ಮಡಿಕೇರಿ, ಜ. ೮: ಕೋವಿಡ್ ೩ನೇ ಅಲೆಯ ತಡೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ‘ವೀಕೆಂಡ್ ಕರ್ಫ್ಯೂ’ಗೆ ಅಸಮಾಧಾನ ನಡುವೆ ಕೊಡಗು ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು. ಶನಿವಾರ ಬೆಳಗ್ಗಿನ ಜಾವ ಕೆಲಕಾಲ ಜನರ ಓಡಾಟ ಕಂಡುಬAದರು ೧೦ ಗಂಟೆಯ ನಂತರ ಜಿಲ್ಲೆ ಸ್ತಬ್ಧಗೊಂಡಿತು.

ಕೋವಿಡ್ ಪರಿಸ್ಥಿತಿಯಿಂದ ಚೇತರಿಕೆ ಕಾಣುವ ಸಮಯದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಇದರಿಂದ ಮತ್ತೊಮ್ಮೆ ಸರಕಾರ ಕಟ್ಟುನಿಟ್ಟಿನ ಕ್ರಮದ ಮೊರೆ ಹೋಗಿರುವುದು ಜನರ ವಿರೋಧಕ್ಕೆ ಕಾರಣವಾಗಿದೆ. ಆದಾಗ್ಯೂ, ಜಿಲ್ಲೆಯ ಜನತೆ ಕರ್ಫ್ಯೂಗೆ ಶನಿವಾರ ಓಗೊಟ್ಟರು.

ವೀಕೆಂಡ್ ಕರ್ಫ್ಯೂ ಜನತೆಗೆ ಗೊಂದಲ ಮೂಡಿಸಿತು. ದಿನಪೂರ್ತಿ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದರೂ, ಅನಗತ್ಯವಾಗಿ ಹೊರಬರುವಂತಿಲ್ಲ ಎಂಬ ಸೂಚನೆ ಇರುವುದು ಪೇಚಿಗೆ ಸಿಲುಕಿಸಿತು. ಜಿಲ್ಲೆಯಲ್ಲಿ ಬೆಳಿಗ್ಗೆ ಕೆಲಕಾಲ ಜನರ ಓಡಾಟ ಕಂಡುಬAತು. ಗ್ರಾಮೀಣ ಪ್ರದೇಶದ ಜನರು ನಿರ್ಬಂಧ ಹಿನ್ನೆಲೆ ನಗರದ ಕಡೆ ಹೆಚ್ಚಾಗಿ ಆಗಮಿಸಿಲ್ಲ.

ಜನರು ಶುಕ್ರವಾರವೇ ಅಗತ್ಯ ವಸ್ತು ಖರೀದಿಸಿ ಮನೆ ಸೇರಿಕೊಂಡಿದ್ದರು. ಇದರಿಂದ ಅಂಗಡಿ ಮಳಿಗೆಗಳ ಮುಂದೆ ಜನದಟ್ಟಣೆ ಕಂಡು ಬಂದಿಲ್ಲ.

ವಾಹನ ಸಂಚಾರ ವಿರಳ

ಅಗತ್ಯ ವಸ್ತುಗಳಾದ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ದಿನಸಿ, ತರಕಾರಿ, ಹಾಲು, ಹಣ್ಣು, ಮಾಂಸ, ಮೀನು ಮಳಿಗೆಗಳು ಮಾತ್ರ ತೆರೆದಿದ್ದವು. ಉಳಿದಂತೆ ಬಾಕಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಖಾಸಗಿ ಬಸ್ ಇಲ್ಲದಿರುವುದು ಬೇರೆ ಕಡೆ ಕೆಲಸಕ್ಕೆ ತೆರಳುವ ಕಾರ್ಮಿಕರಿಗೆ ಸಮಸ್ಯೆಯಾಗಿ ಪರಿಣಮಿಸಿತು. ಸರಕಾರಿ ಬಸ್‌ಗಳ ಸಂಚಾರ ಕೂಡ ವಿರಳವಾಗಿತ್ತು. ಕೆಲವರು ಬಸ್ ಇಲ್ಲದೆ ಪರದಾಡುತ್ತಿದ್ದ ದೃಶ್ಯ ಕಂಡುಬAತು. ಕುಶಾಲನಗರ ದಿಂದ ಮಡಿಕೇರಿಗೆ ಬಂದ ವೃದ್ಧೆಯೊಬ್ಬರು ಬಸ್‌ಗಾಗಿ ಗಂಟೆಗಟ್ಟಲೆ ಕಾದು ಸುಸ್ತಾದರು. ಬೆಟ್ಟಗೇರಿಗೆ ತೆರಳಬೇಕಾಗಿದ್ದ ವೃದ್ಧೆಗೆ ಸ್ಟಾö್ಯನ್ಲಿ ಹಾಗೂ ಶಿವಪ್ಪ ಎಂಬ ಯುವಕರು ವಾಹನ ವ್ಯವಸ್ಥೆ ಕಲ್ಪಿಸಿ ಊರು ತಲುಪಿಸಿ ನೆರವು ನೀಡಿದರು.

