ಕುಶಾಲನಗರ, ಸೆ. ೨೬: ನೂತನವಾಗಿ ರಚನೆಯಾಗಿರುವ ಕುಶಾಲನಗರ ತಾಲೂಕು ಕೇಂದ್ರದ ಪಟ್ಟಣದ ಅಭಿವೃದ್ಧಿಗೆ ಅಂದಾಜು ರೂ. ೭ ಕೋಟಿ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿದ್ದು ಎಸ್.ಎಫ್.ಸಿ ಯೋಜನೆಯಡಿಯಲ್ಲಿ ಸರ್ಕಾರದಿಂದ ಅನುದಾನ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಭೇಟಿ ಮಾಡಿ ರೂ. ೭ ಕೋಟಿ ವೆಚ್ಚದ ಮೂಲಭೂತ ಸೌಕರ್ಯ ಕಾಮಗಾರಿಗಳ ಕುರಿತು ಪಟ್ಟಿ ಸಿದ್ಧಗೊಳಿಸಿ ಮಡಿಕೇರಿ ವಿಧಾನಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ತಕ್ಷಣ ಅನುದಾನ ಕಲ್ಪಿಸುವುದಾಗಿ ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದಾರೆ .

ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳ ಅಧಿಕೃತ ಕಚೇರಿಗೆ ತೆರಳಿ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಬಿಜೆಪಿ ಪಕ್ಷದ ಮುಖಂಡರು ಮನವಿ ಪತ್ರ ಸಲ್ಲಿಸಿ ಕಳೆದ ಮೂರು ವಷÀðಗಳಿಂದ ಕಾವೇರಿ ನದಿಯಿಂದ ಉಂಟಾದ ಪ್ರವಾಹದಿಂದ ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳ ರಸ್ತೆಗಳು ಮತ್ತು ಚರಂಡಿಗಳು ಹಾಳಾಗಿದ್ದು, ಇದೀಗ ನೂತನ ತಾಲೂಕು ರಚನೆಯ ಹೊಸ್ತಿಲಲ್ಲಿ ಪಟ್ಟಣ ೧೩ ರಿಂದ ೧೬ ವಾರ್ಡ್ಗಳಿಗೆ ವ್ಯಾಪಿಸಿವೆ. ಮುಖ್ಯವಾಗಿ ರಸ್ತೆಗಳ ಅಭಿವೃದ್ಧಿಗೆ ರೂ. ೩.೫೦ ಕೋಟಿ, ವಿವಿಧ ಬಡಾವಣೆಗಳ ಚರಂಡಿ ಅಭಿವೃದ್ಧಿಗೆ ರೂ. ೩.೫೦ ಕೋಟಿ ವೆಚ್ಚದ ಕರಡು ವರದಿ ತಯಾರಿಸಿ ನಿಯೋಗ ಮೂಲಕ ಮನವಿ ನೀಡಲಾಗಿದ್ದು, ಅಭಿವೃದ್ಧಿ ಹೊಂದಿದಲ್ಲಿ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕುಶಾಲನಗರ ಮಡಿಕೇರಿ ನಡುವಿನ ರಾಷ್ಟಿçÃಯ ಹೆದ್ದಾರಿ ಬಳಿಯ ಆಕರ್ಷಕ ತಾವರೆಕೆರೆಯನ್ನು ಅಭಿವೃದ್ಧಿಪಡಿಸಲು ಕ್ರಮವಹಿಸ ಲಾಗುವುದೆಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭರವಸೆ ನೀಡಿದ್ದಾರೆ.

ಸಚಿವ ಆನಂದ್ ಸಿಂಗ್ ಅವರನ್ನು ಕುಶಾಲನಗರ ಹೊರವಲಯದಲ್ಲಿರುವ ತಾವರೆಕೆರೆ ಅಭಿವೃದ್ಧಿ ಮಾಡುವಂತೆ ಮನವಿ ಸಲ್ಲಿಸಿದ್ದು, ತಕ್ಷಣ ಸ್ಪಂದಿಸಿ ಕೆರೆಯ ಸುತ್ತಲು ಕಲ್ಲಿನ ಕಾಂಪೌAಡ್, ಗಿಡ ಮರಗಳನ್ನು ನೆಟ್ಟು ಉದ್ಯಾನವನ, ವಾಯುವಿಹಾರ ತೆರಳುವವರಿಗೆ ಇಂಟರ್‌ಲಾಕ್ ಅಳವಡಿಸಿ ಪಾದಚಾರಿ ಮಾರ್ಗ, ಬೆಂಚಿನ ವ್ಯವಸ್ಥೆ ಮಾಡಲಾಗುವುದು. ಆರಂಭಿಕ ಕಾಮಗಾರಿಗಳಿಗೆ ರೂ. ೭೫ ಲಕ್ಷ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ನಿಯೋಗದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಸದಸ್ಯರಾದ ಕೆ.ಜಿ. ಮನು, ಅಮೃತ್ ರಾಜ್, ಎಂ.ವಿ. ನಾರಾಯಣ್, ಉಮಾಶಂಕರ್ ಮತ್ತು ಪಕ್ಷದ ಪ್ರಮುಖರು ಇದ್ದರು.

-ಚಂದ್ರಮೋಹನ್