ಮೊನ್ನೆ ತಾನೆ ಕೊಡವ ರೇಸ್ ಮತ್ತು ಜಮ್ಮಾ ಹಿಡುವಳಿದಾರರ ಬಂದೂಕು ವಿನಾಯಿತಿ ಕಾನೂನು ಬದ್ದ ಎಂದು ತೀರ್ಪು ಬಂದ ನಂತರ ಹಲವು ಗೊಂದಲಗಳು ಜನರಲ್ಲಿ ಕಾಣುತ್ತಿದೆ. ವಿಭಿನ್ನ ಹೇಳಿಕೆಗಳು ಪ್ರಚಾರವಾಗುತ್ತಿದೆ.

ಕೊಡವ ರೇಸ್ ಅಥವಾ ಕೂರ್ಗ್ ರೇಸ್ ಅಂದರೆ ಕೊಡವ ಜನಾಂಗ ಎಂದು ಅರ್ಥ. ಅಂದರೆ ಕೊಡವ ಜನಾಂಗದಲ್ಲಿ ಜನಿಸಿದವರು . ಹಿಂದೆ ದಾಖಲಾತಿಗಳಲ್ಲಿ ಕೂರ್ಗಿ ಎಂದು ನಮೂದಿಸಲಾಗುತ್ತಿದ್ದು ಈಗ ಕೊಡವ ಅಥವಾ ಕೊಡಗರು ಎಂಬುದಾಗಿ ನಮೂದಿಸಲಾಗುತ್ತಿದೆ. ಇದರ ಅರ್ಥ ಕೊಡಗಿನಲ್ಲಿ ಜನಿಸಿದವರು ಎಂದಲ್ಲಾ. ಜಮಾಬಂದಿಯಲ್ಲಿಯೂ ಕೂಡ ಕೊ ಎಂದು ಪೂರ್ವಾರ್ಧದಲ್ಲಿ ಪ್ರಾರಂಭಗೊAಡು ಉತ್ತರಾರ್ಧದಲ್ಲಿ ಮನೆತನದ ಹೆಸರು ಇರುವುದನ್ನು ಗಮನಿಸಬಹುದು. ಉದಾಹರಣೆಗೆ ಕೊ ಕೊಡಂದೇರ ಎಂದಿದ್ದರೆ ಕೊಡವರ ಕೊಡಂದೇರ ಎಂದು ಅರ್ಥ. ಈಗಲೂ ಕೂಡ ಜಿಲ್ಲಾಧಿಕಾರಿಗಳ ರೆಕಾರ್ಡ್ ರೂಂ ನಲ್ಲಿ ಹಳೆಯ ಜಮಾ ಬಂದಿ ಯನ್ನು ಪರಿಶೀಲಿಸಿದರೆ ಇದು ತಿಳಿಯುತ್ತದೆ.

ಜಮ್ಮಾ ಹಿಡುವಳಿ ಎಂದರೆ ಜಮ್ಮಾ ಭೂಮಿಯನ್ನು ಹೊಂದಿದ ಕುಟುಂಬದವರು. ಇದರಲ್ಲಿ ಕೊಡವರು ಸೇರಿದಂತೆ ಗೌಡರು, ಬ್ರಾಹ್ಮಣರು, ಹೆಗ್ಗಡೆಯವರು, ಪರಿಶಿಷ್ಟ ಜಾತಿ ಪಂಗಡ , ಹಿಂದುಳಿದವರು, ಮುಸಲ್ಮಾನರು ಎಲ್ಲರೂ ಸೇರುತ್ತಾರೆ. ಜಮ್ಮಾ ಭೂಮಿಯನ್ನು ಹೊಂದಿರಬೇಕು. ಕೊಡವ ರೇಸ್ ಅನ್ನುವುದು ಕೊಡಗಿನಲ್ಲಿರುವ ಎಲ್ಲರಿಗೂ ಅನ್ವಯಿಸುವುದಿಲ್ಲ.

ಪ್ರಚಾರದ ದೃಷ್ಟಿಯಿಂದ ಅಥವಾ ಗೊಂದಲ ಮೂಡಿಸುವ ನಿಟ್ಟಿನಲ್ಲಿ ಕೆಲವರು ಈ ರೀತಿಯಲ್ಲಿ ವ್ಯಾಖ್ಯಾನವನ್ನು ನೀಡಿ ಕೊಡಗಿನ ಸಾಮರಸ್ಯ ಕದಡುತ್ತಾರೆ. ಕರ್ನಾಟಕದಲ್ಲಿ ಹುಟ್ಟಿದವರ ದಾಖಲೆಯಲ್ಲಿ ಜಾತಿ ಕಲಂ ನಲ್ಲಿ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ, ಕುರುಬ, ಬಣಜಿಗ, ಬಂಟ, ಬಿಲ್ಲವ ಎಂದು ನಮೂದಾಗಿರುತ್ತದೆಯೇ ಹೊರತು ಕನ್ನಡಿಗ ಎಂದು ನಮೂದಿಸಲು ಸಾಧ್ಯವಿಲ್ಲ. ಹಾಗೆಯೇ ಕೊಡಗಿನಲ್ಲಿ ಜನಿಸಿದ ಎಲ್ಲರನ್ನೂ ಕೊಡವರು ಅಥವಾ ಕೂರ್ಗಿ ಎಂದು ನಮೂದಿಸಲು ಸಾಧ್ಯವಿಲ್ಲ.

