ಮಡಿಕೇರಿ, ಜ. ೮: ಮುಂಬರಲಿರುವ ಪ್ರಮುಖ ಹಾಕಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿರುವ ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ ಆಯ್ಕೆಗಾಗಿ ರಾಷ್ಟಿçÃಯ ಶಿಬಿರಕ್ಕೆ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ. ಈ ರಾಷ್ಟಿçÃಯ ಶಿಬಿರಕ್ಕೆ ಕರ್ನಾಟಕ ರಾಜ್ಯದಿಂದ ಒಟ್ಟು ಆರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಕೊಡಗು ಜಿಲ್ಲೆಯವರಾಗಿದ್ದು, ಇತರ ಇಬ್ಬರು ಹಾಸನ ಜಿಲ್ಲೆಯವರಾಗಿದ್ದಾರೆ. ಮಡಿಕೇರಿಯ ಸಾಯಿ ಹಾಸ್ಟೆಲ್‌ನಲ್ಲಿರುವ ಕ್ರೀಡಾಪಟುಗಳಾದ ಆದಿರಾ ಎಸ್., ಪಾಂಡAಡ ದೇಚಮ್ಮ ಗಣಪತಿ, ಬಾದುಮಂಡ ಶಯಾ ಕಾವೇರಮ್ಮ ಹಾಗೂ ಎಸ್.ಪಿ. ಲಿಖಿತಾ ಕೊಡಗಿನಿಂದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಮೈಸೂರು ಡಿವೈಎಸ್‌ನಲ್ಲಿರುವ ಹಾಸನ ಮೂಲದ

(ಮೊದಲ ಪುಟದಿಂದ) ಕ್ರೀಡಾಪಟುಗಳಾದ ಚಂದನ ಜೆ ಹಾಗೂ ತೇಜಸ್ವಿನಿ ಡಿ.ಎನ್. ಅವರುಗಳೂ ಶಿಬಿರಕ್ಕೆ ನೇಮಕವಾಗಿದ್ದಾರೆ. ತಾ. ೧೭ರಿಂದ ೨೯ರವರೆಗೆ ಬೆಂಗಳೂರಿನ ಸಾಯಿ ಸೆಂಟರ್‌ನಲ್ಲಿ ರಾಷ್ಟಿçÃಯ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ರಾಜ್ಯದ ಆರು ಆಟಗಾರ್ತಿಯರನ್ನು ವಿಶೇಷವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಹಾಕಿ ಕರ್ನಾಟಕದ ಮೂಲಕ ತಾ. ೧೦ರಿಂದಲೇ ಬೆಂಗಳೂರಿನಲ್ಲಿ ಫಿಟ್‌ನೆಸ್ ಸೇರಿದಂತೆ ವಿಶೇಷ ತರಬೇತಿಯನ್ನು ನುರಿತ ತಜ್ಞರಿಂದ ಒದಗಿಸಲಾಗುವುದು. ಈ ಬಗ್ಗೆ ಹಾಕಿ ಕರ್ನಾಟಕ ವಿಶೇಷ ಗಮನ ಹರಿಸಲಿದೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಅಂಜಪರವAಡ ಬಿ. ಸುಬ್ಬಯ್ಯ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಭಾರತ ಜೂನಿಯರ್ ಮಹಿಳಾ ತಂಡಕ್ಕೆ ಅಂತಿಮವಾಗಿ ಆಯ್ಕೆಯಾಗುವ ಆಟಗಾರ್ತಿಯರು ಮುಂದಿನ ಹಲವು ಪ್ರಮುಖ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶಿಬಿರಕ್ಕೆ ಆಯ್ಕೆಯಾದವರ ಪಟ್ಟಿಯನ್ನು ಹಾಕಿ ಇಂಡಿಯಾ ನಿನ್ನೆ ಪ್ರಕಟಿಸಿದೆ.