ಮಡಿಕೇರಿ, ನ. ೨೫: ರಾಜ್ಯ ವಿಧಾನ ಪರಿಷತ್‌ಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಮೂರು ಪಕ್ಷಗಳ, ಮೂವರು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ. ನಾಮಪತ್ರ ಹಿಂಪಡೆಯಲು ತಾ. ೨೬ (ಇಂದು) ಅಂತಿಮ ದಿನವಾಗಿದ್ದರೂ ಯಾರೂ ಹಿಂಪಡೆಯುವ ಸಾಧ್ಯತೆಗಳು ಇಲ್ಲ. ಇದೀಗ ಮೂರು ಪಕ್ಷಗಳಿಂದಲೂ ಜಿಲ್ಲೆಯ ಅಲ್ಲಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗಿದ್ದು, ಮತ ಪ್ರಚಾರದ ಬಿರುಸು ಹೆಚ್ಚಾಗುತ್ತಿದೆ.

ಬಿ.ಜೆ.ಪಿ.: ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಎಂ.ಪಿ. ಸುಜಾಕುಶಾಲಪ್ಪ ಅವರು ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಪ್ರಮುಖರಾದ ಶಾಂತೆಯAಡ ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ನೆಲ್ಲಿರ ಚಲನ್, ರೀನಾ ಪ್ರಕಾಶ್ ಸೇರಿದಂತೆ ಪಕ್ಷದ ಇತರ ಪ್ರಮುಖರ ದಂಡಿನೊAದಿಗೆ ವಿವಿಧ ಗ್ರಾ.ಪಂ. ಕ್ಷೇತ್ರಗಳತ್ತ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಇವರು ನಿನ್ನೆಯಿಂದಲೇ ಪ್ರಚಾರ ಆರಂಭಿಸಿದ್ದಾರೆ. ಇಂದು ದಕ್ಷಿಣ ಕೊಡಗಿನ ಗಡಿಭಾಗ ಕುಟ್ಟ ವಿಭಾಗದಿಂದ ಅಲ್ಲಲ್ಲಿ ತೆರಳಿ ಪ್ರಚಾರ - ಸಭೆ ನಡೆಸಲಾಯಿತು.

ಕಾಂಗ್ರೆಸ್: ಕಾಂಗ್ರೆಸ್ ಪಕ್ಷ ಕೂಡ ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಅಭ್ಯರ್ಥಿ ಡಾ. ಮಂಥರ್‌ಗೌಡ ಅವರೊಂದಿಗೆ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪ್ರಮುಖರಾದ ಟಿ.ಪಿ. ರಮೇಶ್, ಸುರಯ್ಯ ಅಬ್ರಾರ್, ಕೊಲ್ಯದ ಗಿರೀಶ್, ಬೇಕಲ್ ರಮಾನಾಥ್, ನೆರವಂಡ ಉಮೇಶ್ ಸೇರಿದಂತೆ ಇತರ ಪ್ರಮುಖರು ಅಭ್ಯರ್ಥಿಗಳೊಂದಿಗೆ ತೆರಳುತ್ತಿದ್ದಾರೆ. ಇಂದು ಪೆರಾಜೆ, ಸಂಪಾಜೆ, ಕರಿಕೆ ಭಾಗದಿಂದ ಪ್ರಚಾರ ಕಾರ್ಯ ನಡೆಯಿತು.

ಜೆ.ಡಿ.ಎಸ್.: ಜೆ.ಡಿ.ಎಸ್. ಪಕ್ಷದಿಂದಲೂ ತಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲಾಗುತ್ತಿದೆ. ಪಕ್ಷದ ಅಭ್ಯರ್ಥಿಯಾಗಿರುವ ಇಸಾಕ್ ಖಾನ್, ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಖಜಾಂಚಿ ಬೆನ್ನಿ ಬರೋಸ್, ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಸುನಿಲ್ ಮತ್ತಿತರರು ಇಂದು ಸುಂಟಿಕೊಪ್ಪ ವಿಭಾಗದಿಂದ ಪ್ರಚಾರ ಪ್ರಾರಂಭಿಸಿದ್ದಾರೆ. ಡಿಸೆಂಬರ್ ೧೦ ರಂದು ಮತದಾನ ನಿಗದಿಯಾಗಿದ್ದು, ಇನ್ನು ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಕಾಣಲಿವೆ.