ಕೂಡಿಗೆ, ನ. ೨೫: ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ ಗ್ರಾಮಗಳಲ್ಲಿ ಕಳೆದ ೨೦ ದಿನಗಳಿಂದ ಸುರಿದ ಮಳೆಯಿಂದಾಗಿ ಹಾನಿಯಾಗಿರುವ ಬೆಳೆಯ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಜಂಟಿಯಾಗಿ ಸಮೀಕ್ಷೆ ಕಾರ್ಯ ಕೈಗೊಂಡಿದೆ.

ಶಿರAಗಾಲ, ತೊರೆನೂರು, ಹೆಬ್ಬಾಲೆ, ಹುದುಗೂರು, ಕೂಡಿಗೆ, ಕೂಡುಮಂಗಳೂರು, ಚಿಕ್ಕತ್ತೂರು, ದೊಡ್ಡತ್ತೂರು ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಆ ವ್ಯಾಪ್ತಿಯ ಜೋಳ, ಶುಂಠಿ, ಕಾಫಿ ಬೆಳೆಗಳು ಹಾಳಾಗಿರುವ ಬಗ್ಗೆ ಸರ್ವೆ ನಡೆಸಿ ಸಂಪೂರ್ಣವಾದ ಮಾಹಿತಿ ಕಲೆಹಾಕಿದೆ. ರೈತರು ತಮ್ಮ ಬೆಳೆ ಹಾಳಾಗಿರುವ ಮಾಹಿತಿಯನ್ನು ಕಂದಾಯ ಇಲಾಖೆಗೆ ಮತ್ತು ಕೃಷಿ ಇಲಾಖೆಯವರಿಗೆ ಪರಿಹಾರಕ್ಕೆ ಅರ್ಜಿಯನ್ನು ನೀಡುವಂತೆ ಮನವಿ ಮಾಡಿದೆ.

ಕಂದಾಯ ನಿರೀಕ್ಷಕ ಸಂತೋಷ್, ತೋಟಗಾರಿಕೆ ಇಲಾಖೆ ಅಧಿಕಾರಿ ಕಾವ್ಯ, ಕೃಷಿ ಇಲಾಖೆಯ ಶಾರದಾ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಫೀರ್ ಮಹಮ್ಮದ್, ಗೌತಮ, ಕಾಫಿ ಮಂಡಳಿ ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು.