ಗುಣದೋಷಗಳನ್ನು ತಿಳಿದು ಕಲ್ಯಾಣವನ್ನುಂಟು ಮಾಡಬೇಕು: ಗುಣದೋಷಗಳನ್ನು ತಿಳಿದುಕೊಳ್ಳಲು ಸಮರ್ಥರಾದ ಸತ್ಪುರುಷರು ಸಮಗ್ರವಾದ ಹಿಂಸಕರು, ನಿಂದಕರು, ಕುಟಿಲರು ಇವರನ್ನೆಲ್ಲ ಪ್ರತ್ಯೇಕವಾಗಿ ಗುರುತಿಸುತ್ತ ಯಥಾ ಯೋಗ್ಯ ದಂಡನೆಗಳನ್ನು ನೀಡಿ ಎಲ್ಲರಿಗೂ ಕಲ್ಯಾಣವನ್ನು ಉಂಟು ಮಾಡುತ್ತಾರೆ.

ವಿದ್ವಾಂಸರು ದುಷ್ಟ ಜನರ ಬಲಧ್ವಂಸ ಮಾಡಬೇಕು : ವಿದ್ಯಾವಂತರು ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಹಿಂಸಕರೂ, ಕ್ರೂರಿಗಳೂ, ನಿಂದಕರೂ ಆದ ಜನರನ್ನು ತಮ್ಮ ಬಲದಿಂದ ಅವರ ಬಲವನ್ನು ಧ್ವಂಸಮಾಡಿ ಅವರಿಗೆ ವಿರುದ್ಧಾಚರಣೆ ಮಾಡುವವರನ್ನು ಹರ್ಷಗೊಳಿಸುತ್ತ ಉತ್ತಮ ಪ್ರಶಿಕ್ಷಣ ನೀಡುತ್ತಾರೆ.

ವಿದ್ವಾಂಸರು ಪರಸ್ಪರರ ಅಭಿವೃದ್ಧಿಗೆ ಕಾರಣರಾಗಬೇಕು : ಉತ್ತಮ ಉಪದೇಶಗಳನ್ನು ಮಾಡುವ ಪಂಡಿತರು ಶ್ರೋತೃವರ್ಗದವರಿಗೆ ಸತ್ಯೋಪದೇಶವನ್ನು ಮಾಡಿ ಹೇಗೆ ಸುಖಿಗಳನ್ನಾಗಿ ಮಾಡುತ್ತಾರೋ ಅದೇ ರೀತಿ ಎಲ್ಲಾ ವಿದ್ಯಾವಂತರು ಪರಸ್ಪರರ ಹಿತನುಡಿಗಳನ್ನು ಕೇಳಿಸಿ ಕೊಂಡು ಪರಸ್ಪರರ ವಿದ್ಯಾ ಅಭಿವೃದ್ಧಿಗೆ ಕಾರಣರಾಗಬೇಕು.

ವಿದ್ಯಾವಂತರ ಗುಣಧರ್ಮಗಳು: ಗೃಹಸ್ಥಾಶ್ರಮಿಯು ಧಾರ್ಮಿಕ ವಿದ್ಯಾವಂತರನ್ನು ಅತಿಥಿ ಅಭ್ಯಾಗತರನ್ನು ಯಾರು ತನ್ನ ಪ್ರತಿಭೆ ಪ್ರತಿಷ್ಠೆಯನ್ನ ರಿತು ದೂರದಿಂದ ತನ್ನ ಹತ್ತಿರಕ್ಕೆ ಬಂದಿರುವರೋ, ಅಂತಹವರೆಲ್ಲ ಭೋಜನ, ವಸ್ತç, ಧನಕನಕಾದಿ ಪದಾರ್ಥಗಳನ್ನು ದಾನ ಮಾಡಿ, ಗೌರವಿಸಿ, ಅವರ ಅಪೇಕ್ಷಿತ ಕಾರ್ಯವನ್ನು ಸಾಧಿಸಿ ಕೊಡಬೇಕು. ಅದರಿಂದ ತನ್ನ ಶರೀರಾತ್ಮಬಲಗಳನ್ನು ವೃದ್ಧಿಪಡಿಸಿಕೊಳ್ಳಬೇಕು.

