ಚಿತ್ರ, ವರದಿ : ಸುನಿಲ್ ಕುಯ್ಯಮುಡಿ ಭಾಗಮಂಡಲ, ಅ. ೧೩: ಈ ವರ್ಷ ತಲಕಾವೇರಿ ತೀರ್ಥೋದ್ಭವ ವ್ಯವಸ್ಥೆಗೆ ದೇವಾಲಯ ನಿಧಿಯಲ್ಲಿ ಹಣವಿಲ್ಲದೆ ಆರ್ಥಿಕ ಸಮಸ್ಯೆ ಎದುರಾದುದನ್ನು ಇದೀಗ ಬಗೆಹರಿಸಲಾಗಿದೆ. ರಾಜ್ಯ ಸರಕಾರವು ತಲಕಾವೇರಿ ಜಾತ್ರೆಗಾಗಿ ರೂ. ೮೮ ಲಕ್ಷ ಹಣ ಬಿಡುಗಡೆ ಮಾಡಿರುವುದಾಗಿ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಇಂದು ಇಲ್ಲಿ ಮಾಹಿತಿ ನೀಡಿದರು. ಈ ಹಣದಲ್ಲಿರೂ. ೩೮ ಲಕ್ಷವನ್ನು ದೇವಸ್ಥಾನ ಆಡಳಿತಕ್ಕೆ ನೀಡಲಾಗುತ್ತದೆ. ಈ ಬಗ್ಗೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರು ಕೋರಿದ್ದ ಹಿನ್ನೆಲೆಯಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಇತರ ಅನೇಕ ವ್ಯವಸ್ಥೆಗಳಿಗಾಗಿ ಭಾಗಮಂಡಲ ಪಂಚಾಯಿತಿಗೆ ರೂ. ೫೦ ಲಕ್ಷವನ್ನು ಒದಗಿಸಲಾಗಿದೆ ಎಂದು ಬೋಪಯ್ಯ ತಿಳಿಸಿದರು.

ತೀರ್ಥೋದ್ಭವದ ಸಂದರ್ಭ ಧಾರ್ಮಿಕ ವಿಧಿವಿಧಾನಗಳು, ಶುಚಿತ್ವ ಕಾರ್ಯ, ರಾತ್ರಿ ವಿದ್ಯುತ್‌ದೀಪಗಳ ವ್ಯವಸ್ಥೆ, ದೇವಸ್ಥಾನದ ಸುತ್ತ ಕಾಡುಕಡಿದು ಸುಗಮಗೊಳಿಸುವ ವ್ಯವಸ್ಥೆಗಾಗಿ ಹಾಗೂ ಪೂಜಾದಿ ಕಾರ್ಯಗಳು ಮತ್ತಿತರ ಕೆಲಸಗಳಿಗಾಗಿ ಅನುದಾನದ ಹಣವನ್ನು ವಿನಿಯೋಗಿಸುವದಾಗಿ ಭಾಗಮಂಡಲ - ತಲಕಾವೇರಿ ದೇವಾಲಯಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಶೌಚಾಲಯಗಳ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಮತ್ತಿತರ ಕಾರ್ಯಗಳಿಗಾಗಿ ಗ್ರಾ.ಪಂ.ಯೂ ಸರಕಾರದಿಂದ ದೊರೆತ ಪ್ರತ್ಯೇಕ ಅನುದಾನವನ್ನು ಬಳಸಲಿರುವುದಾಗಿ ತಿಳಿದು ಬಂದಿದೆ.

ಈ ನಡುವೆ ತಲಕಾವೇರಿಯಲ್ಲಿ ಬಿದಿರಿನ ಬ್ಯಾರಿಕೇಡ್ ಬದಲಾಗಿ ಈ ಬಾರಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಪೊಲೀಸ್

(ಮೊದಲ ಪುಟದಿಂದ) ಇಲಾಖೆ ಅಳವಡಿಸುತ್ತಿದೆ. ವಿಐಪಿಗಳು ಹಾಗೂ ಪತ್ರಕರ್ತರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಕುಂಡಿಕೆ ಬಳಿ ತೆರಳುವ ಅರ್ಚಕರು, ಪತ್ರಕರ್ತರು, ಅಧಿಕಾರ ವರ್ಗ ಅಥವಾ ಇನ್ನಿತರ ಅಗತ್ಯವಿರುವವರು ಕಡ್ಡಾಯವಾಗಿ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡುವಂತೆ ಎಡಿಸಿ ರಾಜು ಮೊಗವೀರ ಅವರು ನಿರ್ದೇಶಿಸಿದ್ದಾರೆ.

