿ ಇಲಾಖಾ ಅಧಿಕಾರಿಗಳ ಮೇಲೆ ಒಂದಿಷ್ಟು ಭರವಸೆ ಮೂಡಿದಂತಿದೆ. ತನಿಖೆ ಮುಂದುವರಿಸಿ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಂಡು ಈ ದಂಧೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆAಬದು ಗ್ರಾಮಸ್ಥರ ಆಗ್ರಹವಾಗಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಿ, ಸೂಕ್ತ ಕ್ರಮಕ್ಕೆ ತನಿಖಾ ತಂಡ ರಚನೆ ಮಾಡಿದರೆ ಆರೋಪಿಗಳನ್ನು ಕಂಡು ಹಿಡಿಯಬಹುದೆಂಬದು ಗ್ರಾಮಸ್ಥರ ಕೋರಿಕೆಯಾಗಿದೆ. ಪೊಲೀಸ್ ಅಪರಾಧ ಪತ್ತೆದಳದ ಮೂಲಕ ತನಿಖೆ ನಡೆಸಿದರೆ ಆರೋಪಿಗಳನ್ನು ಕಂಡು ಹಿಡಿಯಬಹುದೆಂಬದು ಗ್ರಾಮದ ಹಿರಿಯರ ಸಲಹೆಯಾಗಿದೆ..!

? ಸಂತೋಷ್, ಸುನಿಲ್