ಅಲ್ಲಲ್ಲಿ ಆಟೋ ಚಾಲಕರು ಸೇವೆ ನೀಡಿದ್ದು, ಹೊರತುಪಡಿಸಿದಂತೆ ಆಟೋ,

(ಮೊದಲ ಪುಟದಿಂದ) ಟ್ಯಾಕ್ಸಿ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಮದ್ಯದಂಗಡಿ ಸಂಪೂರ್ಣ ಬಂದ್ ಆಗಿತ್ತು. ಹೊಟೇಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶವಿತ್ತು. ಸರಕಾರಿ ಕಚೇರಿ, ತುರ್ತು ಸೇವೆ, ಮಾಧ್ಯಮ ಸಂಸ್ಥೆಗಳ ಸಿಬ್ಬಂದಿಗಳಿಗೆ ಓಡಾಟಕ್ಕೆ ವಿನಾಯಿತಿ ನೀಡಲಾಗಿತ್ತು. ನಿಗದಿಯಾಗಿದ್ದ ಮದುವೆ ಸೇರಿದಂತೆ ಸಮಾರಂಭಗಳು ಕೋವಿಡ್ ಮಾರ್ಗಸೂಚಿ ಅನ್ವಯ ನಡೆದವು.

*ಗೋಣಿಕೊಪ್ಪ : ಓಮಿಕ್ರಾನ್ ಸೇರಿದಂತೆ ಕೊರೊನಾ ಸೋಂಕು ನಿಯಂತ್ರಿಸುವ ಸಂಬAಧ ಸರ್ಕಾರ ಘೋಷಿಸಿದ ನಿಯಮಗಳನ್ನು ಕಟ್ಟುನಿಟ್ಟಿನ ಪಾಲನೆಯ ಜಾರಿಯಲ್ಲಿ ಪೊನ್ನಂಪೇಟೆ ತಾಲೂಕಿನಾದ್ಯಂತ ಸಡಿಲಿಕೆ ಕಂಡುಬAದಿತ್ತು.

ಪ್ರತಿನಿತ್ಯದಂತೆ ಶನಿವಾರವೂ ವಾಹನಗಳ ಓಡಾಟ ಅಧಿಕವಾಗಿಯೇ ಇತ್ತು. ಆಟೋ ಸಂಚಾರ ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳ ಓಡಾಟ ಇತ್ತು. ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದರೂ, ಕೆಲವೊಂದು ಸರಕಾರಿ ಬಸ್‌ಗಳ ಸಂಚಾರ ಕಂಡುಬAದಿತ್ತು. ನಿಯಮ ಪಾಲನೆಯಲ್ಲಿ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಯ ಬಗ್ಗೆ ಸಾರ್ವಜನಿಕರಿಗೆ ಬಹಳಷ್ಟು ಗೊಂದಲಗಳು ಇದ್ದ ಕಾರಣ ಬಹುತೇಕ ಮಂದಿ ಬೆಳಿಗ್ಗೆ ೯ ಗಂಟೆಯೊಳಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ತೆರಳಿದರು.

ಪಟ್ಟಣಗಳಲ್ಲಿ ಜನರ ಅನಾವಶ್ಯಕ ಓಡಾಟಗಳು ಕಂಡುಬAದವು. ತಿತಿಮತಿ ಆನೆಚೌಕರು ಗಡಿಗೇಟಿನಲ್ಲಿ ಯಾವುದೇ ಬಿಗಿ ಭದ್ರತೆ ಇರಲಿಲ್ಲ. ಮುಕ್ತವಾಗಿ ವಾಹನಗಳು ಸಂಚಾರ ನಡೆಸುತ್ತಿದ್ದವು. ಪಿರಿಯಾಪಟ್ಟಣ, ಅಳ್ಳೂರು, ಪಂಚವಳ್ಳಿ ಭಾಗಗಳಿಂದ ಕೊಡಗಿನ ಕಾಫಿ ತೋಟಗಳಿಗೆ ಕಾರ್ಮಿಕರನ್ನು ಕರೆತರುವ ವಾಹನಗಳ ಸಂಚಾರ ಅಧಿಕವಾಗಿಯೇ ಇತ್ತು. ಒಂದು ವಾಹನದಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಿ ಯಾವುದೇ ನಿಯಮಗಳ ಪಾಲನೆ ಇಲ್ಲದೇ ಕಾರ್ಮಿಕರು ಮಾಸ್ಕ್ ಧರಿಸದೇ ಗುಂಪಾಗಿ ಪ್ರಯಾಣಿಸುವ ದೃಶ್ಯಗಳು ಕಂಡುಬAದವು.