ಸಂಸ್ಕೃತ ವಾಣಿ : ನೀರು ತಗ್ಗಿನ ಪ್ರದೇಶಗಳತ್ತ ಹರಿದು ಹಳ್ಳಗಳಲ್ಲಿ ತುಂಬಿಕೊಳ್ಳುತ್ತದೆ. ಹಾಗೆಯೇ ಉತ್ತಮ ಶಿಕ್ಷಣಗಳನ್ನು ಪಡೆದ ಸಂಸ್ಕೃತ ವಾಣಿಯು ಅಭಿಮಾನವನ್ನು ತ್ಯಜಿಸಿ ನಮ್ರವಾಗಿ ಇರುತ್ತದೆ. ಸರ್ವತ್ರ ವ್ಯಾಪ್ತನಾದ ಈಶ್ವರನು ಯಥಾಯೋಗ್ಯ ಜಗತ್ತನ್ನು ಸೃಷ್ಟಿಸಿರುವನು. ಹಾಗೆಯೇ ವ್ಯವಹಾರ ಯೋಗ್ಯವಾದ ಸಂಸ್ಕೃತ ವಾಣಿಯನ್ನು ಜೊತೆಗೆ ಸೃಷ್ಟಿಸಿರುವನು.

ಎಲ್ಲರಿಂದಲೂ ಯಾರು ಸತ್ಕಾರಾರ್ಹನಾಗುತ್ತಾನೆ : ಯಾವನಿಗೆ ಸೂರ್ಯಪ್ರಕಾಶಕ್ಕೆ ಸಮನಾದ ವಿದ್ಯೆ, ಕೀರ್ತಿ, ಉದ್ಯೋಗ, ಸಮಯ ಪ್ರಜ್ಞೆ ಮತ್ತು ಬಲ ಇವುಗಳು ಇರುತ್ತವೆಯೋ, ಅಂತಹ ಸತ್ಯಭಾಷಿಕನು ಎಲ್ಲರಿಂದಲೂ ಸತ್ಕಾರಾರ್ಹನಾಗುತ್ತಾನೆ.

ವಿದ್ವಾಂಸರು ಸೂರ್ಯನಂತೆ ಇತರರನ್ನು ಬೆಳಗಿಸುತ್ತಾರೆ : ಯಾವನು ದಿವ್ಯವಿದ್ಯೆಯ ಮತ್ತು ಪ್ರಜ್ಞಾವಂತರ ಸೇವೆ ಮಾಡುತ್ತಾರೋ, ಅವರು ಮೋಡದಂತೆ ಬಣ್ಣ-ಬಣ್ಣದ ದಿನಗಳಿಗೆ ಸಮನಾದ ಅವಿದ್ಯಾವಂತ ಪುರುಷರನ್ನು ಬೆಳಗಿಸಲು ವಿದ್ಯಾದಾನ ಮಾಡಿ ಸೂರ್ಯನು ಹೇಗೋ ಹಾಗೆ ಪವಿತ್ರಗೊಳಿಸುತ್ತಾರೆ.

ವಿದ್ಯಾವಂತರು ಪಾಪಿಗಳಿಗೂ ಮಂಗಳವನ್ನು ಉಂಟುಮಾಡುತ್ತಾರೆ : ವಿದ್ಯಾವಂತರು ತಮ್ಮ ನಿಕಟವರ್ತಿಗಳಾದ ಆಜ್ಞ, ಅಭಿಮಾನಿ, ಪಾಪಿ ಜನರನ್ನೂ ಸಹ ಉಪದೇಶಮಾಡಿ ಧಾರ್ಮಿಕನನ್ನಾಗಿ ಮಾಡುತ್ತಾರೋ ಅವರು ಮಂಗಳವನ್ನು ಪಡೆಯುತ್ತಾರೆ.

ಉತ್ತಮ ಅಧ್ಯಾಪಕರ ಲಕ್ಷಣ : ಯಾವ ಸಜ್ಜನರು ಜನಪೂರ್ಣವಾದ ಸಾಧನ ಉಪಸಾಧನಗಳಿಂದ ಯುಕ್ತರಾಗಿ ಉತ್ತಮ ಮಾರ್ಗದಿಂದ ಅವಿದ್ಯಾವಂತರನ್ನು ವಿದ್ಯಾಧರ್ಮಮಾರ್ಗಗಳತ್ತ ಪ್ರೇರೇಪಿಸುತ್ತ ಜಿತೇಂದ್ರಿಯರಲ್ಲದವರನ್ನು ಜಿತೇಂದ್ರಿಯರನ್ನಾಗಿಸುತ್ತಾ ಮಿತ್ರರಿಗೆ ಸಮಾನ ರಾಗಿ ಶಿಷ್ಯರಿಗೆ ಶಿಕ್ಷಣ ನೀಡುತ್ತಾರೋ ಅವರೇ ಈ ಜಗತ್ತಿನಲ್ಲಿ ಉತ್ತಮ ಅಧ್ಯಾಪಕರೆನಿಸಿಕೊಳ್ಳುತ್ತಾರೆ.

ವಿದ್ಯಾವಂತರು ತಮ್ಮ ಶಿಷ್ಯರನ್ನು ಶುದ್ದಿಗೊಳಿಸುತ್ತಾರೆ : ಎಲ್ಲರಿಗೂ ಆಧಾರವಾದ ಭೂಮಿಯು ಸೂರ್ಯನ ಸುತ್ತಲೂ ಹೇಗೆ ಸುತ್ತುತ್ತದೆಯೋ, ಜೀವಿಗಳು ತಮ್ಮ-ತಮ್ಮ ಸುಖ-ಭೋಗದ ಸ್ಥಾನಗಳಿಗೆ ಪ್ರವೇಶಿಸುತ್ತವೆ. ಹಾಗೆಯೇ ವಿಷಕಾರಕ ಜಂತುಗಳೂ ಎಲ್ಲೆಲ್ಲಿ ಅವಕಾಶವಿರುತ್ತದೆಯೋ ಅಲ್ಲೆಲ್ಲ ಪ್ರವೇಶಿಸುತ್ತವೆ.

ಪ್ರತ್ಯಕ್ಷ ಪರೋಕ್ಷರೂಪೀ ವಿಷಜೀವಿಗಳು : ಕಳ್ಳರಲ್ಲಿ ಡಾಕುಗಳು ಕಾಣುವವರು, ಕಾಣದವರೂ ಆಗಿರುವರೋ, ಹಾಗೇ ಮನುಷ್ಯರು ನಾನಾ ವಿಧದ ವಿಷಧಾರಿ ಅಥವಾ ವಿಷವನ್ನು ಪ್ರತ್ಯಕ್ಷ-ಅಪ್ರತ್ಯಕ್ಷ ರೂಪದಲ್ಲಿರು ವವರನ್ನು ತಿಳಿದುಕೊಳ್ಳಬೇಕು.

ವಿಷಧರ ಜೀವಿಗಳ ಚಿಕಿತ್ಸೆ ಹೇಗೆ : ಯಾವ ವಿಷಧರ ಜೀವಿ ಗಳಿವೆಯೋ ಅವುಗಳನ್ನು ಶಾಂತ್ಯಾದಿ ಕರ್ಮ ಗಳಿಂದಲೂ ಔಷಧಿಗಳ ಸೇವನೆಯಿಂದಲೂ ನಿವಾರಿಸಿ ಕೊಳ್ಳಬೇಕು.

ಪುರುಷಾರ್ಥ ಸಿದ್ಧಿಯು ಹೇಗೆ : ಮನುಷ್ಯರು ಪ್ರಯತ್ನಪೂರ್ವಕ ಶರೀರಾತ್ಮಗಳಿಗೆ ದುಃಖದಾಯಕ ರೋಗವನ್ನು ದೂರೀಕರಿಸಿಕೊಳ್ಳಬೇಕು. ಇದರಲ್ಲೇ ನಿರಂತರ ಪುರುಷಾರ್ಥವಿರುತ್ತದೆ.

ವೈದ್ಯರು ಸೂರ್ಯನಂತೆ ವಿಷಹರಣ ಮಾಡುತ್ತಾರೆ : ಸೂರ್ಯನು ಹೇಗೆ ಅಂಧಕಾರ ವನ್ನು ನಿವಾರಿಸುವನೋ, ಹಾಗೇ ವೈದ್ಯರು ವಿಷಹರಣ ಔಷಧಿಗಳಿಂದ ವಿಷವನ್ನು ನಿವಾರಣೆ ಮಾಡಬೇಕು. ಹೇಗೆ ಸೂರ್ಯನು ತನ್ನ ಪ್ರಕಾಶದಿಂದ ಎಲ್ಲಾ ಪದಾರ್ಥಗಳನ್ನು ಬೆಳಗಿಸುವನೋ, ಹಾಗೆ ವಿಷಹರಣ ವಿದ್ಯೆ ತಿಳಿದ ವೈದ್ಯರು ವಿಷಮಯ ಅಂಶವನ್ನು ನಿವಾರಿಸಿ ಪ್ರಾಣಿಗಳಿಗೆ ಸುಖಕೊಡುತ್ತಾರೆ.

ಸೂರ್ಯ ಸಂಯೋಗದಿAದ ವಿಷ ನಿವಾರಣೆ ಮಾಡುತ್ತಾರೆ : ರೋಗ ನಿವಾರಕ ಸೂರ್ಯನ ಬೆಳಕಿನ ಸಂಯೋಗದಿAದ ವೈದ್ಯರು ಎಂತೆAತಹ ರೋಗವನ್ನೂ ನಿವಾರಿಸುವ ಔಷಧಿಗಳನ್ನು ತಯಾರಿಸಿ, ಮಧುರ ವಿದ್ಯೆಯನ್ನು ಸಿದ್ಧಗೊಳಿಸುತ್ತಾರೆ. ಆ ವಿದ್ಯೆಯು ಸೂರ್ಯನನ್ನು ನಾಶಗೊಳಿಸುವುದಿಲ್ಲ. ಸೂರ್ಯನ ಸುಯೋಗದಿಂದ ವಿಷವನ್ನು ನಾಶಗೊಳಿಸಿ ದೀರ್ಘಾಯು ವಂತರಾಗುತ್ತಾರೆ.

