ಮಡಿಕೇರಿ ನ. ೨೫: ಮೂಲತಃ ತಲಕಾವೇರಿಯವರಾದ ಜಯಪ್ರಕಾಶ್ ರಾವ್ ಅವರ ರಚನೆಯ “ಫೇಸ್‌ಬುಕ್ ಪ್ರಪಂಚ-ಶ್ರೀ ಸಾಮಾನ್ಯರು.. ಬಹುಮಾನ್ಯರು..” ಹೆಸರಿನ ಪುಸ್ತಕ ತಾ. ೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರು ಗಾಂಧಿ ಭವನದಲ್ಲಿ ಬಿಡುಗಡೆಗೊಳ್ಳಲಿದೆ.

೬೬ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ೬೬ ಕನ್ನಡ ಪುಸ್ತಕಗಳ ಲೋಕಾರ್ಪಣೆಗೊಳ್ಳಲಿದ್ದು, ಜಯಪ್ರಕಾಶ್ ಅವರ ೫ನೇ ಪುಸ್ತಕವಾದ “ಫೇಸ್‌ಬುಕ್ ಪ್ರಪಂಚ-ಶ್ರೀ ಸಾಮಾನ್ಯರು.. ಬಹುಮಾನ್ಯರು..”À ಕೃತಿ ಕೂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ನಾಡಿನ ೬೧ ಹಿರಿಯ ಸಾಧಕರ ವಿನೂತನ ಪರಿಚಯಾತ್ಮಕ ಲೇಖನಗಳ ಸಂಕಲನ ಇರುವ ಈ ಪುಸ್ತಕದಲ್ಲಿ ಕೊಡಗಿನ ೫ ಮಹನೀಯರ ವ್ಯಕ್ತಿಚಿತ್ರಣ ಕೂಡಾ ಸೇರಿದೆ.

ಹಲವು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿರುವ ಜಯಪ್ರಕಾಶ್ ರಾವ್ ಅವರು ಪ್ರತಿಷ್ಠಿತ ಡಿ.ಆರ್.ಡಿ.ಓ. ಸಂಸ್ಥೆಯ ಪ್ರಾದೇಶಿಕ ಸಾರ್ವಜನಿಕ ಸಂರ್ಪಕಾಧಿಕಾರಿಗಳಾಗಿ ಸೇವೆಸಲ್ಲಿಸಿದ್ದಲ್ಲದೆ ಮಾಜಿ ರಾಷ್ಟçಪತಿ ಡಾ. ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಅಧಿಕಾರಿ ಆಗಿಯೂ ಹಲವು ವರ್ಷ ನಿಯೋಜನೆಯಲ್ಲಿದ್ದರು.