ಮಡಿಕೇರಿ, ಜ. ೯: ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು, ರಾಷ್ಟಿçÃಯ ಸೇವಾ ಯೋಜನಾ ಘಟಕ, ಎನ್‌ಸಿಸಿ ಘಟಕ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘದ ವತಿಯಿಂದ ಜಿಲ್ಲಾಮಟ್ಟದ ರಾಷ್ಟಿçÃಯ ಯುವ ದಿನ ಮತ್ತು ಯುವ ಸಪ್ತಾಹ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ತಾ. ೧೨ ರಂದು ಸಪ್ತಾಹ ಉದ್ಘಾಟನೆಗೊಳ್ಳಲಿದ್ದು, ತಾ. ೧೯ ರಂದು ಸಮಾರೋಪಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಮಡಿಕೇರಿಯ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ತಾ. ೧೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಹಾಗೂ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಉಪಸ್ಥಿತರಿರುವರು.
“ಸ್ವಾಮಿ ವಿವೇಕಾನಂದರ ಜೀವನ ಮತ್ತು ಆದರ್ಶಗಳು” ವಿಷಯದ ಕುರಿತು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಉಪನ್ಯಾಸ ನೀಡಲಿದ್ದಾರೆ.
ಸಪ್ತಾಹ: ಹೊದ್ದೂರು ವಾಟೆಕಾಡುವಿನ ವಿಘ್ನೇಶ್ವರ ಯುವಕ ಸಂಘದ ವತಿಯಿಂದ ತಾ. ೧೩ ರಂದು ಸಾಂಸ್ಕೃತಿಕ ದಿನ, ತಾಳತ್ತಮನೆಯ ಅಂಬಾಭವಾನಿ ಯುವಕ/ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ವತಿಯಿಂದ ತಾ. ೧೪ ರಂದು ಸ್ಪರ್ಧೆಯಲ್ಲಿ ಭಾಗವಹಿಸುವ ದಿನ, ಮೇಕೇರಿ ಸ್ವಾಗತ ಯುವಕ ಸಂಘದ ವತಿಯಿಂದ ತಾ. ೧೫ ರಂದು ಸಮಾಜಸೇವೆ ದಿನ, ಗೋಣಿಕೊಪ್ಪದ ಶ್ರೀದೇವಿ ಮಹಿಳಾ ಮಂಡಳಿ ವತಿಯಿಂದ ತಾ. ೧೬ ರಂದು ದೈಹಿಕ ಸಾಮರ್ಥ್ಯ ದಿನ, ವೀರಾಜಪೇಟೆಯ ಆರ್ಜಿ ಗ್ರಾಮದ ಶ್ರೀವಿಘ್ನೇಶ್ವರ ಮಹಿಳಾ ಮಂಡಳಿ ವತಿಯಿಂದ ತಾ. ೧೭ ರಂದು ಕೌಶಲ್ಯ ದಿನ, ಗಾಳಿಬೀಡು ಯುವಕ ಸಂಘದ ವತಿಯಿಂದ ತಾ. ೧೮ ರಂದು ಸಮಾಜಕ್ಕಾಗಿ ಯುವ ಜನರು ಮತ್ತು ಗೋಣಿಕೊಪ್ಪದ ಸೀಗೆತೋಡುವಿನ ಇಂಡಿಯನ್ ಯುವಕ ಸಂಘದ ವತಿಯಿಂದ ಯುವ ಸಪ್ತಾಹದ ಸಮಾರೋಪ ಸಮಾರಂಭ ತಾ. ೧೯ ರಂದು ನಡೆಯಲಿದೆ ಎಂದು ಸುಕುಮಾರ್ ಮಾಹಿತಿ ನೀಡಿದ್ದಾರೆ.