ದೇಶವಿಡಿ ಡಿಜಿಟಲೀಕರಣ ಮಾಡುವ ಕನಸಿನಲ್ಲಿರುವ ಕೇಂದ್ರ ಸರಕಾರ, ಬಹುಶಃ ಅದರ ಆತ್ಮ ನಿರ್ಭರತೆಗೆ ಧಕ್ಕೆ ಆಗಬಹುದು ಎಂಬ ಕಾರಣಕ್ಕಾಗಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮುಂದಾಳತ್ವದ ಅಮೇರಿಕಾದ ‘ಸ್ಟಾರ್‌ಲಿಂಕ್’ ಸಂಸ್ಥೆಯು ರಾಷ್ಟçದಲ್ಲಿ ಬೇರೂರುವು ದನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ.

ರಾಷ್ಟçದ ಬಹುತೇಕ ನಗರ ಪ್ರದೇಶಗಳು ಇದೀಗ ಅಂತರ್ಜಾಲ ವ್ಯವಸ್ಥೆ ಹೊಂದಿವೆಯಾದರೂ ಗ್ರಾಮೀಣ ಭಾಗದ ಜನರ ಅಂತರ್ಜಾಲದ ಕನಸು ಇನ್ನೂ ನನಸಾಗಿಲ್ಲ. ಕೊಡಗು ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ‘ವರ್ಕ್ ಫ್ರಮ್ ಹೋಂ’ಗೆ ಉದ್ಯೋಗಿಗಳು, ಆನ್‌ಲೈನ್ ತರಗತಿಗಳಿಗೆ ವಿದ್ಯಾರ್ಥಿ ಗಳು ಹರಸಾಹಸ ಪಡುತ್ತಿರುವುದು ಸಾಮಾನ್ಯವಾಗಿದೆ.

ಖಾಸಗಿ ಟೆಲಿಕಾಂ ಸಂಸ್ಥೆಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಲಾಭಗಳಿಸಲು ಅಸಾಧ್ಯ ಎಂಬ ಕಾರಣದಿಂದಾಗಿ ಇಂತಹ ಪ್ರದೇಶಗಳಲ್ಲಿ ಅಂತರ್ಜಾಲ ಕಲ್ಪಿಸಲು ಹಿಂಜರಿದರೆ, ಸರಕಾರಿ ಬಿಎಸ್ ಎನ್‌ಎಲ್ ಸಂಸ್ಥೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷö್ಯದಿಂದ ಬಹುತೇಕ ನಿಶ್ಕಿçಯವಾಗಿದೆ.

ಖಾಸಗಿ ಸಂಸ್ಥೆಗಳಿಗೆ ಮತ್ತೊಂದು ಸಮಸ್ಯೆ ಎಂದರೆ - ಗ್ರಾಮೀಣ ಗುಡ್ಡಗಾಡು ಪ್ರದೇಶ. ಉದಾಹರಣೆ ಕೊಡಗು ಜಿಲ್ಲೆಯಂತ ಪ್ರದೇಶಗಳಲ್ಲಿ ಟವರ್ ಅಳವಡಿಕೆಗೆ ಪಡಬೇಕಾಗಿರುವ ಹರಸಾಹಸ.

ಇವುಗಳಿಗೆಲ್ಲದಕ್ಕೂ ಪರಿಹಾರ ಎಂಬAತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ‘ಸ್ಟಾರ್‌ಲಿಂಕ್’ ಎಂಬ ಸಂಸ್ಥೆಯು ಉಪಗ್ರಹಗಳ ಮೂಲಕ ನೇರವಾಗಿ ಅಂತರ್ಜಾಲ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿದ್ದು ಈಗಾಗಲೇ ಬಹಳಷ್ಟು ರಾಷ್ಟçಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗಿದೆ.

ಯಾವುದೇ ಟವರ್ ಅಥವಾ ಒಳಭೂಮಿ ಕೇಬಲ್‌ಗಳ ಅವಶ್ಯಕತೆ ಇಲ್ಲದೆ, ಒಂದು ಸ್ಯಾಟಲೈಟ್ ಡಿಶ್ ಮತ್ತೊಂದು ವೈಫೈ ರೌಟರ್ ಅಷ್ಟೇ ಬಳಸಿ ಅಂತರ್ಜಾಲ ಒದಗಿಸುವ ಪ್ರಯತ್ನ ಸಫಲವಾಗಿದೆ.

ಮಸ್ಕ್ ಅವರದ್ದೇ ಸ್ಥಾಪನೆಯ ಮತ್ತೊಂದು ಸಂಸ್ಥೆಯಾದ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್‌ಎಕ್ಸ್' ತಯಾರಿಕೆಯ ರಾಕೇಟುಗಳ ಸಹಾಯದಿಂದ ‘ಸ್ಟಾರ್‌ಲಿಂಕ್' ಉಪಗ್ರಹಗಳನ್ನು ಭೂಮಿಯ ಸುತ್ತದ ಕಕ್ಷೆಯಲ್ಲಿ ಇರಿಸಲಾಗಿ ಈ ಮೂಲಕ ನೇರವಾಗಿ ಗ್ರಾಹಕರ ಡಿಶ್‌ಗಳ ಮೂಲಕ ಅಂತರ್ಜಾಲ ಒದಗಿಸುವ ಕಾರ್ಯದಲ್ಲಿ ಮಸ್ಕ್ ಸಫಲತೆ ಕಂಡಿದ್ದಾರೆ.