ಕೋವಿಯನ್ನು ಸಾಂಪ್ರ‍್ರದಾಯಿಕವಾಗಿ ಬಳಕೆ ಮಾಡುವವರಿಗೆ ಕೋವಿಯ ಹಕ್ಕು ಅಭಾದಿತವಾಗಿ ಮುಂದುವರಿದಿದೆ. ಇಲ್ಲಿಯವರೆಗೆ ಕೊಡಗಿನಲ್ಲಿ ಕೋವಿಯ ದುರ್ಬಳಕೆ ನಡೆದಿಲ್ಲ.ಅಲ್ಲದೆ ಈ ಪ್ರಸಂಗದಲ್ಲಿ ಯಾರೊಬ್ಬರ ಹಕ್ಕು ಕೂಡ ಕಸಿಯಲಾಗಲಿಲ್ಲ . ಈಗ ಬಂದ ತೀರ್ಪಿನಿಂದ ಕೊಡವರಿಗೆ ಏನೋ ವಿಶೇಷತೆ ಸಿಕ್ಕಿದೆ ಎಂಬ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ.

ಕೋವಿ ಹಕ್ಕನ್ನು ರದ್ದುಪಡಿಸಲು ಹೊರಟಾಗ ಕೊಡವೇತರ ಜನಾಂಗದ ಜಮ್ಮಾ ಹಿಡುವಳಿದಾರರಿಗೆ ಕೂಡ ಹಕ್ಕುಚ್ಯುತಿಯಾಗುತ್ತದೆ ಎಂದು ಅವರ ಸಮಾಜದ, ಸಂಘದ ಪ್ರಮುಖರಿಗೆ ಅರಿವಿರಲಿಲ್ಲವೇ, ಅವರು ಕೂಡ ಪ್ರತಿವಾದಿಗಳಾಗಿ ಕೇಸು ದಾಖಲಿಸದಿರಲು ಕಾರಣವೇನು. ಈಗ ಅಸಂಬದ್ದ ಹೇಳಿಕೆ ನೀಡಲು ಕಾರಣವೇನು? ತಮ್ಮ ತಪ್ಪು ಅವರ ಸಮುದಾಯದವರಿಗೆ ತಿಳಿಯದಿರಲಿ ಎಂದೇ?

ಅAದೇ ತಮ್ಮ ಜನಾಂಗದ ವ್ಯಕ್ತಿ ನಮ್ಮವರ ಬುಡಕ್ಕೇ ಕೊಡಲಿ ಇಡುತ್ತಾನೆ ಎಂದು ಕಂಡು ಬಂದಾಗ ಛೀಮಾರಿ ಹಾಕಬೇಕಿತ್ತು . ಅದು ಬಿಟ್ಟು ಜಮ್ಮಾ ಹಿಡುವಳಿದಾರರನ್ನು ಗೊಂದಲಕ್ಕೆ ಈಡು ಮಾಡುವುದಲ್ಲಾ. ಈಗಲಾದರೂ ಕೊಡವೇತರ ಸಮಾಜದ, ಸಂಘದ ಮುಖಂಡರು ತಮ್ಮ ಜನಾಂಗದ ಜನರಲ್ಲಿ ಕ್ಷಮೆಯಾಚಿಸಲಿ. ಹಾಗೇಯೇ ತಮ್ಮವರ ಹಕ್ಕನ್ನು ನ್ಯಾಯದ ಹೋರಾಟದ ಮೂಲಕ ರಕ್ಷಿಸಿದ ಸಂಘಟನೆಯ ಮುಖ್ಯಸ್ಥರು ಮತ್ತು ವಕೀಲರನ್ನು ಅಭಿನಂದಿಸಿ, ಗೌರವಿಸಿ.

- ಮಾತಂಡ ಎಂ. ಮೊಣ್ಣಪ್ಪ, ಅಧ್ಯಕ್ಷರು, ಅಖಿಲ ಕೊಡವ ಸಮಾಜ