ಪ್ರವಾಸೋದ್ಯಮ ನಿಶ್ಯಬ್ಧ : ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಪೂರ್ಣ ನಿಶ್ಯಬ್ಧವಾಗಿತ್ತು. ಪ್ರಮುಖ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ನಾಗರಹೊಳೆಯಲ್ಲಿ ಸಫಾರಿ ಅವಕಾಶವಿದ್ದರೂ, ಜನರಿಲ್ಲದ ಕಾರಣ ಸ್ಥಗಿತಗೊಂಡಿತ್ತು. ಆತಿಥ್ಯ ಕೇಂದ್ರಗಳಿಗೆ ಬರುವವರು ಮುಂಗಡ ಕಾಯ್ದಿರಿಸಿದ ರಶೀದಿ ತೋರಿಸಿ ಹೋಂಸ್ಟೆ, ರೆಸಾರ್ಟ್, ಲಾಡ್ಜ್ಗಳಲ್ಲಿ ಉಳಿಯಲು ಅವಕಾಶವಿತ್ತು. ಸೋಮವಾರಪೇಟೆ : ರಾಜ್ಯ ಸರ್ಕಾರದ ಆದೇಶದಂತೆ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂ, ಹಲವಷ್ಟು ಗೊಂದಲಗಳ ನಡುವೆಯೂ ಜನಸಾಮಾನ್ಯರಿಂದ ಬೆಂಬಲ ಪಡೆಯಿತು. ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕರ್ಫ್ಯೂ ಬಗ್ಗೆ ನಿಖರತೆ ಇಲ್ಲದ್ದರಿಂದ ಗೊಂದಲ ಉಂಟಾಯಿತು.

ಕರ್ಫ್ಯೂ ಹಿನ್ನೆಲೆ ಪಟ್ಟಣಕ್ಕೆ ಸಾರ್ವಜನಿಕರು ಆಗಮಿಸುವುದಿಲ್ಲ ಎಂಬ ಚಿಂತನೆಯಿAದಾಗಿ ಹಲವಷ್ಟು ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಬೆಳಿಗ್ಗೆ ೯ ಗಂಟೆಯ ನಂತರವೂ ತೆರೆದಿದ್ದ ಅಗತ್ಯವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.

ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಹಾಗೂ ಉಪ ನಿರೀಕ್ಷಕ ವಿರೂಪಾಕ್ಷ ಮತ್ತು ಸಿಬ್ಬಂದಿಗಳು ಪಟ್ಟಣದಲ್ಲಿ ಸಂಚರಿಸಿ ಕರ್ಫ್ಯೂ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡುತ್ತಿದ್ದರು. ಇದರೊಂದಿಗೆ ಅನಗತ್ಯವಾಗಿ ಓಡಾಡುತ್ತಿದ್ದ ಮಂದಿಯನ್ನು ಗದರಿಸಿ, ಮನೆಗೆ ಹೋಗುವಂತೆ ನಿರ್ದೇಶನ ನೀಡಿದರು.

ಒಟ್ಟಾರೆ ಸಾರ್ವಜನಿಕ ವಲಯದಲ್ಲಿ ಹಲವಷ್ಟು ಗೊಂದಲಗಳನ್ನು ಹುಟ್ಟುಹಾಕಿರುವ ವಾರಾಂತ್ಯದ ಕರ್ಫ್ಯೂ, ವರ್ತಕರಲ್ಲಿ ಅಸಮಾಧಾನ ಮೂಡಿಸಿದೆ. ಲಾಕ್‌ಡೌನ್ ಸಂದರ್ಭ ಸಮರ್ಪಕ ಮಾಹಿತಿಗಳು ಲಭಿಸುತ್ತಿದ್ದವು. ಆದರೆ ಈಗಿನ ಕರ್ಫ್ಯೂ ಬಗ್ಗೆ ವರ್ತಕರಿಗೆ ಸಮರ್ಪಕ ಮಾಹಿತಿಯಿಲ್ಲ. ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ವರ್ತಕರಾದ ಯೋಗೇಶ್‌ಕುಮಾರ್, ರಫೀಕ್, ಅಭಿಲಾಷ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ. ಆದರೆ, ಹಲವರು ಬುಕ್ಕಿಂಗ್ ರದ್ದು ಮಾಡಿಕೊಂಡಿದ್ದು, ಉದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ. ಪ್ರವಾಸಿ ಕೇಂದ್ರಗಳಿಗೆ ತೆರಳಲು ಅವಕಾಶ ಇಲ್ಲದ ಹಿನ್ನೆಲೆ ಜಿಲ್ಲೆಗೆ ಬಂದು ಪ್ರಯೋಜನವಿಲ್ಲ ಎಂದು ಬಹುತೇಕ ಪ್ರವಾಸಿಗರು ಬುಕ್ಕಿಂಗ್ ರದ್ದು ಮಾಡಿಕೊಂಡಿದ್ದಾರೆ ಎಂದು ಆತಿಥ್ಯ ಕೇಂದ್ರಗಳ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಿಗ್ಗೆ ೧೨ ಗಂಟೆಯ ಗೋಣಿಕೊಪ್ಪಲು : ಸರ್ಕಾರ ವೀಕೆಂಡ್ ಕರ್ಫ್ಯೂ ವಿಧಿಸಿದ ಹಿನ್ನೆಲೆಯಲ್ಲಿ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಯಾವುದೇ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಓಡಾಟ ನಡೆಸಿದವು. ಆದರೆ ಪ್ರಯಾಣಿಕರಿಲ್ಲದೇ ಖಾಲಿಯಾಗಿ ಸಂಚರಿಸಿದವು.

ಖಾಸಗಿ ಬಸ್‌ಗಳಿಲ್ಲದೇ ದೂರದ ಗ್ರಾಮೀಣ ಪ್ರದೇಶಗಳಿಗೆ ತೆರಳುವ ನಾಗರಿಕರು ಆಟೋರಿಕ್ಷಾ ಮೊರೆ ಹೋದರು. ಜನರ ಸಂಚಾರ ವಿರಳವಾಗಿತ್ತು. ನಗರದಲ್ಲಿ ದಿನಸಿ, ಹಾಲು, ಬೇಕರಿ, ಮೆಡಿಕಲ್, ಹಣ್ಣುಹಂಪಲು, ಹಸಿ ಮೀನು, ಮಾಂಸದ ಅಂಗಡಿಗಳು ತೆರೆದಿದ್ದವು. ಆದರೆ ಜನರು ಅಷ್ಟಾಗಿ ಅಂಗಡಿಗಳ ಮುಂದೆ ಕಾಣಿಸಿಕೊಳ್ಳಲಿಲ್ಲ. ಅಂಗಡಿ ಮಾಲೀಕರು ಗ್ರಾಹಕರಿಗಾಗಿ ಎದುರು ನೋಡುವ ಪರಿಸ್ಥಿತಿ ಕಂಡುಬAತು.

ಗ್ರಾಮ ಪಂಚಾಯತಿ ವಾಹನದಲ್ಲಿ ಧ್ವನಿ ವರ್ಧಕದ ಮೂಲಕ ಪ್ರಚಾರ ನಡೆಸಿ, ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸುವಂತೆ ಪ್ರಚಾರ ಪಡಿಸಲಾಯಿತು. ಸಮಯದ ಗೊಂದಲದಿAದಾಗಿ ಜನರು ಹಾಗೂ ವರ್ತಕರು ಕೆಲಕಾಲ ಗೊಂದಲ ಎದುರಿಸಿದರು.

