ವೀರಾಜಪೇಟೆ, ನ. ೨೫: ಆರಾಯಿರ ನಾಡ್‌ರ ಪುತ್ತರಿ ಕೋಲಾಟವು ವೀರಾಜಪೇಟೆಯ ಪೂಮಾಲೆ ಮಂದ್‌ನಲ್ಲಿ ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡAತೆ ಸಂಪನ್ನಗೊAಡಿತ್ತು.

ವೀರ ರಾಜೇಂದ್ರಪೇಟೆಯ ಆರಾಯಿರ ನಾಡ್ ಎನ್ನುವುದು ಬೈರನಾಡ್, ಎಡೆನಾಡ್, ಬೇಟೋಳಿನಾಡ್ ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಾಗಿ ವಿಂಗಡಣೆಗೊAಡು ೧೭ ಗ್ರಾಮಗಳ ಒಕ್ಕೂಟದ ನಾಡಿನ ಗ್ರಾಮಸ್ಥರ ಪುತ್ತರಿ ಕೋಲಾಟವು ವೀರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ವಿಜೃಂಭಣೆಯಿAದ ನಡೆಯಿತು.

ಪೂಮಾಲೆ ಮಂದ್‌ಗೆ ಕೊಡಗಿನ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಆಗಮಿಸಿದವರನ್ನು ಕೊಡಗಿನ ವಾಲಗ ವಾದ್ಯವೃಂದದ ಮೂಲಕ ಆದರಪೂರ್ವಕವಾಗಿ ಬರಮಾಡಿ ಕೊಂಡರು. ಮಧ್ಯಾಹ್ನ ೨.೩೦ಕ್ಕೆ ಮಂದ್‌ನ ಮಧ್ಯಭಾಗದಲ್ಲಿರುವ ಆಲದ ಮರಕ್ಕೆ ಪೊಜೆ ಸಲ್ಲಿಸಲಾಯಿತು. ನಾಲ್ಕು ಭಾಗದ ಗ್ರಾಮಸ್ಥರು ಒಂದೆಡೆ ಸೇರಿ ಕೋಲಾಟಕ್ಕೆ ಚಾಲನೆ ನೀಡಿದರು. ನಾಡ್ ಮರಿಯೋ, ನಾಡ್ ಕೋಲು, ಪರಿಯ ಕಳಿ, ವಾಲಗತ್ತಾಟ್, ಉಮ್ಮತ್ತಾಟ್ ಮತ್ತು ಕೋಲಾಟಗಳ ಪ್ರಕಾರಗಳು ಈ ಮಂದ್‌ನಲ್ಲಿ ನಡೆಯುತ್ತದೆ. ಅಲ್ಲದೆ ಇಲ್ಲಿ ಐದು ಗ್ರಾಮದ ಮುಕ್ಕಾಟೀರ, ಅಮ್ಮಣಕುಟ್ಟಂಡ, ಪೊನ್ನಕಚ್ಚೀರ, ಕೊಳುವಂಡ ಮತ್ತು ಅಜ್ಜಿನಿಕಂಡ ಮನೆತನದ ನಾಡು ತಕ್ಕರು, ದೇವತಕ್ಕರ ಸಮ್ಮುಖದಲ್ಲಿ ಮಂದ್ ನಡೆಯುತ್ತದೆ. ಕೊಡಗಿನ ವೀರ ಪರಂಪರೆ ಮತ್ತು ಧೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯುವ ರೀತಿಯಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತದೆ ಎಂದು ಸಮಿತಿಯ ಉಪಾಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ಅವರು ತಿಳಿಸಿದರು.

ಪೂಮಾಲೆ ಮಂದ್‌ನಲ್ಲಿ ಮೂರು ಸುತ್ತಿನ ಕೋಲಾಟ, ಏಳು ಜೋಡಿಯ ಪರಿಯ ಕಳಿ ವಾಲಗತಾಟ್ ನಡೆಯಿತು. ಕೋಲಾಟಕ್ಕೆ ಕೊಂಬು ಕೊಟ್ಟು ವಾಲಗ ದುಡಿಕೊಟ್ಟು, ವಾದ್ಯಗಳು ಮೆರಗು ನೀಡಿದವು. ಕೋಲಾಟದ ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿದ ವಿಜೇತರಿಗೆ ಮತ್ತು ಕೊಡಗಿನ ಸಂಸ್ಕೃತಿಯAತೆ ಉಡುಗೆ ತೊಟ್ಟ ಮಹಿಳೆಯರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಪೂಮಾಲೆ ಮಂದ್ ಸಮಿತಿಯ ಅಧ್ಯಕ್ಷ ಅಜ್ಜಿನಿಕಂಡ ಸುಧೀರ್, ಕಾರ್ಯದರ್ಶಿ ಮಾಚೇಟ್ಟಿರ ತಮ್ಮಯ್ಯ, ಮರಣ ಫಂಡ್ ಅಧ್ಯಕ್ಷ ಚೇಂದAಡ ಪೊನ್ನಪ್ಪ ಸೇರಿದಂತೆ ಸಮಿತಿಯ ಸದಸ್ಯರು, ಬೈರನಾಡ್ ಭಾಗದ ಬೈರಂಬಾಡ, ಹಾಲುಗುಂದ, ಒಂಟಿಅAಗಡಿ, ದೇವಣಗೇರಿ, ತಲಗಟ್ಟಕೇರಿ ಮತ್ತು ಹಚ್ಚಿನಾಡು ಗ್ರಾಮಗಳು ಎಡೆನಾಡು ಭಾಗದ ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ ಮತ್ತು ವೈಪಡ ಗ್ರಾಮಗಳು ಬೇಟೋಳಿನಾಡ್ ಭಾಗದ ಆರ್ಜಿ, ಬೇಟೋಳಿ ಮತ್ತು ಪೆರುವನಾಡ್ ಭಾಗದ ಬಿಟ್ಟಂಗಾಲ, ನಾಂಗಾಲ ಮತ್ತು ಬಾಳುಗೋಡು ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು. ಸನಿಹದ ಗ್ರಾಮದ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