ಸೋಮವಾರಪೇಟೆ, ಸೆ. ೨೬: ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗ ಹಾಗೂ ದೇವಿ ಪ್ರಜ್ವಲ್ ಪ್ರಾಯೋಜಕತ್ವದಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯನ್ನು, ಪಾರಿವಾಳಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಕವಿಗಳು ಉದ್ಘಾಟಿಸಿದರು.

ಕನ್ನಡ ಭಾಷಾ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ, ಹಿರಿ ಕಿರಿಯ ಕವಿಗಳನ್ನು ಗುರುತಿಸಿ ಅವರೊಳಗಿನ ‘ಕವಿ’ಯನ್ನು ಪ್ರೋತ್ಸಾಹಿಸಿಕೊಂಡು, ಬರವಣಿಗೆಗೆ ಸ್ಫೂರ್ತಿ ತುಂಬುತ್ತಿರುವ ಸೃಷ್ಟಿಯ ಚಿಗುರು ಕವಿ ಬಳಗದ ಕವಿಗೋಷ್ಠಿ ಯಲ್ಲಿ ೨೬ ಮಂದಿ ಭಾಗವಹಿಸಿ ಕವನ ವಾಚನ ಮಾಡಿದರು.

ಕವಿಗೋಷ್ಠಿಯನ್ನು ಹಿರಿಯ ಕಿರಿಯ ಕವಿಗಳೊಂದಿಗೆ ಪ.ಪಂ. ಪ್ರಭಾರ ಅಧ್ಯಕ್ಷ ಸಂಜೀವ, ಪತ್ರಕರ್ತರ ಸಂಘದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ. ಮುರಳೀಧರ್, ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಅವರುಗಳು ಶಾಂತಿಯ ಸಂಕೇತವಾದ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು.

ಬಹುತೇಕ ಕವಿಗಳು ಪ್ರಕೃತಿ, ಬದುಕು, ಗುರು, ನೆಲ ಜಲ, ಕನ್ನಡ ಭಾಷೆ-ಸಾಹಿತ್ಯ, ಕೊರೊನಾ ಸಂಕಷ್ಟ, ಕೊರೊನಾ ಕಲಿಸಿದ ಪಾಠಗಳು, ಮನುಷ್ಯನ ಮೃಗತೀಯತೆ, ಅಹಂಕಾರದ ಬಗ್ಗೆ ಕವನಗಳನ್ನು ರಚಿಸಿ ವಾಚಿಸಿದರು.

ಹಿರಿಯ ಕವಯತ್ರಿ ಜಲಜಾ ಶೇಖರ್ ಅವರು ಶಿಕ್ಷಕ, ಸುಶೀಲಾ ಹಾನಗಲ್ ಅವರು ಎತ್ತ ಸಾಗುತ್ತಿದೆ ಬದುಕು, ಎಲಿಜಬೆತ್ ಲೋಬೋ ಅವರು ಹುಳಿ ಹಿಂಡಿದAತೆ, ರವಿ ಅವರು ಆಸರೆ, ಶರ್ಮಿಳಾ ರಮೇಶ್- ಸಿರಿದೇವಿಗೆ ಹಿಂಗಾರದ ಸಿಂಗಾರ, ಆಶಾ ಪುಟ್ಟರಾಜು- ಪ್ರಕೃತಿಯ ಸಿರಿ, ಅಶ್ವಿನಿ ಕೃಷ್ಣಕಾಂತ್- ಮಾತು, ಲೋಹಿತ್-ಕಾಣದ ಕ್ರೂರಿ ಕೊರೊನಾ, ಪುಟ್ಟಣ್ಣ ಆಚಾರ್ಯ- ನಾನು ನನ್ನದೇನಿಗೆ ಧರೆಯಲ್ಲಿ, ರಾಚು ಶ್ಯಾಂ ಅವರು ಪ್ರತಿಭೆಗಳು, ನ.ಲ. ವಿಜಯ ಅವರು ಹಸಿ ಮಾಂಸ ಮತ್ತು ರಣಹದ್ದುಗಳು ಶೀರ್ಷಿಕೆಯ ಕವನಗಳನ್ನು ವಾಚಿಸಿದರು.