ತೋಟದ ಮಾಲೀಕರು ತಮ್ಮ ತಮ್ಮ ಕಾಫಿ ತೋಟಗಳಿಗೆ ಕಾರ್ಮಿಕರನ್ನು ಕಾಫಿ ಕೊಯ್ಯುವ ಸಲುವಾಗಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದ ಅಷ್ಟಾಗಿ ಜನರು ಹೊರ ಬರುವ ಪ್ರಯತ್ನ ಮಾಡಲಿಲ್ಲ.ತನಕ ಜನರಹಾಗೂ ವಾಹನ ಓಡಾಟ ಎಂದಿನAತೆ ಇತ್ತು. ಪೊಲೀಸರು ಕೆಲಕಾಲ ವಾಹನ ತಪಾಸಣೆ ನಡೆಸಿದರು. ಅನಗತ್ಯವಾಗಿ ಬಂದವರನ್ನು ಪ್ರಶ್ನಿಸಿದರು. ಅದನ್ನು ಹೊರತುಪಡಿಸಿದಂತೆ ನಂತರ ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿಲ್ಲ. ೧೨ ಗಂಟೆಯ ನಂತರ ವಾಹನ ಸಂಚಾರ ಕಡಿಮೆಯಾಯಿತು. ಅನಗತ್ಯ ಓಡಾಟವೂ ಅಲ್ಲಲ್ಲಿ ಕಂಡುಬAತು. ನಾಪೋಕ್ಲು : ಸರಕಾರ ಕರೆ ನೀಡಿದ ವೀಕೆಂಡ್ ಕರ್ಫ್ಯೂ ನಾಪೋಕ್ಲು ಪಟ್ಟಣದಲ್ಲಿ ಯಶಸ್ವಿಯಾಗಿ ಪಾಲನೆಯಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಖಾಸಗಿ ಬಸ್‌ಗಳ ಸಂಚಾರ ಇರಲಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಂತರರಾಜ್ಯ ಬಸ್‌ಗಳು ಸಂಚಾರ ಮಾತ್ರ ಕಂಡುಬAತು. ಆದರೆ, ಪ್ರಯಾಣಿಕರ ಸಂಖ್ಯೆ ಬೆರಳಣಿಕೆಯಲ್ಲಿತ್ತು. ಆಟೋ ರಿಕ್ಷಾಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕೆಲವು ಖಾಸಗಿ ವಾಹನಗಳನ್ನು ಹೊರತುಪಡಿಸಿದರೆ ಹೆಚ್ಚಿನ ವಾಹನ ಸಂಚಾರವಿರಲಿಲ್ಲ. ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದ ಜನರ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿರುವದು ಕಂಡು ಬಂತು.

