ಶ್ರೀಮಂಗಲ, ನ. ೨೪: ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗೆ ಭೇಟಿ ನೀಡಿ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಉಂಟಾಗಿರುವ ಕಾಫಿ ನಷ್ಟದ ಬಗ್ಗೆ ಸರಕಾರಕ್ಕೆ ಮಧ್ಯಂತರ ವರದಿಯನ್ನು ಶ್ರೀಮಂಗಲ, ನ. ೨೪: ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗೆ ಭೇಟಿ ನೀಡಿ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಉಂಟಾಗಿರುವ ಕಾಫಿ ನಷ್ಟದ ಬಗ್ಗೆ ಸರಕಾರಕ್ಕೆ ಮಧ್ಯಂತರ ವರದಿಯನ್ನು ಅರೇಬಿಕಾದಂತೆ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಇನ್ನು ಹತ್ತು ದಿನದ ನಂತರ ಕಾಫಿ ನಷ್ಟದ ಸಮೀಕ್ಷೆ ಮಾಡಿ ಅಂತಿಮ ವರದಿ ಸಲ್ಲಿಸುವುದು ಸೂಕ್ತ ಎಂದು ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಕಾರ್ಯದರ್ಶಿ ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅತಿ ಹೆಚ್ಚು ಮಳೆ ಬೀಳುವ ಶ್ರೀಮಂಗಲ ವ್ಯಾಪ್ತಿಯ ವಿವಿಧ ಕಾಫಿ ತೋಟಗಳಿಗೆ ಕಾಫಿ ಮಂಡಳಿಯ ಸದಸ್ಯರು, ಬೆಳೆಗಾರರು ಹಾಗೂ ಕಾಫಿ ಮಂಡಳಿಯ

(ಮೊದಲ ಪುಟದಿಂದ) ಅಧಿಕಾರಿಗಳ ತಂಡದೊAದಿಗೆ ಬೇಟಿ ನೀಡಿ ಅವರು ನಂತರ ನಡೆದ ಸಭೆಯಲ್ಲಿ ಈ ವಿಚಾರ ತಿಳಿಸಿದರು.

ಬೆಳೆ ನಷ್ಟದ ಬಗ್ಗೆ ತಾಂತ್ರಿಕವಾಗಿ ಸಮೀಕ್ಷೆ ಮಾಡಲು ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ. ಎಲ್ಲಾ ಬೆಳೆಗಾರರ ತೋಟಗಳಿಗೆ ತಂಡ ತೆರಳಿ ಬೆಳೆ ನಷ್ಟವನ್ನು ಅಂದಾಜಿಸಲು ಸಾಧ್ಯವಾಗುವುದಿಲ್ಲ. ಒಂದು ಗ್ರಾಮದ ಕನಿಷ್ಟ ೧೦ ತೋಟಗಳಿಗೆ ಭೇಟಿ ನೀಡಿ ನಷ್ಟದ ಪ್ರಮಾಣವನ್ನು ಅಂದಾಜಿಸಿ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ಗ್ರಾಮದಲ್ಲಿ ಶೇ. ೩೩ ರಷ್ಟು ಬೆಳೆ ನಷ್ಟ ಉಂಟಾದರೆ ಇಡೀ ಗ್ರಾಮದ ಬೆಳೆಗಾರರಿಗೆ ಪರಿಹಾರ ಲಭ್ಯವಾಗಲಿದೆ ಎಂದು ಹೇಳಿದರು. ಕಾಫಿ ಒಣಗಿಸುವ ಯಂತ್ರಕ್ಕೆ ತಕ್ಷಣಕ್ಕೆ ಕಾಫಿ ಮಂಡಳಿಯಿAದ ಸಬ್ಸಿಡಿ ನೀಡಲು ಸಾಧ್ಯವಾಗುವುದಿಲ್ಲ. ತೋಟಗಾರಿಕ ಇಲಾಖೆಯಲ್ಲಿ ಈಗಾಗಲೇ ಇರುವ ಪಾಲಿ ಹೌಸ್ ಸೌಲಭ್ಯವನ್ನು ಬಳಸಿಕೊಂಡು ಕಾಫಿ ಒಣಗಿಸಲು ಮತ್ತು ನಂತರದಲ್ಲಿ ಬೇರೆ ತೋಟಗಾರಿಕಾ ಬೆಳೆ ಹಾಗೂ ನರ್ಸರಿಗೆ ಉಪಯೋಗಿಸಲು ಅನುಕೂಲವಾಗಲಿದೆ ಎಂದರು.

