ಮಡಿಕೇರಿ, ಜ. ೧೪: ಕಚೇರಿ ಕೆಲಸ ಸಂಬAಧ ಲಂಚ ಪಡೆಯುತ್ತಿದ್ದ ಆರೋಪದ ಹಿನ್ನೆಲೆ ಎಸಿಬಿ ಧಾಳಿಗೆ ಸಿಲುಕಿ ಕರ್ತವ್ಯದಿಂದ ಅಮಾನತ್ತು ಗೊಂಡಿರುವ ಪಂಚಾಯತ್‌ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯಪಾಲಕ ಅಭಿಯಂತರರನ್ನು ಮರಳಿ ಇಲಾಖೆಗೆ ನೇಮಿಸಿಕೊಳ್ಳ ಬೇಕೆಂದು ಜಿಲ್ಲೆಯ ಶಾಸಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾ ಸಚಿವರಿಗೆ ಪತ್ರ ಬರೆದು ಶಿಫಾರಸ್ಸು ಮಾಡಿರುವ ವಿಚಾರ ತಿಳಿದು ಬಂದಿದೆ.

ಪAಚಾಯತ್‌ರಾಜ್ ಇಲಾಖೆ ಯಲ್ಲಿ ಕಾರ್ಯಪಾಲಕ ಅಭಿಯಂತ ರರಾಗಿದ್ದ ಎಲ್. ಶ್ರೀಕಂಠಯ್ಯ ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುವ ಸಂದರ್ಭ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದೆ. ಈ ನಡುವೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಅಧಿಕಾರಿಯನ್ನು ಇಲಾಖೆಗೆ ಮರು ನೇಮಕಗೊಳಿಸುವಂತೆ ಕೋರಿ ಪಂಚಾಯತ್‌ರಾಜ್ ಇಲಾಖಾ ಸಚಿವ ಈಶ್ವರಪ್ಪ ಅವರಿಗೆ ಶಿಫಾರಸು ಪತ್ರ ಬರೆದಿದ್ದಾರೆ.

(ಮೊದಲ ಪುಟದಿಂದ) ತಾ. ೭-೧೨-೨೦೨೧ರಂದು ಪತ್ರ ಬರೆದಿದ್ದು, ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು, ತೀವ್ರ ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಗೂ ಕುಡಿಯುವ ನೀರಿನ ಅಗತ್ಯತೆ ಇರುತ್ತದೆ.ಆದರೆ ಜಿಲ್ಲೆಯ ಎರಡು ಇಲಾಖೆಯ ಕಾರ್ಯಪಾಲಕ ಅಭಿಯಂತರರ ಹುದ್ದೆ ಖಾಲಿ ಇರುತ್ತದೆ. ಈ ಹುದ್ದೆಗೆ ಸಂಬAಧಿಸಿದAತೆ ಎಲ್. ಶ್ರೀಕಂಠಯ್ಯ ಅವರ ಮೇಲಿನ ಅಮಾನತ್ತು ಆದೇಶವನ್ನು ಹಿಂಪಡೆದು ಅವರನ್ನು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರ ಖಾಲಿ ಇರುವ ಹುದ್ದೆಗೆ ನೇಮಕ ಗೊಳಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಚಿವರು ಶಾಸಕರ ಕೋರಿಕೆಯನ್ನು ಪರಿಶೀಲಿಸಿ ಕಡತವನ್ನು ಮಂಡಿಸಲು ಆರ್‌ಡಿಪಿಆರ್ ವಿಭಾಗಕ್ಕೆ ಕಳುಹಿಸಿರುವ ಬಗ್ಗೆ ತಿಳಿದು ಬಂದಿದೆ.