ಭಾರತದಲ್ಲಿ ಈ ವರ್ಷದ ಅಂತ್ಯದೊಳಗೆ ಉಪಗ್ರಹಗಳ ಮೂಲಕ ಅಂತರ್ಜಾಲ ಕಲ್ಪಿಸುವ ನಿಟ್ಟಿನಲ್ಲಿ, ಈಗಾಗಲೇ ೫,೦೦೦ ಭಾರತೀಯ ಗ್ರಾಹಕರಿಂದ ಮುಂಗಡ ಹಣವನ್ನು ‘ಸ್ಟಾರ್‌ಲಿಂಕ್’ ಸಂಸ್ಥೆ ಪಡೆದಿದೆ. ಆದರೆ ಪರವಾನಗಿ ಪಡೆಯುವ ಮೊದಲು ಮುಂಗಡ ಹಣ ಪಡೆದ ಕಾರಣಕ್ಕಾಗಿ ಈ ಸಂಸ್ಥೆಗೆ ಮುಂಗಡ ಹಣ ಪಾವತಿಸದಿರುವಂತೆ ಕೇಂದ್ರ ಸರಕಾರ ಗ್ರಾಹಕರಿಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಮುಂಗಡ ಹಣವನ್ನು ನೀಡಿರುವ ಗ್ರಾಹಕರಿಗೆ ಹಣ ಮರು ಪಾವತಿಸುವ ಕೆಲಸದಲ್ಲಿ ಸಂಸ್ಥೆಯು ಇದೀಗ ನಿರತವಾಗಿದೆ. ಈ ಮೂಲಕ ಸಂಸ್ಥೆಯ ಭಾರತದಲ್ಲಿನ ಚಟುವಟಿಕೆಗಳ ಕನಸಿಗೆ ತಡೆ ಇಟ್ಟಂತಾಗಿದೆ. ಜನವರಿ ಅಂತ್ಯ ದೊಳಗೆ ಪರವಾನಗಿಗೆ ಸರಕಾರಕ್ಕೆ ಅರ್ಜಿ ನೀಡುವುದಾಗಿ ಈ ಹಿಂದೆ ಸಂಸ್ಥೆಯ ಭಾರತದ ಮುಖ್ಯಸ್ಥ ತಿಳಿಸಿದ್ದರಾದರೂ ಅರ್ಜಿ ಸಲ್ಲಿಸುವ ಮೊದಲೇ ದೊಡ್ಡ ತಡೆ ಎದುರಾಗಿದ್ದು, ಸಂಸ್ಥೆಯ ಮುಂದಿನ ಹೆಜ್ಜೆ ಕುತೂಹಲ ಮೂಡಿಸಲಿದೆ.

ಆತ್ಮನಿರ್ಭರತೆಗೆ ಧಕ್ಕೆ...?

‘ಸ್ಟಾರ್‌ಲಿಂಕ್’ ಒಂದು ವೇಳೆ ದೇಶಕ್ಕೆ ಕಾಲಿಟ್ಟರೆ ಭಾರತದ ಟೆಲಿಕಾಂ ಜಗತ್ತನ್ನು ಆಳುತ್ತಿರುವ ರಿಲಾಯನ್ಸ್ ಹಾಗೂ ಏರ್ಟೆಲ್ ನಂತಹ ದೊಡ್ಡಣ್ಣರಿಗೆ ಪೆಟ್ಟು ಬೀಳುವುದು ಮಾತ್ರವಲ್ಲ, ಅಸ್ತಿತ್ವಕ್ಕೇ ಧಕ್ಕೆ ತರುವ ಸಾಧ್ಯತೆ ಇದೆ.

‘ಸ್ಟಾರ್‌ಲಿಂಕ್’ ಸಂಸ್ಥೆ ಭಾರತಕ್ಕೆ ಕಾಲಿಡುವ ಮೊದಲೇ ೫,೦೦೦ ಮಂದಿ ಮುಂಗಡ ಹಣ ಪಾವತಿಸಿದರಂದರೆ, ಕಾರ್ಯಗತ ವಾದ ನಂತರ ಸಹಸ್ರಾರು ಹಾಗೂ ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸೆಳೆಯುವುದರಲ್ಲಿ ಸಂಶಯವಿರಲಿಲ್ಲ.

ಆದರೆ ಸಂಸ್ಥೆ ದೇಶದಲ್ಲಿ ಬೇರೂರುವ ಮೊದಲೇ ಇದಕ್ಕೆ ತಡೆ ಬಂದಿದೆ ಎಂದರೆ ಇದು ಮುಂಗಡ ಚಂದಾದಾರಿಕೆ ನೀಡಿದ ಕಾರಣಕ್ಕೋ.. ಅಥವಾ ಭಾರತದ ಟೆಲಿಕಾಂ ದಿಗ್ಗಜರಿಗೆ ಇರುವ ಕೇಂದ್ರದ ನಂಟೋ.. ಎಂಬುದು ತಿಳಿಯ ಬೇಕಷ್ಟೆ. - ಪ್ರಜ್ವಲ್ ಜಿ.ಆರ್.