ಕಣಿವೆ, ನ. ೨೫ : ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೊಡ್ಡ ಅಳುವಾರದಲ್ಲಿರುವ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಕುರಿತಾಗಿ ಗುರುವಾರ ‘ಶಕ್ತಿ’ ಯಲ್ಲಿ ಪ್ರಕಟಗೊಂಡ ವರದಿ ಜಿಲ್ಲಾಧಿಕಾರಿ ಡಾ.ಸತೀಶ ಅವರ ಗಮನ ಸೆಳೆದಿದೆ.

‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಆರಂಭಕ್ಕೂ ಮುನ್ನವೇ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಬೀಗ ಮುದ್ರೆ ....?’ ಎಂಬ ವರದಿಯನ್ನು ಓದಿದ ತಕ್ಷಣವೇ ಕೊಡಗು ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಸುರೇಶ್ ಭಟ್ ಅವರನ್ನು ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಬಳಿಕ ಡಾ.ಸುರೇಶ್ ಭಟ್ ದೊಡ್ಡಳುವಾರದಲ್ಲಿನ ವನ್ಯಜೀವಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ರಂಗನಾಥ್ ಅವರಿಗೆ ಕರೆಮಾಡಿ ವರದಿ ಬಗ್ಗೆ ಚರ್ಚಿಸಿ ಪೂರಕವಾದ ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಳಿಕ ಸಂಶೋಧನಾ ಸಂಸ್ಥೆಯ ಕುಲಸಚಿವ ಡಾ.ವೀರಣ್ಣ ಅವರಿಗೆ ಫೋನಾಯಿಸಿ ಸಂಸ್ಥೆಯ ಪ್ರಸ್ತುತದ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ವನ್ಯಜೀವಿಗಳ ಸಂಶೋಧನಾ ಸಂಸ್ಥೆ ಯಾವ ಕಾರಣಕ್ಕೂ ಕಳೆಗುಂದಬಾರದು. ಸಂಸ್ಥೆಯ ಅಭಿವೃದ್ಧಿಗೆ ಸಂಬAಧಿಸಿದAತೆ ಸರ್ಕಾರದಿಂದ ಅಥವಾ ಜಿಲ್ಲಾಡಳಿತದಿಂದ ಅಗತ್ಯವಿರುವ ಸಹಕಾರವನ್ನು ನೀಡಲಾಗುತ್ತದೆ. ಈ ಬಗ್ಗೆ ಕೂಡಲೇ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಕುಲಸಚಿವ ಡಾ.ವೀರಣ್ಣ ಅವರಿಗೆ ಜಿಲ್ಲಾಧಿಕಾರಿ ಡಾ.ಸತೀಶ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.

ಕೊಡಗು ಜಿಲ್ಲೆಯಲ್ಲಿ ದಶಕಗಳ ಕಾಲದಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ‘ಕಾಡಾನೆಗಳು ಹಾಗೂ ಮಾನವ ಸಂಘರ್ಷ’ ದ ಕುರಿತು ಇದೇ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆ ನಡೆಸಬಹುದಾದ ಹಾಗೂ ಕೃಷಿಕರಿಗೆ ಕಾಡಾನೆಗಳ ನಿಯಂತ್ರಣದ ಬಗ್ಗೆ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಸಾಧ್ಯತೆಗಳು ಇರುವುದರಿಂದ ಈ ಸಂಸ್ಥೆಯನ್ನು ಮುಚ್ಚಲು ಯಾವ ಕಾರಣಕ್ಕೂ ಬಿಡಬಾರದು ಎಂಬುದು ಜಿಲ್ಲಾಧಿಕಾರಿಗಳ ನಿಲುವಾಗಿದೆ.

ಮುಚ್ಚಲು ಬಿಡುವುದಿಲ್ಲ

ಹಾಗೆಯೇ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ‘ಶಕ್ತಿ’ಯಲ್ಲಿ ಪ್ರಕಟಿತ ಈ ವರದಿಗೆ ಪ್ರತಿಕ್ರಿಯಿಸಿ, ಕೊಡಗು ಜಿಲ್ಲೆಯಲ್ಲಿ ಆರಂಭಿಸಿರುವ ಸರಕಾರದ ಯಾವುದೇ ಯೋಜನಾ ಘಟಕಗಳು ಸ್ಥಳೀಯ ಸಂಸದ ಹಾಗೂ ಶಾಸಕರ ನಿರಾಸಕ್ತಿಯಿಂದಾಗಿ ಹೀಗೆ ಅವಕೃಪೆಗೆ ಒಳಗಾಗುತ್ತಿವೆ. ಯಾವ ಕಾರಣಕ್ಕೂ ಈ ಸಂಸ್ಥೆಯನ್ನು ಮುಚ್ಚಲು ನಾವು ಬಿಡುವುದಿಲ್ಲ. ಜಿಲ್ಲಾಧಿಕಾರಿಗಳು ತಕ್ಷಣವೇ ಸ್ಪಂದಿಸಿ ಸಂಬAಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಸಂಗ್ರಹಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.