ಮುಳ್ಳೂರು : ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರಕಾರ ಕೈಗೊಂಡ ವಾರಾಂತ್ಯ ಕರ್ಫ್ಯೂನಿಂದ ಶನಿವಾರಸಂತೆಯಲ್ಲಿ ಗೊಂದಲ ಉಂಟಾಗಿತ್ತು. ವಾರಾಂತ್ಯ ಕರ್ಫ್ಯೂ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ವಾರದ ಸಂತೆಯನ್ನು ರದ್ದುಗೊಳಿಸಿದ್ದು, ಈ ಕುರಿತು ಶುಕ್ರವಾರ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಸಂತೆ ರದ್ದುಗೊಂಡಿರುವ ಬಗ್ಗೆ ಮಾಹಿತಿ ಇಲ್ಲದ ಹೊರ ಜಿಲ್ಲೆಯಿಂದ ಬೆಳಿಗ್ಗೆ ೬ ಗಂಟೆ ಹೊತ್ತಿಗೆ ತರಕಾರಿ, ದಿನಸಿ ವಸ್ತುಗಳ ವ್ಯಾಪಾರಿಗಳು ಬಂದಿದ್ದರು. ಕೆಲವು ತರಕಾರಿ ವ್ಯಾಪಾರಿಗಳು ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮತ್ತೆ ಕೆಲವು ವ್ಯಾಪಾರಿಗಳು ಸಂತೆ ಮಾರುಕಟ್ಟೆ ಬಳಿಯ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಬೆಳಿಗ್ಗೆ ೮ ಗಂಟೆ ಹೊತ್ತಿಗೆ ತರಕಾರಿ ಕೊಳ್ಳಲು ಗ್ರಾಹಕರು ಮುಗಿಬೀಳುತ್ತಿದ್ದರು. ಇದರಿಂದ ಕೆಆರ್‌ಸಿ ವೃತ್ತದಲ್ಲಿ ಜನಜಂಗುಳಿಯಾಯಿತು. ಆದರೂ ಪೊಲೀಸರು ತರಕಾರಿ ವ್ಯಾಪಾರಿಗಳಿಗೆ ೧೧ ಗಂಟೆವರೆಗೆ ಅವಕಾಶ ಮಾಡಿಕೊಟ್ಟರು. ಜನ ಜಂಗುಳಿಯಾದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ತರಕಾರಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಎಚ್ಚರಿಕೆ ನೀಡಿ ವ್ಯಾಪಾರವನ್ನು ಸ್ಥಗಿತಗೊಳಿಸಿ ತೆರವುಗೊಳಿಸಿದರು. ಚೆಟ್ಟಳ್ಳಿ : ವಾರಾಂತ್ಯದ ಕರ್ಫ್ಯೂಗೆ ಚೆಟ್ಟಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಬೆಳಗ್ಗಿನಿಂದಲೇ ಜನರು ದಿನ ಅಗತ್ಯದ ವಸ್ತುಗಳನ್ನು ಖರೀದಿಸಿ ತೆರಳುತ್ತಿದ್ದರು. ಬೆಳಿಗ್ಗೆ ೧೦ ಗಂಟೆಗೆ ಪೊಲೀಸ್ ಸಿಬ್ಬಂದಿಗಳು ಅಂಗಡಿ ಮುಂಗಟ್ಟನ್ನು ಮುಚ್ಚಿಸಿದರು. ದಿನಸಿ, ತರಕಾರಿ, ಹೊಟೇಲ್, ಮಾಂಸದ ಅಂಗಡಿಗಳು ತೆರೆದಿದ್ದವು. ಜನರ ಹಾಗೂ ವಾಹನ ಓಡಾಟ ವಿರಳವಾಗಿತ್ತು. ಕೂಡಿಗೆ : ಇಲ್ಲಿಗೆ ಸಮೀಪದ ಗಡಿ ಭಾಗವಾಗಿದ್ದ ಶಿರಂಗಾಲದ ಅರಣ್ಯ ತಪಾಸಣಾ ಗೇಟ್‌ನಲ್ಲಿ ಹಾಸನ ಕಡೆಯಿಂದ ಹೆದ್ದಾರಿಯ ಮೂಲಕ ಜಿಲ್ಲೆಗೆ ಪ್ರವೇಶ ಮಾಡುವ ಎಲ್ಲಾ ವಾಹನಗಳ ತಪಾಸಣೆ ಮಾಡಲಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಿ ಅವರುಗಳ ಸ್ವವಿಳಾಸ ಮತ್ತು ಹೋಗುವ ಸ್ಥಳದ ನೋಂದಣಿ ಕಾರ್ಯ ನಡೆಸಿದರು. ಈ ವ್ಯಾಪ್ತಿಯ ಶಿರಂಗಾಲ, ಹೆಬ್ಬಾಲೆ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನಸಿ, ತರಕಾರಿ, ಹೊಟೇಲ್ ಮತ್ತು ಮಾಂಸದ ಅಂಗಡಿಗಳು ತೆರದಿದ್ದವು. ಜನರ ಓಡಾಟ ಬಹಳ ವಿರಳವಾಗಿತ್ತು.

ಸಿದ್ದಾಪುರ : ಸರ್ಕಾರದ ಆದೇಶದ ಮೇರೆಗೆ ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ಸಿದ್ದಾಪುರ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಬಸ್‌ಗಳ ಸಂಚಾರವಿಲ್ಲದೇ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವವರ ಸಂಖ್ಯೆ ಇಳಿಮುಖವಾಗಿತ್ತು. ಬಸ್ ಸಂಚಾರವಿಲ್ಲದೆ ಜನರ ಓಡಾಟ ಇಲ್ಲದೇ ಸಿದ್ದಾಪುರ ಪಟ್ಟಣ ಬಿಕೋ ಎನ್ನುತ್ತಿತ್ತು. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕೂಡಿಗೆ : ಕೂಡಿಗೆ ಕೂಡುಮಂಗಳೂರು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದವು ಉಳಿದ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದವು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಕೈಗಾರಿಕಾ ಘಟಕ ಕೇಂದ್ರದಲ್ಲಿ ಎಂದಿನAತೆ ಕೆಲಸಗಳು ನಡೆಯುತ್ತಿದವು. ಮಾಂಸದ ಅಂಗಡಿಗಳಲ್ಲಿ ಜನರಿಲ್ಲದೆ ವ್ಯಾಪಾರ ಕ್ಷೀಣಿಸಿತ್ತು.

ಕುಶಾಲನಗರದಿಂದ ಹಾಸನ ಕಡೆಗೆ ಎರಡೂ ಗಂಟೆಗೊಮ್ಮೆ ಸರಕಾರಿ ಬಸ್ ಹೋಗುವ ದೃಶ್ಯ ಕಂಡುಬAದಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಕುಶಾಲನಗರ : ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದ ಜನತೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಬೆಂಬಲ ನೀಡಿದರು.

ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಶಾಲಾ-ಕಾಲೇಜುಗಳು ಸರ್ಕಾರಿ ಖಾಸಗಿ ಕಚೇರಿಗಳು ಕೂಡ ತಮ್ಮ ಕಚೇರಿ ಬಂದ್ ಮಾಡಿ ಸರಕಾರದ ಆದೇಶವನ್ನು ಪಾಲಿಸಿದರು.

ಕುಶಾಲನಗರ ಮೈಸೂರು ಹೆದ್ದಾರಿ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸರ್ಕಾರಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಲಿಲ್ಲ. ಪ್ರಯಾಣಿಕರ ಕೊರತೆ ನಡುವೆ ಕೆಲವು ಬಸ್‌ಗಳ ಓಡಾಟ ಕಂಡುಬAತು.

ಕುಶಾಲನಗರ ಮಡಿಕೇರಿ ರಸ್ತೆಯಲ್ಲಿ ಸರಕಾರಿ ಬಸ್‌ಗಳ ಸಂಚಾರ ಕೇವಲ ಬೆರಳೆಣಿಕೆಯಷ್ಟು ಇತ್ತು. ಖಾಸಗಿ ಬಸ್ ಸಂಚಾರ ಇರಲಿಲ್ಲ. ಪಟ್ಟಣದಲ್ಲಿ ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಗಡಿಭಾಗದಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲದೆ ಸಂಚಾರಕ್ಕೆ ಮುಕ್ತವಾಗಿತ್ತು.

ಬೆಳಿಗ್ಗೆ ೯ ಗಂಟೆ ತನಕ ಹಾಲು ಪೇಪರ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಜನರ ಓಡಾಟ ಇತ್ತೇ ಹೊರತು ಉಳಿದಂತೆ ಜನರು ಸ್ವಯಂಪ್ರೇರಿತವಾಗಿ ವಾರಾಂತ್ಯದ ಕರ್ಫ್ಯೂಗೆ ಬೆಂಬಲ ನೀಡಿದರು. ಕುಶಾಲನಗರ ಕಾವೇರಿ ನಿಸರ್ಗಧಾಮ, ದುಬಾರೆ ಪ್ರವಾಸಿ ಕೇಂದ್ರಗಳನ್ನು ಮುಚ್ಚಲಾಗಿತ್ತು. ಸರ್ಕಾರದ ಸೂಚನೆಯಂತೆ ಎರಡು ದಿನಗಳ ಕಾಲ ಪ್ರವಾಸಿ ಕೇಂದ್ರಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಅನನ್ಯ ಕುಮಾರ್ ತಿಳಿಸಿದ್ದಾರೆ.ಪೊನ್ನಂಪೇಟೆ : ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿ, ದಿನನಿತ್ಯದ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದರೂ ಕೂಡ ಪೊನ್ನಂಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳು ಗ್ರಾಹಕರಿಲ್ಲದೆ ಬಣಗುಡುತಿದ್ದವು.

ಕರ್ಫ್ಯೂ ಜಾರಿಯ ಬಗ್ಗೆ ಗೊಂದಲದಲ್ಲಿದ್ದ ನಾಗರಿಕರು, ಪಟ್ಟಣಕ್ಕೆ ಬರಲು ಹಿಂದೇಟು ಹಾಕಿದ್ದ ಕಾರಣ ವಾಹನ ಸಂಚಾರ ವಿರಳವಾಗಿತ್ತು. ಹೊಟೇಲ್, ಬೇಕರಿಗಳಿಗೆ ಪಾರ್ಸಲ್ ನೀಡಲು ಅನುಮತಿ ಇದ್ದರೂ ಕೂಡ ಗ್ರಾಹಕರು ಬಾರದ ಕಾರಣ ವ್ಯಾಪಾರ ಕ್ಷೀಣವಾಗಿತ್ತು.

ಕಾಫಿ ಕುಯ್ಲಿನ ಸಮಯವಾಗಿರುವುದರಿಂದ, ತೋಟದ ಮಾಲೀಕರು ತಮ್ಮ ವಾಹನಗಳಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಖಾಸಗಿ ಬಸ್‌ಗಳ ಸಂಚಾರ ಇಲ್ಲದ ಕಾರಣ, ಬಸ್‌ಗಳನ್ನು ಅವಲಂಬಿಸಿದ್ದ ಕೂಲಿಕಾರ್ಮಿಕರು ಮನೆಗೆ ವಾಪಾಸ್ ತೆರಳಿದರು.

