ಮಡಿಕೇರಿ, ಸೆ. ೨೬: ನೆಹರು ಯುವ ಕೇಂದ್ರ ಮತ್ತು ಚೆಂಬುವಿನ ಭಗವಾನ್ ಸಂಘ ಸಹಯೋಗದಲ್ಲಿ ಆಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಮಟ್ಟದ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ ಸಂಪಾಜೆ ಗ್ರಾಮದಿಂದ ಪ್ರಾರಂಭವಾಗಿ, ೭ ಕಿ.ಮೀ. ದೂರ ಕ್ರಮಿಸಿ ಚೆಂಬು ಗ್ರಾಮದಲ್ಲಿ ಕೊನೆಗೊಂಡಿತು.

ಸುಮಾರು ೧೭೫ ಯುವಕ- ಯುವತಿಯರು ಓಟದಲ್ಲಿ ಭಾಗವಹಿಸಿದ್ದರು. ಬಾಲಂಬಿಯಲ್ಲಿ ಪಯಸ್ವಿನಿ ಸಹಕಾರ ಸಂಘದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಓಟ ಪೂರೈಸಿದ ಓಟಗಾರರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ನೆಹರು ಯುವ ಕೇಂದ್ರ ಅಧಿಕಾರಿ ಸಿದ್ದರಾಮಪ್ಪ ಮಾತನಾಡಿದರು. ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸುಬ್ರಹ್ಮಣ್ಯ ಉಪಾಧ್ಯಾಯ, ಸಂಘದ ಅಧ್ಯಕ್ಷ ದಿನೇಶ್ ಸಣ್ಣಮನೆ, ಗೌರವಾಧ್ಯಕ್ಷ ಅನಂತ ಊರುಬೈಲ್, ಸಂಪಾಜೆ ಆಸ್ಪತ್ರೆ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಮತ್ತು ಗ್ರಾ.ಪಂ. ಮಾಜಿ ಅಧ್ಯಕ್ಷ ಆದಂ ಕುಂಞ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗುವ ಮೂಲಕ ಅಚರಿಸಲಾಯಿತು. ಹಾಗೆಯೇ ಚೆಂಬು ಗ್ರಾಮದಲ್ಲಿ ನಿನ್ನೆ ನಿಧನರಾದ ಮಾಜಿ ಗ್ರಾ.ಪಂ. ಅಧ್ಯಕ್ಷ ಎಸ್.ವಿ. ಕೃಷ್ಣಪ್ಪ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.