ಕಾಫಿ ಒಣಗಿಸುವ ಯಂತ್ರಕ್ಕೆ ಸಹಾಯಧನ ನೀಡುವ ಬಗ್ಗೆ ಬೆಳೆಗಾರರಿಂದ ಬಂದಿರುವ ಬೇಡಿಕೆ ಹಿನ್ನಲೆ ೨-೩ ದಿನದಲ್ಲಿ ಈ ಬಗ್ಗೆ ಉತ್ತಮ ಬ್ರಾಂಡ್‌ನ ಯಂತ್ರದ ಬಗ್ಗೆ ಪರಿಶೀಲನೆ ಮಾಡಿ ಕಾಫಿ ಮಂಡಳಿಯ ಸಭೆಕರೆದು ಯಂತ್ರಕ್ಕೆ ಸಹಾಯಧನ ನೀಡಲು ಪ್ರಸ್ತಾವನೆೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ಕಾಫಿ ಮಂಡಳಿಯಲ್ಲಿ ಅನಗತ್ಯ ಖರ್ಚುಗಳನ್ನು ಖಡಿತ ಮಾಡಿ ಬೆಳೆಗಾರರಿಗೆ ಅನುಕೂಲವಾಗುವಂತೆ ಕಂಬ ಚಿಗುರಿನ ಕಸಿಯ ಗಿಡ ತಯಾರಿಸುವುದು, ಮಣ್ಣಿನ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗೋಣಿಕೊಪ್ಪ ಕೇಂದ್ರದಲ್ಲಿ ಸಸಿ ತಯಾರಿಸಲು ಉತ್ತಮ ತಳಿಯ ಕಾಫಿ ಬೀಜ ಹಾಗೂ ಎಲ್ಲಾ ದಿನಗಳಲ್ಲಿ ಕಚೇರಿಯಲ್ಲಿ ಸಂಬAಧಪಟ್ಟ ಅಧಿಕಾರಿಗಳನ್ನು ಖಾಯಂ ಆಗಿ ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಗದೀಶ್ ಭರವಸೆ ನೀಡಿದರು.

