ಆರ್ಥಿಕ ನೆರವಿಗೆ ತಾ. ೩೦ರೊಳಗೆ ಹೆಸರು ನೋಂದಾಯಿಸಲು ಮನವಿ

ಶನಿವಾರಸಂತೆ, ಅ. ೧೩: ಪಟ್ಟಣದ ವಿಶೇಷಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ಡಿ.೩ರಂದು ನಡೆಯುವ ವಿಶೇಷಚೇತನರÀ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.

ಕೊರೊನಾ ಸಂಕಷ್ಟದಲ್ಲಿ ತೀವ್ರವಾಗಿ ನೊಂದಿರುವ ಸಮುದಾಯಗಳಲ್ಲಿ ವಿಶೇಷಚೇತನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ವಿಶೇಷಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಿ.ಕೆ. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಂಸ್ಥೆ ಸೋಮವಾರಪೇಟೆ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ವಿಶೇಷಚೇತನರಿಗೆ ಸಹಾಯ ಹಸ್ತ ಚಾಚಲು ನಿರ್ಧರಿಸಿದ್ದು, ತೀವ್ರ ಸಂಕಷ್ಟದಲ್ಲಿರುವವರಿಗೆ ಚೆಕ್ ಮೂಲಕ ಆರ್ಥಿಕ ಸಹಕಾರ ನೀಡುತ್ತದೆ. ಗಾಲಿ ಕುರ್ಚಿ ಮತ್ತು ಸಾಧನಾ ಸಲಕರಣೆಗಳು ಅಗತ್ಯ ಇರುವವರಿಗೆ ಅವುಗಳನ್ನು ಪೂರೈಸಲು ನಿರ್ಧರಿಸಿದೆ.

ಈ ಸೌಲಭ್ಯ ಪಡೆಯಲು ಇಚ್ಚಿಸುವ ವಿಶೇಷಚೇತನರು ತಾ. ೩೦ರೊಳಗೆ ತಮ್ಮ ಹೆಸರನ್ನು ಶನಿವಾರಸಂತೆಯ ಹೊಸೂರು ರಸ್ತೆಯಲ್ಲಿರುವ ವಿಶೇಷಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ನೋಂದಾಯಿಸಬೇಕು. ವಿಶೇಷಚೇತನರÀ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಒಂದು ಫೋಟೋ ನೀಡಬೇಕು ಎಂದು ಸಂಸ್ಥೆ ಅಧ್ಯಕ್ಷ ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಿಸುವ ಮೊ.ನಂ. ೯೪೮೧೮೮೫೨೬೫.