ವಸಂತಿ ರವೀಂದ್ರ-ಅಮ್ಮ, ದೀಪಿಕಾ ಸುದರ್ಶನ್- ಪ್ರಕೃತಿ ಮಡಿಲಿನ ರೈತಾಪಿ ಜೀವನ, ಪೂಜಾ- ಕೂಡಿಟ್ಟ ಹಾರ, ಜಲಜಾ ಸೋಮೇಶ್- ಗೆಲುವಿನ ಸಾಧನೆ, ಸುಚೇತನ್ ಸ್ವರೂಪ್- ನೀನು ಬದಲಾಗು, ರಾಜೇಶ್- ನಮ್ಮ ಶಿಕ್ಷಕರು, ಮಹೇಶ್ ತಿಮ್ಮಯ್ಯ-ಸೃಷ್ಟಿಯ ಸೊಬಗು, ನಿಸರ್ಗ ಅವರು ಕೊರೊನಾ, ಫಾತಿಮಾ ಜುಬೇದ- ನಾನು ಎಂಬುದ ಮರೆತು, ಸೈಮನ್- ಬೆಟ್ಟದ ಹೂವು, ಸುಮ್- ಚಪ್ಪಲಿ ಸವೆತ, ಪುರುಷೋತ್ತಮ್- ಮನಸ್ಸು, ರಾಣಿ ರವೀಂದ್ರ- ಮಾಸಿದ ಬಟ್ಟೆಗಳು, ರೇಣುಕಾ ಅವರು ಪ್ರಕೃತಿ ಪೂಜೆ ಶೀರ್ಷಿಕೆಯ ಕವನಗಳನ್ನು ವಾಚಿಸಿ ಕೇಳುಗರನ್ನು ಸೆಳೆದರು.

ಕವನಗಳು ಮನಸ್ಸಿನ ಭಾವನೆಗಳಿಗೆ ಹಿಡಿದ ಕೈಗನ್ನಡಿ ಯಾಗಿದೆ. ಕವಿ ತನ್ನ ಕಲ್ಪನೆಗಳಿಗೆ ಅಕ್ಷರ ರೂಪ ನೀಡಿದರೆ ಕವನಗಳು ಹುಟ್ಟುತ್ತವೆ. ತೀಕ್ಷ÷್ಣ, ಮಧುರ, ಚಿಂತನಾಯೋಗ್ಯ ಕವನಗಳು ಮೂಡಿ ಬರಬೇಕು. ಸಮಾಜದ ಅಂಕುಡೊAಕು ಗಳನ್ನು ತಿದ್ದುವಲ್ಲಿಯೂ ಕವನಗಳು ಪಾತ್ರವಹಿಸುತ್ತವೆ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಯತ್ರಿ ಅನಿತಾ ಶುಭಾಕರ್ ಅಭಿಪ್ರಾಯಿಸಿದರು. ವೇದಿಕೆಯಲ್ಲಿ ಗೌರಮ್ಮ ದತ್ತಿನಿಧಿ ಪುರಸ್ಕೃತೆ ಜಲಾ ಕಾಳಪ್ಪ, ಪ.ಪಂ. ಮಾಜೀ ಅಧ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್ ಅವರುಗಳು ಉಪಸ್ಥಿತರಿದ್ದರು. ಶರ್ಮಿಳಾ ರಮೇಶ್, ರಾಚು ಶ್ಯಾಂ, ದೀಪಿಕಾ ಸುದರ್ಶನ್, ರಾಣಿ ರವೀಂದ್ರ, ಆಶಾ ಪುಟ್ಟರಾಜು ಅವರುಗಳು ಕವಿಗೋಷ್ಠಿ ನಿರ್ವಹಿಸಿದರು.