ಕಾಫಿ ಮಂಡಳಿ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪ ಮಾತನಾಡಿ, ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಎಲ್ಲಾ ಬೆಳೆಗಾರರಿಗೂ ಕಾಫಿ ನಷ್ಟದ ಪರಿಹಾರ ದೊರೆಯುವಂತೆ ವರದಿಯನ್ನು ಸಮೀಕ್ಷಾ ತಂಡ ಸರಕಾರಕ್ಕೆ ಸಲ್ಲಿಸಬೇಕು, ಕಾಫಿ ಮಂಡಳಿಯಲ್ಲಿ ಸುಮಾರು ೮೦೦ ಎಕರೆ ಕಾಫಿ ತೋಟವಿದ್ದು ನಿರ್ವಾಹಣೆ ಇಲ್ಲದೆ ಪಾಳು ಬಿದ್ದಿದೆ. ಸಂಶೋಧನೆಗೆ ಕೆಲವು ಎಕರೆ ಇಟ್ಟುಕೊಂಡು ಖಾಸಗಿಯವರಿಗೆ ಭೋಗ್ಯಕ್ಕೆ ನೀಡುವುದರಿಂದ ಕೋಟ್ಯಾಂತರ ರೂಪಾಯಿ ಆದಾಯ ಮಂಡಳಿಗೆ ಬರುತ್ತದೆ. ಕಾಫಿ ಮಂಡಳಿಯು ಸಣ್ಣ ಬೆಳೆಗಾರರ ಅಭಿವೃದ್ಧಿಗೆ ಇದ್ದು ಕಾಫಿ ಮಂಡಳಿಯ ಆಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ಅಂರ‍್ರಾಷ್ಟಿçÃಯ ಗುಣಮಟ್ಟ ಹೊಂದಿರುವ ಕೊಡಗಿ£ ಕಾಫಿ ಪುಡಿಗೆ ಕಡಿಮೆ ಬೆಲೆಯಚಿ ಕೋರಿಯನ್ನು ಶೇ.೪೯ ರಷ್ಟು ಬೆರೆಸಲಾಗುತ್ತಿದ್ದು ಇದನ್ನು ಸುದೀರ್ಘ ಸಭೆಯ ನಂತರ ಶೇ. ೩೦ಕ್ಕೆ ಇಳಿಸಲಾಗಿದೆ. ಕಾಫಿ ಬೆಳೆಗಾರರ ಹಿತದೃಷ್ಟಿಯಿಂದ ಕಾಫಿ ಪುಡಿಗೆ ಚಿಕೋರಿ ಬೆರೆಸುವುದನ್ನು ಸಂಪೂರ್ಣ ಮೂಕ್ತಗೊಳಿಸಬೇಕು. ಚಿಕೋರಿಯ ದೊಡ್ಡ ಲಾಭಿಯಿಂದ ಕಾಫಿ ಬೆಳೆಗಾರರಿಗೆ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಥಗಿತವಾಗಿದ್ದ ಕಾಫಿ ಮಂಡಳಿಯ ಸಹಾಯ ಧನ ಉತ್ತಮ ಗುಣಮಟ್ಟದ ಕಾಫಿಯ ಸಂಗ್ರಹ ಮತ್ತು ಉತ್ತಮ ಮಾರುಕಟ್ಟೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಗೋದಾಮು, ಕಾಫಿ ಒಣಗಿಸಲು ಕಣ ಅದರಲ್ಲು ಇಂಟರ್‌ಲಾಕ್‌ಗೆ ಇನ್ನು ಮುಂದೆ ಸಹಾಯಧನ ದೊರೆಯಲಿದೆ. ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆಯ ನಂತರ ಸಣ್ಣ ಬೆಳೆಗಾರರ ಹಿತರಕ್ಷಣೆಗೆ ಮತ್ತೆ ಮುಂದುವರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಕಾಫಿ ಮಂಡಳಿಯ ಸದಸ್ಯ ಟಿ.ಟಿ. ಜಾನ್, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಬೆಳೆಗಾರರ ಒಕ್ಕೂಟದ ಮಾಣೀರ ವಿಜಯ್ ನಂಜಪ್ಪ, ಅಣ್ಣೀರ ಹರೀಶ್ ಮಾದಪ್ಪ, ಕಟ್ಟೇರ ಜಾಜಿ ಉತ್ತಪ್ಪ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಜ್ಜಮಾಡ ಕಟ್ಟಿ ಮಂದಯ್ಯ, ಕೈಬುಲೀರ ಹರೀಶ್ ಅಪ್ಪಯ್ಯ, ಚೊಟ್ಟೆಯಾಂಡಮಾಡ ವಿಶ್ವನಾಥ್, ಕಳ್ಳಂಗಡ ರಜತ್ ಪೂವಣ್ಣ, ಕಾಳಿಮಾಡ ತಮ್ಮು ಮುತ್ತಣ್ಣ, ಬಾದುಮಂಡ ವಿಜಯ, ಮಚ್ಚಮಾಡ ಸುಮಂತ್, ಕಳ್ಳಂಗಡ ಸುಬ್ಬಯ್ಯ, ಇಟ್ಟೀರ ವಿಷ್ಣು, ಅಜ್ಜಮಾಡ ನವೀನ್, ಮಚ್ಚಮಾಡ ಸುಬ್ರಮಣಿ, ಕಾಫಿ ಮಂಡಳಿಯ ಅಧಿಕಾರಿಗಳು ಹಾಜರಿದ್ದರು.

ಈ ಸಂದರ್ಭ ಕಾಫಿ ಮಂಡಳಿ ಜೆಡಿಇ ವಿಸ್ತರಣೆ ವಿಭಾಗದ ತಿಮ್ಮರಾಜು, ಜೆಡಿಇ ಸಂಶೋಧನೆ ವಿಭಾಗದ ನಾಗರಾಜು, ಚೆಟ್ಟಳ್ಳಿ ಸಿ.ಆರ್.ಎಸ್.ಡಿಡಿ ಜಾರ್ಜ್ ಡೇನಿಯಲ್, ಮಡಿಕೇರಿ ಡಿಡಿ ಶಿವಕುಮಾರ್ ಸ್ವಾಮಿ, ಚೆಟ್ಟಳ್ಳಿ ಸಿ.ಆರ್.ಎಸ್. ವಿಜ್ಞಾನಿ ಶಿವಲಿಂಗ, ಶ್ರೀಮಂಗಲ ಜೆ.ಎಲ್.ಓ. ಸುನಿಲ್ ಕುಮಾರ್ ಹಾಜರಿದ್ದರು.