ಕೊಡಗು ಏಕೀಕರಣ ರಂಗದಿAದ ತಾ. ೧೬ರ ರಾತ್ರಿಯಿಂದ ಪ್ರಾರಂಭಗೊAಡು ತಾ. ೧೭ ಮತ್ತು ೧೮ ರಂದು ಇಡೀ ದಿನ ಅನ್ನಸಂತರ್ಪಣೆ ಏರ್ಪಡಿಸಿರುವುದಾಗಿ ರಂಗದ ವಕ್ತಾರರಾದ ತಮ್ಮು ಪೂವಯ್ಯ ತಿಳಿಸಿದ್ದಾರೆ. ಆದರೆ, ತೀರ್ಥೋದ್ಭವದ ಸನ್ನಿವೇಶ ಅನ್ನಸಂತರ್ಪಣೆ ಇರುವುದಿಲ್ಲ.

ತಾ. ೧೪ (ಇಂದು) ಭಾಗಮಂಡಲದಲ್ಲಿ ೧೨.೦೫ ಗಂಟೆಗೆ ನಂದಾದೀಪ ಬೆಳಗುವುದು ಹಾಗೂ ಅಕ್ಷಯಪಾತ್ರೆ ಇರಿಸುವ ಧಾರ್ಮಿಕ ಕಾರ್ಯಕ್ರಮ ಧನುರ್ ಲಗ್ನದಲ್ಲಿ ನಡೆಯಲಿದೆ. ಶುಕ್ರವಾರದಂದು ಭಾಗಮಂಡಲದಿAದ ತಲಕಾವೇರಿಗೆ ಆಭರಣ ಒಯ್ಯುವ ಕಾರ್ಯಕ್ರಮವಿದೆ.

ತಲಕಾವೇರಿ ಕೈಲಾಸಾಶ್ರಮದ ಬಳಿ ವಾಹನ ನಿಲುಗಡೆಗೆ ಅನುಕೂಲ ಕಲ್ಪಿಸಲಾಗಿದೆ. ವಾಹನದ ಒತ್ತಡ ಹೆಚ್ಚಾದರೆ, ಪೊಲೀಸರು ನಿಯಂತ್ರಿಸಲು ವಯರ್‌ಲೆಸ್ ಸಂದೇಶದ ಮೂಲಕ ಕ್ರಮಕೈಗೊಳ್ಳಲಾಗಿದೆ. ದೇವಾಲಯದ ಗೋಪುರಗಳನ್ನು ಶುದ್ಧೀಕರಣಗೊಳಿಸಲಾಗಿದ್ದು, ಪೈಂಟ್ ಕಾರ್ಯವನ್ನು ಕೂಡ ಮಾಡಲಾಗಿದೆ ಎಂದು ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ ಮಾಹಿತಿಯಿತ್ತರು. ಪ್ರಸಕ್ತ ವರ್ಷ ತಲಕಾವೇರಿಯ ಕೊಳದಲ್ಲಿ ಸ್ನಾನ ಮಾಡುವಂತಿಲ್ಲ. ತೀರ್ಥೋದ್ಭವದ ಬಳಿಕ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳು ಸ್ನಾನ ಮಾಡಬಹುದು.