ಪಕ್ಷಿಗಳ ಮೂಲಕ ವಿಷ ಸಂಬAಧೀ ರೋಗಗಳ ನಾಶ : ಜತಾಕಗಳೆಂಬ ೨೧ ಬಗೆಯ ಚಿಕ್ಕ-ಚಿಕ್ಕ ಪಕ್ಷಿಗಳಿವೆ. ಅವು ವಿಷವನ್ನು ಭಕ್ಷಿಸುತ್ತವೆ. ಅವುಗಳ ಮೂಲಕ ಮತ್ತು ಔಷಧಿಗಳ ಮೂಲಕ ವಿಷಸಂಬAಧಿ ರೋಗಗಳನ್ನು ಯಾರು ನಾಶ ಮಾಡುತ್ತಾರೋ ಅವರು ಚಿರಂಜೀವಿ ಗಳಾಗಿರುತ್ತಾರೆ.

ವಿಷಕಾರಕ ರೋಗಗಳು : ಮಾನವರೇ, ೯೯ ಬಗೆಯ ವಿಷಕಾರಕ ರೋಗಗಳಿವೆ. ಅವುಗಳ ಗುಣಕರ್ಮಸ್ವಭಾವಗಳನ್ನರಿತು ವಿಷನಿವಾರಕ ಓಷಧಿಗಳನ್ನು ತಿಳಿದು ಅವುಗಳ ಸೇವನೆ ಮಾಡಿ ಆ ರೋಗಗಳನ್ನು ನಿವಾರಿಸಿಕೊಳ್ಳಬೇಕು.

ಇಪ್ಪತ್ತೊಂದು ಬಗೆಯ ಮಯೂರಿಗಳ ವರ್ಣನೆ : ಮನುಷ್ಯರು ಇಪ್ಪತ್ತೊಂದು ಬಗೆಯ ಮಯೂರಿಗಳನ್ನು ವೃದ್ಧಿಪಡಿಸಿಕೊಳ್ಳಬೇಕು. ಯಾವ ನದಿಗಳು ಎಲ್ಲಾ ಕಾಲಗಳಲ್ಲೂ ಜಲಪೂರ್ಣವಾಗಿರುತ್ತವೆಯೋ ಅವುಗಳನ್ನು ಸೇವಿಸಬೇಕು. ವಿಷಹರಣ ಮಾಡುವ ಮುಂಗೂಸಿ, ಬೆಕ್ಕು ಮುಂತಾದ ಪ್ರಾಣಿಗಳನ್ನು ಸಾಕಿಕೊಳ್ಳಬೇಕು.

ಯಾರು ವಿಷಕಾರಕ ರೋಗವನ್ನು ನಿವಾರಿಸಿಕೊಳ್ಳುತ್ತಾರೆ : ಯಾರು ವಿಷಕಾರಕ ಮಂತ್ರ-ಓಷಧಿ-ಪ್ರಾಣಿಗಳನ್ನು ತಿಳಿದಿರುವರೋ ಅವರು ಅವುಗಳ ಗುಣ-ಕರ್ಮ-ಸ್ವಭಾವಗಳಿಗನುಗುಣವಾಗಿ ವಿಭಾಗಿಸಿ ಪ್ರಯೋಜನ ಪಡೆದು ವಿಷಕಾರಕ ರೋಗವನ್ನು ನಿವಾರಿಸಿಕೊಳ್ಳುತ್ತಾರೆ. ಅಂತಹವರು ಶತ್ರುಸಮರ ವಿಜಯಿಗಳಾಗುತ್ತಾರೆ.

ಅಲ್ಪ ಜೀವಿಗಳಿಂದ ವಿಷನಿವಾರಣೆ : ಮನುಷ್ಯರು ಚಿಕ್ಕ-ಪುಟ್ಟ ರೋಗವನ್ನು ಹರಣ ಮಾಡುವ ಪರ್ವತ ಪ್ರಾಂತದಲ್ಲಿ ನೆಲೆಸುವ ಅಲ್ಪಜೀವಿ ಗಳನ್ನು ಸಂರಕ್ಷಿಸಬೇಕು. ಅದರಿಂದ ವಿಷನಿವಾರಣ ಕಾರ್ಯದಲ್ಲಿ ಸಮರ್ಥರಾಗುತ್ತಾರೆ.

(ಮುಗಿಯಿತು)

-ಜಿ. ರಾಜೇಂದ್ರ, ಮಡಿಕೇರಿ.