ಗುಡ್ಡೆಹೊಸೂರು ಸೆ. ೨೬: ಗುಡ್ಡೆಹೊಸೂರು ಶಕ್ತಿ ಕೇಂದ್ರ ವ್ಯಾಪ್ತಿಯ ಓ.ಬಿ.ಸಿ. ಮೋರ್ಚಾದ ರಚನೆ ಮತ್ತು ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಓ.ಬಿ.ಸಿ. ಮೋರ್ಚಾದ ಅಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಉಪಾಧ್ಯಕ್ಷರಾದ ಸುಮೇಶ್, ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ಮುಂತಾದವರು ಹಾಜರಿದ್ದರು.

ಗುಡ್ಡೆಹೊಸೂರು ಶಕ್ತಿ ಕೇಂದ್ರದ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿ ಅಂಬಾಡಿ ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಪುಷ್ಪನಾಗೇಶ್, ಶಕ್ತಿ ಕೇಂದ್ರದ ಅಧ್ಯಕ್ಷ ಕುಡೆಕ್ಕಲ್ ನಿತ್ಯಾನಂದ, ಮಾದಪಟ್ಟಣ ವ್ಯಾಪ್ತಿಯ ಅಧ್ಯಕ್ಷ ಪ್ರವೀಣ್, ಗ್ರಾ.ಪಂ. ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋಧ, ಮೇರಿ ಅನ್ಬುದಾಸ್, ಜಿ.ಎಂ. ಸಲೀ ಹಾಗೂ ಗ್ರಾ.ಪಂ. ಸದಸ್ಯರು ಮುಂತಾದವರು ಹಾಜರಿದ್ದರು.