ಆಟೋಗಳು ಪ್ರಯಾಣಿಕರಿಲ್ಲದೆ ನಿಲ್ದಾಣದಲ್ಲಿ ನಿಂತಿದ್ದವು. ಒಂದೆರಡು ಸರ್ಕಾರಿ ಬಸ್‌ಗಳು ಸಂಚರಿಸಿದವು. ಮದ್ಯದಂಗಡಿಗಳು ಬಂದ್ ಆಗಿದ್ದರಿಂದ ಜನಸಂಚಾರ ವಿರಳವಾಗಿತ್ತು.

ಕೂಡಿಗೆ : ಕೂಡಿಗೆ ಕೂಡುಮಂಗಳೂರು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿದವು ಉಳಿದ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದವು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಕೈಗಾರಿಕಾ ಘಟಕ ಕೇಂದ್ರದಲ್ಲಿ ಎಂದಿನAತೆ ಕೆಲಸಗಳು ನಡೆಯುತ್ತಿದವು. ಮಾಂಸದ ಅಂಗಡಿಗಳಲ್ಲಿ ಜನರಿಲ್ಲದೆ ವ್ಯಾಪಾರ ಕ್ಷೀಣಿಸಿತ್ತು.

ಕುಶಾಲನಗರದಿಂದ ಹಾಸನ ಕಡೆಗೆ ಎರಡೂ ಗಂಟೆಗೊಮ್ಮೆ ಸರಕಾರಿ ಬಸ್ ಹೋಗುವ ದೃಶ್ಯ ಕಂಡುಬAದಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಮಡಿಕೇರಿ : ಕೊಡಗು-ಕೇರಳ ಗಡಿಗಳಾದ ಮಾಕುಟ್ಟ, ಕುಟ್ಟ, ಕರಿಕೆಯಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿದೆ.

ಕೇರಳದಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತೋರಿಸಿದ ಬಳಿಕವಷ್ಟೆ ಜಿಲ್ಲೆಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ತುರ್ತು ವೈದ್ಯಕೀಯ ಸೇವೆಗೆ ಅನುವು ಮಾಡಿಕೊಡಲಾಗಿದೆ. ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಲಾಗಿತ್ತು. ಆರೋಗ್ಯ ಕಾರ್ಯಕರ್ತರು ನೆಗೆಟಿವ್ ವರದಿಯನ್ನು ಬಾರ್ ಕೋಡ್ ಸ್ಕಾö್ಯನ್ ಮಾಡುವ ಮೂಲಕ ವರದಿಯ ನೈಜಾಂಶ ತಿಳಿದುಕೊಳ್ಳುತ್ತಿದ್ದಾರೆ.

ಗಡಿಭಾಗ ಕುಟ್ಟ ಚೆಕ್ ಪೋಸ್ಟ್ ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಗತ್ಯ ವಸ್ತು ಸಾಗಾಟ ವಾಹನವನ್ನು ಹೊರತುಪಡಿಸಿ, ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಕುಟ್ಟ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು ತೆರೆದಿದ್ದವು. ಮದ್ಯ ಮಾರಾಟ ನಿಷೇಧಿಸಿದ್ದರಿಂದ ಜನಸಂಚಾರ ಕಡಿಮೆ ಇತ್ತು. ಮಾಕುಟ್ಟ ತಪಾಸಣಾ ಕೇಂದ್ರದಲ್ಲಿ ತುರ್ತು ಪ್ರಯಾಣ ಕೈಗೊಳ್ಳಬೇಕಾದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ನಂತರ ವಾಹನಗಳನ್ನು ಬಿಡಲಾಗುತಿತ್ತು. ವಿಮಾನ ನಿಲ್ದಾಣಕ್ಕೆ ಹೋಗುವವರು ಈ ಮೊದಲೇ ಟಿಕೆಟ್ ನಿಗದಿ ಮಾಡಿರುವವರು, ಈಗ ತುರ್ತು ಕಾರಣದಿಂದ ಪ್ರಯಾಣಿಸಬೇಕಾದವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತಿತ್ತು. ಸರಕು ಸಾಗಿಸುವ ವಾಹನಗಳು ಸಂಚಾರ ಮಾಡಬಹುದಾಗಿತ್ತು.

ಸುಂಟಿಕೊಪ್ಪ : ನಗರದಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಜನರ ಓಡಾಟ ವಿರಳವಾಗಿತ್ತು. ಉದ್ಯಮದ ಮೇಲೆ ದೊಡ್ಡ ಹೊಡೆತ ಬಿತ್