ಮಡಿಕೇರಿ, ಅ. ೩೧: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಮಹಿಳಾ ಸಂತಾನಹರಣ ಶಸ್ತç ಚಿಕಿತ್ಸಾ ಶಿಬಿರ ನಡೆಯಲಿದೆ.
ನವೆಂಬರ್ ೯ ರಂದು ಸೋಮವಾರಪೇಟೆಯ ಸಾರ್ವಜನಿಕ ಆಸ್ಪತ್ರೆ, ನ. ೧೦ ರಂದು ಕುಟ್ಟ, ನ. ೧೨ರಂದು ನಾಪೋಕ್ಲು, ನ. ೧೭ರಂದು ಗೋಣಿಕೊಪ್ಪ, ನ. ೨೩ ಕುಶಾಲನಗರ, ನ. ೨೪ರಂದು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಪ್ರೊಸ್ಕೋಪಿಕ್ ಶಸ್ತçಚಿಕಿತ್ಸೆ ಮತ್ತು ನ. ೨೬ರಂದು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟುಬೆಕ್ಟಮಿ ಶಸ್ತçಚಿಕಿತ್ಸೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ತಿಳಿಸಿದ್ದಾರೆ.