ಅರ್ಚಕರುಗಳಾದ ಗುರುರಾಜ್ ಮತ್ತು ರವಿರಾಜ್ ನೇತೃತ್ವದಲ್ಲಿ ೧೨ಕ್ಕೂ ಮಿಕ್ಕಿ ಅರ್ಚಕರು ಪೂಜಾದಿ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಭಾಗಮಂಡಲ ಪಂಚಾಯಿತಿಯಿAದ ಕರಿಕೆ ಜಂಕ್ಷನ್‌ನಿAದ ಪ್ರಾರಂಭಗೊAಡು ತಲಕಾವೇರಿವರೆಗೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುವುದು. ಭಾಗಮಂಡಲ ಮತ್ತು ತಲಕಾವೇರಿಗಳಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಆದರೆ ಈ ಹಿಂದೆ ಸಭೆಯಲ್ಲಿ ತೀರ್ಮಾನಿಸಿದಂತೆ ಭಾಗಮಂಡಲ ಆಸ್ಪತ್ರೆ ಬಳಿಯಿಂದ ಪ್ರತ್ಯೇಕವಾಗಿ ಏಕಮುಖ ಮಾರ್ಗ ವ್ಯವಸ್ಥೆ ಇನ್ನೂ ಕೂಡ ಪ್ರಾರಂಭಗೊAಡಿಲ್ಲ. ತಲಕಾವೇರಿಯಿಂದ ಹಿಂತಿರುಗುವ ವಾಹನಗಳಿಗಾಗಿ ಈ ರಸ್ತೆಯಲ್ಲಿ ಕಾಡು ಕಡಿದು, ಸುಗಮಗೊಳಿಸುವ ಕಾರ್ಯ ಇನ್ನೂ ಪ್ರಾರಂಭಗೊAಡಿಲ್ಲ. ಈ ನಡುವೆ ಕಳೆದ ಮಳೆಗಾಲದಲ್ಲಿ ವ್ಯೂಪಾಯಿಂಟ್ ಬಳಿ ಕುಸಿದು ರಸ್ತೆ ಬದಿ ಬಿದ್ದಿದ್ದ ಬಂಡೆಯೊAದನ್ನು ಸಿಡಿಸಿ ಲೋಕೋಪಯೋಗಿ ಇಲಾಖೆಯು ರಸ್ತೆಯನ್ನು ಸುಗಮಗೊಳಿಸಿದೆ.

ಪ್ರಸಕ್ತ ವರ್ಷ ಭಾಗಮಂಡಲ ಪಂಚಾಯಿತಿಯಿAದ ಅಂಗಡಿ ಮಳಿಗೆಗಳಿಗೆ ಟೆಂಡರ್ ಕರೆದಿಲ್ಲ. ಈಗಾಗಲೇ ಯಾವುದೇ ತಾತ್ಕಾಲಿಕ ಅಂಗಡಿ ಮಳಿಗೆಗಳು ಇರುವುದಿಲ್ಲ. ಆದರೆ, ಜಾತ್ರೆ ಸಂದರ್ಭ ಯಾರಾದರೂ ವಸ್ತುಗಳ ಮಾರಾಟಕ್ಕೆ ಅವಕಾಶ ಕೋರಿದರೆ, ಪಂಚಾಯಿತಿಯಿAದ ಕಲ್ಪಿಸಲಾಗುತ್ತದೆ ಎಂದು ಪಂಚಾಯಿತಿ ಪ್ರಮುಖರು ತಿಳಿಸಿದ್ದಾರೆ.

ಈಗಾಗಲೇ ಮೇಲ್ಸೇತುವೆ ನಿರ್ಮಾಣದಿಂದ ಭಾಗಮಂಡಲ ಪಟ್ಟಣದಲ್ಲಿ ರಸ್ತೆಗಳು ಭಾರೀ ಗುಂಡಿಗಳಿAದಾಗಿ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಮೇಲ್ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಾವೇರಿ ನೀರಾವರಿ ನಿಗಮದವರು ಈ ರಸ್ತೆಗಳ ಗುಂಡಿಗಳನ್ನು ಇನ್ನೆರಡು ದಿನಗಳಲ್ಲಿ ಮುಚ್ಚುವುದಾಗಿ ಭರವಸೆ ನೀಡಿದ್ದಾರೆ.

ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ರಾಜ್ಯಾಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಹಾಗೂ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಅವರುಗಳು ತಲಕಾವೇರಿಗೆ ಭೇಟಿ ನೀಡಿ ಪೂರ್ವಭಾವಿ ತಯಾರಿ ಬಗ್ಗೆ ಸಂಬAಧಿಸಿದವರಿAದ ಮಾಹಿತಿ ಪಡೆದರು.